Showing 20 of 2478 posts • Page 15 of 124
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಮತ್ತೆ ಕ್ರಮವಾಗಿ ಲೀಟರ್ಗೆ 2.61 ಮತ್ತು 2.71 ರೂ. ಹೆಚ್ಚಿಸಲಾಗಿದ್ದು, ಇದು ದೇಶಾದ್ಯಂತ ಇಂಧನ ಬೆಲೆಯಲ್ಲಿ ಕೇಂದ್ರ ಸರ್ಕಾರ ೧೧ ದಿನಗಳಲ್ಲಿ ನಾಲ್ಕನೇ ಏರಿಕೆ ಮಾಡಿದೆ.
ತಮಿಳುನಾಡಿನ ಇತ್ತೀಚಿನ ರಾಜಕೀಯ ಬದಲಾವಣೆಗಳ ಬೆನ್ನಲ್ಲೇ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ವಾಗ್ದಾಳಿ ತೀವ್ರಗೊಂಡಿದೆ.
ಆಫ್ರಿಕಾದ ಕೆಲವು ಭಾಗಗಳಲ್ಲಿ ಎಬೋಲಾ ವೈರಸ್ ಭೀತಿ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ತನ್ನ ನಾಗರಿಕರಿಗೆ ತುರ್ತು ಪ್ರಯಾಣ ಮುನ್ನೆಚ್ಚರಿಕೆಯನ್ನು ಹೊರಡಿಸಿದೆ.
ನದಿಯಲ್ಲಿ ಕಪ್ಪೆ ಚಿಪ್ಪು (ಮರಕಲ) ತೆಗೆಯಲು ಇಳಿದಿದ್ದ ಒಂದೇ ಗ್ರಾಮದ 10 ಮಂದಿ ನೀರಿನಲ್ಲಿ ಮುಳುಗಿ ದುರ್ಮರಣಕ್ಕೀಡಾಗಿದ್ದಾರೆ. ಘಟನೆಯಲ್ಲಿ ಇನ್ನು ಮೂವರು ನದಿಯ ನೀರಿನಲ್ಲಿ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಭಟ್ಕಳ ತಾಲೂಕಿನ ವೆಂಕಟಾಪುರ ನದಿಯಲ್ಲಿ ಇಂದು ನಡೆದಿದೆ.
ಶಬರಿಮಲೆ ಚಿನ್ನ ನಷ್ಟ ಪ್ರಕರಣದಲ್ಲಿ ಭಾಗಿಯಾದ ಯಾರನ್ನೂ, ಯಾವುದೇ ಪಕ್ಷವಾದರೂ ಬಿಡುವುದಿಲ್ಲ ಎಂದು ಕೇರಳ ದೇವಸ್ವಂ ಸಚಿವ ಕೆ.ಮುರಳೀಧರನ್ ರವಿವಾರ ಹೇಳಿದ್ದಾರೆ.
ಮುಸ್ಲಿಂ ಸಮುದಾಯದ ಸಮಸ್ಯೆಗಳನ್ನು ‘ಅಲ್ಪಸಂಖ್ಯಾತ’ ಎಂಬ ಸಾಮಾನ್ಯ ಪದದಲ್ಲಿ ಉಲ್ಲೇಖಿಸುವ ಬದಲು, ‘ಮುಸ್ಲಿಂ’ ಸಮುದಾಯದ ಸಮಸ್ಯೆಗಳೆಂದು ಸ್ಪಷ್ಟವಾಗಿ ಪ್ರಸ್ತಾಪಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಕ್ಷದ ಮುಸ್ಲಿಂ ನಾಯಕರಿಗೆ ಸೂಚನೆ ನೀಡಿದ್ದಾರೆ.
ತೆಲಂಗಾಣದಲ್ಲಿ ಜನರು ಬಿಸಿಲಿನ ತಾಪಕ್ಕೆ ತತ್ತರಿಸಿ ಹೋಗಿದ್ದಾರೆ. ಶನಿವಾರ ಒಂದೇ ದಿನ ರಾಜ್ಯದ ವಿವಿಧೆಡೆ 51 ಜನರು ಸಾವನ್ನಪ್ಪಿದ್ದಾರೆ. ವಾರಂಗಲ್ ಜಿಲ್ಲೆಯಲ್ಲಿ ಅತಿ ಹೆಚ್ಚು, 23 ಜನರು ಸಾವನ್ನಪ್ಪಿದ್ದಾರೆ.
ಕೊಟ್ಟಿಯೂರು ಶಿವ ಕ್ಷೇತ್ರದ ವೈಶಾಖ ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದ್ದು, ಭಕ್ತರಿಗೆ ದೇವರ ದರ್ಶನ ಮೇ 30ರಿಂದ ಶುರುವಾಗಲಿದೆ.
ಕುಡಿದ ಮತ್ತಿನಲ್ಲಿ ಇಬ್ಬರು ಯುವಕರು ಟ್ರಾಫಿಕ್ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ನಡೆದಿದೆ.
10 ದಿನಗಳಲ್ಲಿ ಮೂರನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ.
