ಲಕ್ನೋ: ನಮಾಜ್‌ ಮಾಡೋಕೆ ಜಾಗ ಇಲ್ಲ ಅಂದ್ರೆ ಜನಸಂಖ್ಯೆ ಕಮ್ಮಿ ಮಾಡ್ಕೊಳ್ಳಿ, ರೋಡಲ್ಲಿ ನಮಾಜ್‌ ಮಾಡ್ಬೇಡಿ. ನೀವು ಒಪ್ಪಿದರೆ ಪರವಾಗಿಲ್ಲ, ಒಪ್ಪದಿದ್ದರೆ ನಮಗೆ ಬೇರೆ ದಾರಿ ಗೊತ್ತಿದೆ ಎಂದು ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದರು.

ಅವರು ಲಕ್ನೋದಲ್ಲಿ ಹಿಂದಿ ಪತ್ರಿಕೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮಾಜ್ ಅಥವಾ ಯಾವುದೇ ಇತರ ಧಾರ್ಮಿಕ ಆಚರಣೆಯನ್ನು ಮಾಡಲು ಸಂಚಾರವನ್ನು ನಿರ್ಬಂಧಿಸುವುದನ್ನು ತಮ್ಮ ಸರ್ಕಾರ ಅನುಮತಿಸುವುದಿಲ್ಲ ಎಂದು ಒತ್ತಿ ಹೇಳಿದರು. ರಸ್ತೆಗಳು ಸಾರ್ವಜನಿಕರು ಪ್ರಯಾಣಿಸಲು ಮಾತ್ರ, ಅಲ್ಲಿ ಸಂಚಾರಕ್ಕೆ ಅಡ್ಡಿಪಡಿಸುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದರು.

View this post on Instagram

A post shared by News Karnataka (@newskarnataka)