ಗುಂಡ್ಲುಪೇಟೆ : ಕಲ್ಲಹಳ್ಳಿ ವ್ಯಾಪ್ತಿಯಲ್ಲಿ ರೈತರ ನಿದ್ದೆಗೆಡಿಸಿದ್ದ ವ್ಯಾಘ್ರ ಕೊನೆಗೂ ಬಂಧಿಯಾಗಿದೆ, ಭಾನುವಾರ ಬೆಳೆಗಿನ ಜಾವ ತಾಯಿ ಹುಲಿಯೊಟ್ಟಿಗೆ ಮೂರು ಮರಿಗಳನ್ನ ಸೆರೆಹಿಡಿದು ರಕ್ಷಿಸಿರುವ ಅರಣ್ಯ ಇಲಾಖೆ ಮೈಸೂರಿನ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.

ಕಲ್ಲಹಳ್ಳಿ, ಇಂಗಲವಾಡಿ, ಪಡಗೂರು , ಸಂಪಿಗೆಪುರ ವ್ಯಾಪ್ತಿಯಲ್ಲಿ ಜಾನುವಾರುಗಳ ಸಾವಿಗೆ ಕಾರಣವಾಗಿದ್ದ ವ್ಯಾಘ್ರನ ಸೆರೆಗೆ ಕಾರ್ಯಚರಣೆಗಿಳಿದ ಅರಣ್ಯ ಇಲಾಖೆ ಸತತ 15 ದಿನಗಳ ಬಳಿಕ ಮರಿಗಳಸಹಿತ ನಾಲ್ಕು ಹುಲಿಗಳನ್ನ ಸೆರೆಹಿಡಿದಿದೆ.

ಹಾಡಹಗಲೇ ಕಾಣಿಸಿಕೊಳ್ಳುತ್ತಿದ್ದ ವ್ಯಾಘ್ರ ಒಂದಷ್ಟು ದಿನ ಸುಳಿವು ನೀಡದೆ ಚಳ್ಳೆ ಹಣ್ಣು ತಿನ್ನಿಸುತ್ತಿತ್ತು, ಆನೆಗಳ ಬಳಕೆಯಿಂದ ಕೂಮ್ಬಿಂಗ್ ಆರಂಭಿಸಿದ ಇಲಾಖೆ ಸೆರೆಹಿಡಿಯುವಲ್ಲಿ ಯಶ ಕಂಡಿದೆ, ಸದ್ಯ ನಾಲ್ಕು ಹುಲಿಗಳನ್ನು ಮೈಸೂರಿನ ಕೂರ್ಗಳ್ಳಿ ಸಮೀಪದ ವನ್ಯಜೀವಿ ಪುನರ್ವಸತಿ ಕೆಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.