ಚಾಮರಾಜನಗರ : ಮತ್ತೊಂದು ಹುಲಿ ಚಾಮರಾಜನಗರದಲ್ಲಿ ಸೆರೆಯಾಗಿದೆ. ಅರವಳಿಕೆ ಕೊಟ್ಟು ಅರಣ್ಯ ಇಲಾಖೆ ಹುಲಿಯನ್ನು ಸೆರೆಹಿಡಿದಿದೆ. ಚಾಮರಾಜನಗರ ತಾಲೂಕಿನ ಕಲ್ಪುರ ಭಾಗದಲ್ಲಿ ಸಂಚಾರ ಮಾಡ್ತಿದ್ದ ಹುಲಿ ಇದೀಗ ಸೆರೆಯಾಗಿದೆ.

ಕಳೆದ 10 ದಿನಗಳಿಂದ ತಾಯಿ ಹುಲಿ ಹಾಗೂ ನಾಲ್ಕು ಹುಲಿ ಮರಿಗಳ ಸೆರೆಗೆ ಕೂಂಬಿಂಗ್ ನಡೆಸಿದರು. ಐದು ಸಾಕಾನೆಗಳನ್ನು ಕಾರ್ಯಾಚರಣೆಗೆ ಬಿಳಿಗಿರಿರಂಗನ ಬೆಟ್ಟ ಹುಲಿಸಂರಕ್ಷಿತಾರಣ್ಯದ ಅಧಿಕಾರಿಗಳು ತರಿಸಿದ್ದರು. 100 ಕ್ಕೂ ಹೆಚ್ಚು ಸಿಬ್ಬಂದಿಯಿಂದ ಹುಲಿ ಸೆರೆ ಕಾರ್ಯಾಚರಣೆ ನಡೆಸಲಾಯಿತು.

ಚಾಮರಾಜನಗರ ತಾಲೂಕಿನ ನಂಜೇದೇವನಪುರ, ಉಡಿಗಾಲ, ವೀರನಪುರ, ಕೆಕೆ ಹುಂಡಿ ಸೇರಿ ಏಳು ಗ್ರಾಮದಲ್ಲಿ ಹುಲಿ ಕಾರ್ಯಾಚರಣೆ ನಡೆಸಲಾಯಿತು. ಚಾಮರಾಜನಗರ ತಾಲೂಕಿನ ವೀರನಪುರ ಗ್ರಾಮದ ಜಮೀನಿನಲ್ಲಿ ಹುಲಿ ಸೆರೆಯಾಗಿದೆ. ತಾಯಿ ಹಾಗೂ ನಾಲ್ಕು ಮರಿಗಳಿಗೆ ಕೂಂಬಿಂಗ್ ನಡೆಸಲಾಯಿತು ಆದರೆ ಬೇರೆ ಗಂಡುಲಿ ಸೆರೆ ಸಿಕ್ಕಿದೆ.