ಚಾಮರಾಜನಗರ : ಜೇನು ನೋಣ ಕಡಿತದಿಂದ ಸಾಕಾನೆ ಅಡ್ಡಾದಿಡ್ಡಿ ಓಡಾಡಿದ ಘಟನೆ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿದೆ.

ಹುಲಿ ಸೆರೆ ಕಾರ್ಯಾಚರಣೆಗಾಗಿ ಸಾಕಾನೆಯನ್ನು ಕರೆತರಲಾಗಿತ್ತು. ಗುಂಡ್ಲುಪೇಟೆ ಹೊರವಲಯದಲ್ಲಿ ಹುಲಿ ಕಾರ್ಯಾಚರಣೆಗೆ ಪಾರ್ಥಸಾರಥಿ ಬಂದಿತ್ತು. ಕೆರೆಯಲ್ಲಿ ನೀರು ಕುಡಿಯಲು ಹೋದಾಗ ಸೊಂಡಿಲಿನಿಂದ ನೀರನ್ನು ಆನೆ ಮೇಲಕ್ಕೆ ಚಿಮ್ಮಿಸಿತು.

ಈ ವೇಳೆ ಮರದಲ್ಲಿದ್ದ ಜೇನು ನೋಣದ ಗೂಡಿಗೆ ನೀರು ಬಿದಿದ್ದು, ಜೇನು ಗೂಡಿಗೆ ನೀರು ಬಿದ್ದ ಪರಿಣಾಮ ಆನೆಗೆ ಜೇನುನೋಣ ಕಡಿದಿದೆ. ಜೇನುನೋಣ ಕಡಿತದಿಂದ  ಸಾಕಾನೆ ರೊಚ್ಚಿಗೆದ್ದಿದೆ.  ಗುಂಡ್ಲುಪೇಟೆ ಪಟ್ಟಣದೊಳಗೆ ಪಾರ್ಥಸಾರಥಿ ಸಾಕಾನೆ ನುಗ್ಗಿದೆ.

ಬಂಡೀಪುರ ಅರಣ್ಯದ ಸಾಕಾನೆ ಪಾರ್ಥಸಾರಥಿ  ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಆನೆ ದಿಕ್ಕಾಪಾಲಾಗಿ ಓಡಿದೆ. ಆನೆ ಹತೋಟಿಗೆ ತರಲು ಮಾವುತರು, ಕಾವಾಡಿಗಳು, ಅರಣ್ಯ ಸಿಬ್ಬಂದಿಗಳು ಹರಸಾಹಸ ಪಟ್ಟರು.ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ. ಯಾರಿಗೂ ತೊಂದರೆ ಮಾಡದೆ ರಸ್ತೆಗಳಲ್ಲಿ  ಆನೆ ಅಡ್ಡಾದಿಡ್ಡಿ ಓಡಾಡಿದೆ. ಆನೆ ಸೆರೆಗೆ ಕಾರ್ಯಾಚರಣೆ ಮುಂದುವರಿದಿದೆ.