ಚಾಮರಾಜನಗರ : ಮತ್ತೆ ಗಡಿ ನಾಡು ಚಾಮರಾಜನಗರದಲ್ಲಿ ನಟೋರಿಯಸ್ ಕೇರಳಿಯನ್ ಗ್ಯಾಂಗ್  ಆಕ್ಟೀವ್ ಆಗಿದೆ. ಚಿನ್ನದ ವ್ಯಾಪಾರಿಗಳೇ ಈ ನಟೋರಿಯಸ್ ಗ್ಯಾಂಗ್ ನ ಟಾರ್ಗೆಟ್ ಆಗಿದ್ದಾರೆ.

ತಡರಾತ್ರಿ ಬಂಡೀಪುರ ಕಾಡಲ್ಲಿ ದರೋಡೆ  ನಡೆಯಿತು. ಕಾರನ್ನ ಅಡ್ಡಗಟ್ಟಿ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ನಗದು ಲೂಟಿ ಮಾಡಲಾಯಿತು. ಗುರುವಾರ ರಾತ್ರಿ ಮೂಲೆಹೊಳೆ ಮೂಲಕ ಕೇರಳಕ್ಕೆ  ಚಿನ್ನದ ಉದ್ಯಮಿ‌ ಹೊರಟ್ಟಿದ್ದರು.

ಮತ್ತೆ ಗಡಿ ನಾಡು ಚಾಮರಾಜನಗರದಲ್ಲಿ ನಟೋರಿಯಸ್ ಕೇರಳಿಯನ್ ಗ್ಯಾಂಗ್ ಆಕ್ಟೀವ್ ಆಗಿದೆ. ಚಿನ್ನದ ವ್ಯಾಪಾರಿಗಳೇ ಈ ನಟೋರಿಯಸ್ ಗ್ಯಾಂಗ್ ನ ಟಾರ್ಗೆಟ್ ಆಗಿದ್ದಾರೆ.

ಕೇರಳದಿಂದ ಫಾಲೋ ಮಾಡಿ ಬಂದು ಬಳಿಕ ವಾಪಸ್ಸು ಕೇರಳಕ್ಕೆ ತೆರಳುವಾಗ ಅಟ್ಯಾಕ್ ನಡೆದಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಕೇರಳಿಯನ್ ರಾಬರ್ಸ್ ಆಕ್ಟೀವ್ ಆಗಿದ್ದಾರೆ. ದೂರು ನೀಡಲು  ಉದ್ಯಮಿ ಮೀನಾ ಮೇಷ ಎಣಿಸುತ್ತಿದ್ದಾರೆ.

ನನ್ನ ಹೆಸರು ಮಾಧ್ಯಮದವರಿಗೆ ಲೀಕ್ ಆಗದಂತೆ ನೋಡಿ ಕೊಳ್ಳಿ ಎಂದು ಪೊಲೀಸರಿಗೆ ಮನವಿ ಮಾಡಲಾಗಿದೆ. ಪೊಲೀಸರು ಗದರಿದ ಬಳಿಕ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಆಗಮಿಸಿ ಉದ್ಯಮಿ ದೂರು ನೀಡಿದ್ದಾರೆ. ಸದ್ಯ ಚೆಕ್ ಪೋಸ್ಟ್ ಬಳಿ ಇರುವ ಸಿಸಿ ಕ್ಯಾಮರವನ್ನು  ಖಾಕಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಎಸ್ಪಿ ಡಾ.ಬಿ.ಟಿ. ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.