ಗುಂಡ್ಲುಪೇಟೆ : ಪಟ್ಟಣದ ಹೊಸೂರು ದುಂದಾಸನಪುರ ರಸ್ತೆಯಲ್ಲಿರುವ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ನಾಲ್ಕು ವರ್ಷದ ಡಿಪ್ಲೊಮಾ ಕೋರ್ಸ್ ಸಹಿತ ,ಅಲ್ಪಾವಧಿ ಮತ್ತು ಸರ್ಕಾರಿ ಪ್ರಾಯೋಜಿತ ಉಚಿತ ಅಲ್ಪಾವಧಿ ಕೋರ್ಸ್ಗಳು ಹಾಗೂ ಕೈಗಾರಿಕಾ ತರಬೇತಿ ಕೋರ್ಸ್ಗಳಿದ್ದು ಯುವ ಸಮುದಾಯ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಾಂಶುಪಾಲ ವಿನಯ್. ಎಸ್ . ಸಲಹೆ ನೀಡಿದರು.

2007 ರಲ್ಲಿ ಆರಂಭಗೊಂಡ ಏಕೈಕ ಸರ್ಕಾರಿ ಉಪಕರಣಗಾರ ಹಾಗೂ ತರಬೇತಿ ಕೆಂದ್ರವಾಗಿದೆ ಇಲ್ಲಿ ಡಿಪ್ಲೋಮಾ ಇನ್ ಟೂಲ್ ಅಂಡ್ ದೈಮೇಕಿಂಗ್, ಮೆಕಾಟ್ರೋನಿಕ್ಸ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಕೋರ್ಸ್ಗಳಿದ್ದು ಉನ್ನತ ತರಭೇತಿ ನೀಡಲಾಗುವುದು ಎಂದು ಕಾಲೇಜು ಸಭಾಂಗಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

SSLC ಮುಗಿದ ನಂತರದ ದಿನಗಳಲ್ಲಿಯೂ ಸಹ ಆಸಕ್ತ ವಿದ್ಯಾರ್ಥಿಗಳಿಗೆ ಶುಲ್ಕವೂ ಕಡಿಮೆಯಿದ್ದು ದಾಖಲಾತಿಯ ಒಟ್ಟು ಮೊತ್ತವನ್ನ ಸುಲಭ ಕಂತುಗಳಾಗಿ ಪಾವತಿಸುವ ಅವಕಾಶವನ್ನ ಕಲ್ಪಿಸಲಾಗಿದೆ, ಹಾಗೆಯೇ ಗುಣಮಟ್ಟದ ತರಬೇತಿಯನ್ನ ನೀಡಲಾಗುತ್ತಿದೆ ಎಂದರು.
ನಾಲ್ಕು ವರ್ಷದ ಅವಧಿಗೆ ಡಿಪ್ಲೊಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್, ಮೆಕಾಟ್ರೋನಿಕ್ಸ್, ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ತರಬೇತಿ ನೀಡಲಾಗುತ್ತಿದ್ದು ಒಟ್ಟು 190 ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಅಲ್ಪಾವಧಿ ಕೋರ್ಸ್ಗಳು : ಟೂಲ್ ರೂಮ್ ಮಿಷನಿಸ್ಟ್, ಬೇಸಿಕ್ ಎಲೆಕ್ಟ್ರಿಕಲ್, ಸಿ ಎನ್ ಸಿ ಪ್ರೋಗ್ರಾಮಿಂಗ್, ಬೇಸಿಕ್ ಕಮ್ಯೂನಿಕೇಷನ್ ಸ್ಕಿಲ್, ಕ್ಯಾಡ್, ಬೇಸಿಕ್ ಕಂಪ್ಯೂಟರ್, ಸಿ ಎನ್ ಸಿ ಟರ್ನಿಂಗ್ ಮತ್ತು ಮಿಲ್ಲಿಂಗ್ ಸಹಿತ ಸರ್ಕಾರಿ ಪ್ರಾಯೋಜಿತ ಕೋರ್ಸ್ಗಳು ಸಹ ಲಭ್ಯವಿವೆ. ಇಂಟರ್ನ್ ಶಿಪ್ ವಿಭಾಗದಲ್ಲಿ ಕೈಗಾರಿಕೆ ತರಬೇತಿ ಕೋರ್ಸ್ಗಳು ಸಹ ದೊರೆಯಲಿವೆ ಎಂದು ಮಾಹಿತಿ ನೀಡಿದರು.

2007 ರಿಂದ ನಮ್ಮ ಕಾಲೇಜಿನಲ್ಲಿ ತರಬೇತಿ ಪಡೆದ ಸರಿಸುಮಾರು 850 ವಿದ್ಯಾರ್ಥಿಗಳು ನೌಕರಿ ಪಡೆದಿದ್ದು ಪ್ರತಿಷ್ಠಿತ ಕಂಪನಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ನಮ್ಮ ಕಾಲೇಜಿನಲ್ಲಿ ನೀಡುವ ನುರಿತ ತರಬೇತಿಯನ್ನ ಮನಗಂಡ ಬಹುದೊಡ್ಡ ಕಂಪನಿಗಳು ಆಕರ್ಷಕ ವೇತನ ನೀಡುವ ಭರವಸೆಯೊಂದಿಗೆ ತರಬೇತಿ ಪೂರ್ಣ ಅಭ್ಯರ್ಥಿಗಳ ನೇರ ನೇಮಕಾತಿಗೆ ಉತ್ಸುಕತೆ ತೋರುತ್ತಿವೆ, ಅಲ್ಲದೆ ನಮ್ಮಲ್ಲಿ ತರಬೇತಿ ಪಡೆದ ನೂರಕ್ಕೂ ಹೆಚ್ಚು ಮಂದಿ ಸ್ವಂತ ಕೈಗಾರಿಕೆ ಕ್ಷೇತ್ರದಲ್ಲಿ ಸಾಧನೆಗೈದಿದ್ದಾರೆ ಎಂದರು.