Showing 20 of 404 posts • Page 2 of 21
ಹಸಮಣೆ ಏರಬೇಕಿದ್ದ ವರನಿಗೆ ದುಷ್ಕರ್ಮಿಗಳು ಚಾಕು ಇರಿದ ಹಿನ್ನೆಲೆ ನಿಶ್ಚಯವಾಗಿದ್ದ ಮದುವೆ ನಿಂತು ಹೋಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.
ಆಹಾರವನ್ನರಸಿ ಕಾಡಿನಿಂದ ನಾಡಿಗೆ ಬಂದು ಮನೆಯೊಳಗೆ ನುಗ್ಗಿದ್ದ ಕಡವೆಯನ್ನ ರಕ್ಷಣೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ಕಾಡಿಗೆ ಸ್ಥಳಾಂತರಿಸಿದ ಘಟನೆ ಮಂಗಳವಾರ ನಡೆದಿದೆ.
ತಮಿಳುನಾಡಿನ ಹಾಸನೂರು- ಗೇರುಮಾಳಂ ನಡುವೆ ಚಿರತೆ ಓಡಾಟ ಕಂಡು ಬಂದಿದ್ದು ದ್ವಿಚಕ್ರ ವಾಹನ ಸವಾರರು ಜಾಗರೂಕರಾಗಿರಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಸುಮಾರು 30 ಪ್ರಯಾಣಿಕರಿದ್ದ ಬಸ್ಸನ್ನು ಕಾಡಾನೆಯೊಂದು ಹಿಮ್ಮೆಟ್ಟಿಸಿದ ಘಟನೆ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಹಾಸನೂರು- ಗೇರುಮಾಳ ನಡುವೆ ನಡೆದಿದೆ.
ಪಟ್ಟಣದ ಹೊಸೂರು ದುಂದಾಸನಪುರ ರಸ್ತೆಯಲ್ಲಿರುವ ಸರ್ಕಾರಿ ಉಪಕರಣಗಾರ ಮತ್ತು ತರಭೇತಿ ಕೇಂದ್ರದಲ್ಲಿ ನಾಲ್ಕು ವರ್ಷದ ಡಿಪ್ಲೊಮಾ ಕೋರ್ಸ್ ಸಹಿತ ,ಅಲ್ಪಾವಧಿ ಮತ್ತು ಸರ್ಕಾರಿ ಪ್ರಾಯೋಜಿತ ಉಚಿತ ಅಲ್ಪಾವಧಿ ಕೋರ್ಸ್ಗಳು ಹಾಗೂ ಕೈಗಾರಿಕಾ ತರಬೇತಿ ಕೋರ್ಸ್ಗಳಿದ್ದು ಯುವ ಸಮುದಾಯ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಾಂಶುಪಾಲ ವಿನಯ್. ಎಸ್ . ಸಲಹೆ ನೀಡಿದರು.
ಮಲೆ ಮಹದೇಶ್ವರ ವನ್ಯಧಾಮದಲ್ಲಿ ದೈತ್ಯ ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಗೆ ತಲೆ ನೋವಾಗಿದ್ದ ಮಿನಿ ವೀರಪ್ಪನ್ ಗೋವಿಂದನ ಬಂಧನವಾಗಿದೆ.
ಮತ್ತೊಂದು ಹುಲಿ ಚಾಮರಾಜನಗರದಲ್ಲಿ ಸೆರೆಯಾಗಿದೆ. ಅರವಳಿಕೆ ಕೊಟ್ಟು ಅರಣ್ಯ ಇಲಾಖೆ ಹುಲಿಯನ್ನು ಸೆರೆಹಿಡಿದಿದೆ. ಚಾಮರಾಜನಗರ ತಾಲೂಕಿನ ಕಲ್ಪುರ ಭಾಗದಲ್ಲಿ ಸಂಚಾರ ಮಾಡ್ತಿದ್ದ ಹುಲಿ ಇದೀಗ ಸೆರೆಯಾಗಿದೆ.
ಹುಲಿ ದಾಳಿಯಿಂದ ಅರಣ್ಯ ಇಲಾಖೆಯ ವಾಚರ್ ಸಾವನ್ನಪ್ಪಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ನಡೆದಿದೆ.
ಗಡಿ ಜಿಲ್ಲೆಯಲ್ಲಿ ಕಾಡು ನಾಡು ಎರಡು ಕಡೆಯೂ ಹುಲಿಯದ್ದೆ ದರ್ಬಾರ್ ನಡೆಯುತ್ತಿದ್ದು, ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಹುಲಿ ದರ್ಶನವಾಗಿದೆ.
ನಾಯಿ ಕಡಿತದಿಂದ ಮೃತಪಟ್ಟಿದ್ದ ಕೋತಿಯ ಅಂತ್ಯ ಸಂಸ್ಕಾರವನ್ನು ಮಾಡಿ ಮಾನವೀಯತೆಯನ್ನು ಯುವಕರು ಮೆರೆದರು.