ಬಕ್ರೀದ್ ಹಬ್ಬದ ಮುನ್ನ ದೆಹಲಿ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಬಕ್ರೀದ್ ಹಬ್ಬದಂದು ಹಸುಗಳು, ಕರುಗಳು, ಒಂಟೆಗಳನ್ನು ಬಲಿ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಉಲ್ಲಂಘಿಸುವವರ ವಿರುದ್ಧ ಪೂರ್ವ ಸೂಚನೆ ಇಲ್ಲದೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ.
ಭಾರತೀಯ ಸೇನೆ ಮತ್ತು ಅರೆಸೈನಿಕ ಪಡೆಗಳ ಚಲನವಲನಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನದ ಹ್ಯಾಂಡ್ಲರ್ಗಳೊಂದಿಗೆ ಹಂಚಿಕೊಂಡಿದ್ದ ಆರೋಪದಡಿ ಒಬ್ಬ ವ್ಯಕ್ತಿಯನ್ನು ಪಂಜಾಬ್ನ ಪಠಾಣ್ಕೋಟ್ನ ಪೊಲೀಸರು ಬಂಧಿಸಿದ್ದಾರೆ.
ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಜಾನುವಾರುಗಳ ಹತ್ಯೆಯನ್ನು ನಿಯಂತ್ರಿಸಲು ಪಶ್ಚಿಮ ಬಂಗಾಳ ಸರ್ಕಾರ ಜಾರಿಗೆ ತಂದಿದ್ದ ಕಠಿಣ ನಿಯಮಗಳಿಗೆ ಕೊಲ್ಕತ್ತಾ ಹೈಕೋರ್ಟ್ ಸಂಪೂರ್ಣ ಕಾನೂನು ಮಾನ್ಯತೆ ನೀಡಿದೆ.
ದೇವಸ್ಥಾನಕ್ಕೆ ಹೊರಟಿದ್ದ ಭಕ್ತರ ಆಟೋರಿಕ್ಷಾಕ್ಕೆ ಖಾಸಗಿ ಬಸ್ಸೊಂದು ಹಿಂಬದಿಯಿಂದ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ ಆರು ಮಂದಿ ಸಾವನ್ನಪ್ಪಿರುವ ಘಟನೆ ಗಂಜಾಂ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಮದರಸಾ ಶಿಕ್ಷಣ ಇಲಾಖೆಯ ಅಡಿಯಲ್ಲಿರುವ ಎಲ್ಲಾ ಮದರಸಾಗಳಲ್ಲಿ ‘ವಂದೇ ಮಾತರಂ’ ಹಾಡುವುದನ್ನು ಪಶ್ಚಿಮ ಬಂಗಾಳ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಕಡ್ಡಾಯಗೊಳಿಸಿದೆ.
ಐಐಎಂಟಿ ವಿಶ್ವವಿದ್ಯಾಲಯದ ಮಹಿಳೆಯರ ಹಾಸ್ಟೆಲ್ನ ಟೆರೇಸ್ ಮೇಲಿಂದ ಬಿದ್ದು ಎಂಬಿಎ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ.
ಭೀಕರ ಅಗ್ನಿ ದುರಂತದಲ್ಲಿ ಓರ್ವ ಅಗ್ನಿಶಾಮಕ ಸಿಬ್ಬಂದಿ ಹಾಗೂ ಓರ್ವ ಭದ್ರತಾ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಠಾಣೆ ರೈಲ್ವೆ ನಿಲ್ದಾಣದ ಸಮೀಪವಿರುವ ಗಾಮ್ದೇವಿ ಮಾರುಕಟ್ಟೆ ಬಳಿ ಗುರುವಾರ ಮುಂಜಾನೆ ಸಂಭವಿಸಿದೆ.
ಲಿಫ್ಟ್ ಒಳಗೆ ಸಿಲುಕಿ ಏಳು ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ಪುಣೆಯ ಸಿಂಹಗಡ್ ರಸ್ತೆ ಪ್ರದೇಶದ ವಸತಿ ಕಟ್ಟಡವೊಂದರಲ್ಲಿ ನಡೆದಿದೆ.
ಭಾರತದ ಅಧಿಕಾರಿಯೊಬ್ಬರು ಬಾಂಗ್ಲಾದೇಶದ ಚಟ್ಟೋಗ್ರಾಮ್ನಲ್ಲಿರುವ ಭಾರತದ ಸಹಾಯಕ ಹೈಕಮಿಷನ್ ಕಚೇರಿ ಆವರಣದಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ನಮಾಜ್ ಮಾಡೋಕೆ ಜಾಗ ಇಲ್ಲ ಅಂದ್ರೆ ಜನಸಂಖ್ಯೆ ಕಮ್ಮಿ ಮಾಡ್ಕೊಳ್ಳಿ, ರೋಡಲ್ಲಿ ನಮಾಜ್ ಮಾಡ್ಬೇಡಿ. ನೀವು ಒಪ್ಪಿದರೆ ಪರವಾಗಿಲ್ಲ, ಒಪ್ಪದಿದ್ದರೆ ನಮಗೆ ಬೇರೆ ದಾರಿ ಗೊತ್ತಿದೆ ಎಂದು ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದರು.