Showing 20 of 579 posts • Page 21 of 29
ಮಂಕಿ ಫಾಕ್ಸ್ ಎಂಬ ಭೀಕರ ಹೆಮ್ಮಾರಿ ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯೂ ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ತೈವಾನ್ನ ಪೂರ್ವ ಕರಾವಳಿಯಲ್ಲಿ ಇಂದು ಬೆಳಿಗ್ಗೆ ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂಸರ್ವೇಕ್ಷಣಾ ಇಲಾಖೆ (ಯುಎಸ್ಜಿಎಸ್) ತಿಳಿಸಿದೆ.
ಪಾಕಿಸ್ತಾನದಲ್ಲಿ 78ನೇ ಸ್ವಾತಂತ್ರ್ಯ ದಿನದಂದೇ ಹೀನ ಕೃತ್ಯವೊಂದು ಬೆಳಕಿಗೆ ಬಂದಿದೆ. ಬೆಲ್ಜಿಯಂ ಮೂಲದ ಮಹಿಳೆಯ ಮೇಲೆ ಕಳೆದ ಐದು ದಿನಗಳಿಂದ ನಿರಂತರ ಸಾಮೂಹಿಕ ಅತ್ಯಾಚಾರ ನಡೆದಿದೆ.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾ ರಾಜಿನಾಮೆ ಕೊಟ್ಟ ಬೆನ್ನಲ್ಲೇ ಇದೀಗ ಥೈಲ್ಯಾಂಡ್ ಪ್ರಧಾನಿ ಶ್ರೆತ್ತಾ ಥವಿಸಿನ್ ಅವರನ್ನು ಅಧಿಕಾರದಿಂದ ತೆಗೆದುಹಾಕಲಾಗಿದೆ.
ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಖಾಸಗಿ ಕೈಗಾರಿಕೆ ಮತ್ತು ಹೂಡಿಕೆ ಸಲಹೆಗಾರ, ಪ್ರಸಿದ್ಧ ಕೈಗಾರಿಕೋದ್ಯಮಿ ಸಲ್ಮಾನ್ ಫಜ್ಲುರ್ ರಹಮಾನ್ ಹಾಗೂ ಮಾಜಿ ಕಾನೂನು ಸಚಿವ ಅನಿಸುಲ್ ಹಖ್ ಅವರನ್ನು ಬಂಧಿಸಿದ್ದಾರೆ
ಇರಾನ್ ಬೆಂಬಲಿತ ಗುಂಪುಗಳ ಸಂಘಟಿತ ದಾಳಿಯ ಪ್ರದರ್ಶನದಲ್ಲಿ ಹಿಜ್ಬುಲ್ಲಾ ಇಂದು ಸೂಕ್ಷ್ಮ ಇಸ್ರೇಲಿ ಮಿಲಿಟರಿ ಸೈಟ್ಗಳ ವಿರುದ್ಧ ಸರಣಿ ದಾಳಿಗಳನ್ನು ಪ್ರಾರಂಭಿಸಿದೆ. ಅದರ ಒಂದು ಕ್ಷಿಪಣಿಯು ಇಸ್ರೇಲಿ ಪಡೆಗಳ
ಬಾಂಗ್ಲಾದಲ್ಲಿ ನಡೆದ ಪ್ರತಿಭಟನೆಯ ಸಮಯದಲ್ಲಿ ಹಿಂದೂಗಳನ್ನು ರಕ್ಷಣೆ ಮಾಡ ಲಾಗದ್ದಕ್ಕೆ, ಮಧ್ಯಾಂತರ ಸರಕಾರದಲ್ಲಿ ಗೃಹ ಇಲಾಖೆ ಸಲಹೆಗಾರ (ಸಚಿವ)ರಾಗಿರುವ ಎಂ.ಶೇಖಾವತ್ ಹಿಂದೂಗಳ ಕ್ಷಮೆ ಕೇಳಿದ್ದಾರೆ.
ಪಾಕಿಸ್ತಾನದ ಖ್ಯಾತ ಗಾಯಕಿ ಹನಿಯಾ ಅಸ್ಲಮ್ ನಿಧರಾಗಿದ್ದಾರೆ. ಈ ಬಗ್ಗೆ ಹನಿಯಾ ಅವರ ಸಹೋದರಿ ಜೆಬ್ ಬಂಗಾಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಆಶ್ರಯ ನೀಡಿದ ಭಾರತದ ವಿರುದ್ಧ ಬಿಎನ್ಪಿ ಸೇರಿದಂತೆ ಬಾಂಗ್ಲಾದೇಶದ ವಿರೋಧ ಪಕ್ಷಗಳು ಭಾರತದ ವಿರುಧ್ದ ಕಿಡಿಕಾರುತ್ತಿವೆ. ಬಿಎನ್ಪಿ ಪ್ರಸ್ತುತ
ಸುಳ್ಳು ಸುದ್ದಿಗಳನ್ನು ಪ್ರಕಟಿಸಿದರೆ ಆ ಮಾಧ್ಯಮಗಳನ್ನು ಮುಚ್ಚುವುದಾಗಿ ಬಾಂಗ್ಲಾದೇಶದ ನೂತನ ಸರ್ಕಾರ ಬೆದರಿಕೆ ಹಾಕಿದೆ. ಮಾಧ್ಯಮಗಳು ಸತ್ಯವನ್ನು ಎತ್ತಿಹಿಡಿಯದಿದ್ದಾಗ ರಾಷ್ಟ್ರವು ತತ್ತರಿಸುತ್ತದೆ ಎಂದು ಹೇಳಿದ್ದಾರೆ.