ಹನೂರು ತಾಲ್ಲೂಕಿನಲ್ಲಿ ಲೊಕ್ಕನಹಳ್ಳಿ ಗ್ರಾಮ ಪಂಚಾಯಿತಿಯ, ಶಿರಗೋಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡ ಇವಾಗ ಕುಡುಕರ ತಾಣವಾಗಿದೆ.
ನಂಜೇದೇವನಪುರ ಗ್ರಾಮದಲ್ಲಿ 5 ಹುಲಿ ಪ್ರತ್ಯಕ್ಷ ಪ್ರಕರಣದಲ್ಲಿ ಡ್ರೋನ್ ಬಳಸಿ ಹುಲಿ ಪತ್ತೆಗೆ ಕಾರ್ಯಾಚರಣೆ ನಡೆಸಲಾಗಿದೆ.
ಬೆಳ್ಳಂಬೆಳಗ್ಗೆ ಸಫಾರಿಗೆ ಹೋದ ಪ್ರವಾಸಿಗರಿಗೆ ಹುಲಿ ದರ್ಶನವಾಗಿದೆ. ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತ ಪ್ರದೇಶದ ಕೆ ಗುಡಿ ಸಫಾರಿ ವೇಳೆ ತೀರಾ ಅಪರೂಪಕ್ಕೆ ಹುಲಿ ಸಿಕ್ಕಿದೆ.
ಕೊಟ್ಟಿಗೆಗೆ ನುಗ್ಗಿ ಚಿರತೆ ದಾಳಿ ನಡೆಸಿ ಹಸುವನ್ನು ಕೊಂದು ಹಾಕಿದ ಘಟನೆ ಯಳಂದೂರು ತಾಲೂಕಿನ ಚಾಮಲಾಪುರ ಗ್ರಾಮದಲ್ಲಿ ನಡೆದಿದೆ.
ಜಮೀನಿನಲ್ಲಿ ಗಾಂಜಾ ಬೆಳೆದಿದ್ದು, ಓರ್ವನನ್ನು ಬಂಧಿಸಿರುವ ಘಟನೆ ಹನೂರು ತಾಲ್ಲೂಕಿನ ದೊಮ್ಮನಗದ್ದೆ ಗ್ರಾಮದಲ್ಲಿ ನಡೆದಿದೆ.
ಮತ್ತೆ ಗಡಿ ನಾಡು ಚಾಮರಾಜನಗರದಲ್ಲಿ ನಟೋರಿಯಸ್ ಕೇರಳಿಯನ್ ಗ್ಯಾಂಗ್ ಆಕ್ಟೀವ್ ಆಗಿದೆ. ಚಿನ್ನದ ವ್ಯಾಪಾರಿಗಳೇ ಈ ನಟೋರಿಯಸ್ ಗ್ಯಾಂಗ್ ನ ಟಾರ್ಗೆಟ್ ಆಗಿದ್ದಾರೆ.
ಕಲ್ಲಹಳ್ಳಿ ವ್ಯಾಪ್ತಿಯಲ್ಲಿ ರೈತರ ನಿದ್ದೆಗೆಡಿಸಿದ್ದ ವ್ಯಾಘ್ರ ಕೊನೆಗೂ ಬಂಧಿಯಾಗಿದೆ, ಭಾನುವಾರ ಬೆಳೆಗಿನ ಜಾವ ತಾಯಿ ಹುಲಿಯೊಟ್ಟಿಗೆ ಮೂರು ಮರಿಗಳನ್ನ ಸೆರೆಹಿಡಿದು ರಕ್ಷಿಸಿರುವ ಅರಣ್ಯ ಇಲಾಖೆ
ಜೇನು ನೋಣ ಕಡಿತದಿಂದ ಸಾಕಾನೆ ಅಡ್ಡಾದಿಡ್ಡಿ ಓಡಾಡಿದ ಘಟನೆ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿದೆ. ಹುಲಿ ಸೆರೆ ಕಾರ್ಯಾಚರಣೆಗಾಗಿ ಸಾಕಾನೆಯನ್ನು ಕರೆತರಲಾಗಿತ್ತು.
ಹರಿಯಾಣದಲ್ಲಿ ವೋಟ್ ಚೋರಿಯಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ರಾಗಾ ಪ್ಯಾಮಿಲಿಯೇ ಚೋರ್ ಕುಟುಂಬವಾಗಿದೆ ಎಂದು ಜರಿದರು.
ತಾಲ್ಲೂಕಿನ ಜ್ಯೋತಿಗೌಡನಪುರದಲ್ಲಿ ಈಚೆಗೆ ಅಂಬೇಡ್ಕರ್ ಹಾಗೂ ಬುದ್ಧನ ಮೂರ್ತಿಗಳನ್ನು ಭಗ್ನಗೊಳಿಸಿ ಫ್ಲೆಕ್ಸ್ ಹಾಗೂ ಭಾವಚಿತ್ರಗಳಿಗೆ ಹಾನಿ ಮಾಡಿದ್ದ ಆರೋಪಿ ಮಂಜುನಾಥ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.