ಬಾಂಗ್ಲಾದೇಶದ ನಿರ್ಗಮಿತ ಪ್ರಧಾನಿ ಶೇಖ್ ಹಸೀನಾ , ‘ಬಾಂಗ್ಲಾದೇಶದಲ್ಲಿ ಸರ್ಕಾರ ಬದಲಾವಣೆಯಲ್ಲಿ ಅಮೆರಿಕದ ಕೈವಾಡವಿದೆ. ದೇಶದ ಗಡಿಯಲ್ಲಿ ನೆಲೆಯೂರಲು ಅಮೆರಿಕ ಪ್ರಯತ್ನಿಸುತ್ತಿದೆ’ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಹೆಲಿಕಾಪ್ಟರ್ವೊಂದು ಹೋಟೆಲ್ ಮೇಲ್ಛಾವಣಿಗೆ ಗುದ್ದಿದ ಪರಿಣಾಮ ಪೈಲಟ್ ಸಾವನ್ನಪ್ಪಿದ ಘಟನೆ ಉತ್ತರ ಆಸ್ಟ್ರೇಲಿಯಾದಲ್ಲಿ ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ.
ದಂತ ಕಸಿಗಾಗಿ ಸ್ಮಶಾನಗಳು ಮತ್ತು ವೈದ್ಯಕೀಯ ಪ್ರಯೋಗಾಲಯಗಳಿಂದ 4,000ಕ್ಕೂ ಹೆಚ್ಚು ಶವಗಳನ್ನು ಕದ್ದಿದೆ ಎಂಬ ಆರೋಪ ಚೀನಾದ ಕಂಪನಿಯೊಂದರಲ್ಲಿ ಕೇಳಿಬಂದಿದೆ.
ಈಗಾಗಲೇ ದಾಖಲೆಗಳ ಸರಮಾಲೆಯನ್ನೇ ಮುರಿದು ಫೇಮಸ್ ಆಗಿರುವ ಅಮೆರಿಕದ ಡೇವಿಡ್ ರಶ್ ಮತ್ತೊಮ್ಮೆ ತಮ್ಮ ಸಾಮರ್ಥ್ಯ ತೋರಿದ್ದಾರೆ. ಒಂದಲ್ಲ.. ಎರಡಲ್ಲ.. ಒಂದೇ ದಿನ 15 ಗಿನ್ನಿಸ್ ದಾಖಲೆಗಳನ್ನು ತಮ್ಮ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಬಾಂಗ್ಲಾದೇಶದಾದ್ಯಂತ ಮೀಸಲಾತಿ ವಿರೋಧದ ಕಿಚ್ಚು ಮುಂದುವರಿದಿರುವ ನಡುವೆಯೇ ಪ್ರತಿಭಟನಾಕಾರರು ಶನಿವಾರ (ಆಗಸ್ಟ್ 10) ಬಾಂಗ್ಲಾದೇಶ ಸುಪ್ರೀಂಕೋರ್ಟ್ ನ
ಜನಪ್ರಿಯ ಯೂಟ್ಯೂಬ್ನ ಮಾಜಿ ಸಿಇಒ ಸುಸಾನ್ ವೋಜ್ಸಿಕಿ (56ವರ್ಷ) ಕಳೆದ ಎರಡು ವರ್ಷಗಳಿಂದ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಶನಿವಾರ (ಆಗಸ್ಟ್ 10) ನಿಧನರಾಗಿರುವುದಾಗಿ ಆಲ್ಫಾ
ಪೂರ್ವ ಗಾಜಾದಲ್ಲಿ ಸ್ಥಳಾಂತರಗೊಂಡ ಜನರು ವಾಸವಾಗಿರುವ ವಸತಿ ಶಾಲೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ದಾಳಿಯಲ್ಲಿ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.
ಭೀಕರ ವಿಮಾನ ದುರಂತ ಬ್ರೆಜಿಲ್ನಲ್ಲಿ ಸಂಭವಿಸಿದೆ. 62 ಪ್ರಯಾಣಿಕರು ಸೇರಿ ಒಟ್ಟು 70 ಜನರಿದ್ದ ವಿಮಾನವು ಬ್ರೆಜಿಲ್ನ ಸಾವೋ ಪೌಲೋದಲ್ಲಿ ಪತನಗೊಂಡಿದ್ದು ಭೂಮಿಗೆ ಅಪ್ಪಳಿಸುತ್ತಲೇ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ.
ಇರಾಕ್ನಲ್ಲಿ ಹೊಸ ಕಾನೂನನ್ನು ಪರಿಚಯಿಸಲು ನಿರ್ಧರಿಸಲಾಗಿದೆ, ಇದು ಹೆಣ್ಣುಮಕ್ಕಳ ಮದುವೆಯ ಕನಿಷ್ಠ ವಯಸ್ಸನ್ನು 9 ವರ್ಷಕ್ಕೆ ನಿಗದಿಪಡಿಸುತ್ತದೆ. ಮಸೂದೆಯನ್ನು ಇರಾಕಿ ಸಂಸತ್ತಿನಲ್ಲಿ ಮಂಡಿಸಲಾಗಿದೆ.
ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಜಗತ್ತಿನ ಅತಿ ದೊಡ್ಡ ನೈಸರ್ಗಿಕ ಅನಿಲ ನಿಕ್ಷೇಪವನ್ನು ಪತ್ತೆ ಮಾಡಲಾಗಿದೆ ಎಂದು ಚೀನಾ ಮಾಹಿತಿ ನೀಡಿದೆ.