ಕರಾಚಿ: ಬೆಕ್ಕುಗಳ ಚಾಣಕ್ಯತೆಯಿಂದಾಗಿ ಹಲವೆಡೆ ಭದ್ರತೆಗೆ ನೇಮಕ ಮಾಡಿರುತ್ತಾರೆ. ಏಕೆಂದರೆ ಅದು ಮನುಷ್ಯನಂತೆ ಅಲ್ಲ. ಇದೀಗ ಪಾಕಿಸ್ತಾನದಲ್ಲಿ ಬಂದೊದಗಿರುವ ಸಂಕಷ್ಟಕ್ಕೆ ಬೆಕ್ಕುಗಳನ್ನು ನೇಮಕ ಮಾಡಲಾಗಿದೆ.12 ಲಕ್ಷ ರೂಪಾಯಿಗಳನ್ನು ಇವುಗಳ ಮೇಲೆ ವೆಚ್ಚ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ಈ ಬೆಕ್ಕುಗಳ ನೇಮಕಕ್ಕೆ ಮುಖ್ಯ ಕಾರಣವಾಗಿದ್ದು, ಸಂಸತ್‌ನಲ್ಲಿ ಇಲಿಗಳ ತೀವ್ರ ಕಾಟ!.

ಪಾಕಿಸ್ತಾನದ ಪಾರ್ಲಿಮೆಂಟ್‌ನಲ್ಲಿ ಇಲಿಗಳ ಹಾವಳಿ ತೀವ್ರವಾಗಿದ್ದು, ಪ್ರಮುಖ  ಅತ್ಯಂತ ಗೌಪ್ಯವೆನಿಸುವ ಫೈಲ್‌ಗಳನ್ನು ಇಲಿಗಳು ಕತ್ತರಿಸಿ ಹಾಕಿವೆ ಎಂದು ವರದಿ ಆಗಿದೆ. ಹೀಗಾಗಿ ಈ ದಾಖಲೆಗಳನ್ನು ರಕ್ಷಿಸುವ ಸಲುವಾಗಿ ಪಾಕಿಸ್ತಾನದ ಕ್ಯಾಪಿಟಲ್ ಡೆವಲಪ್‌ಮೆಂಟ್ ಅಥಾರಿಟಿಯೂ ಬೆಕ್ಕುಗಳ ನೇಮಕಕ್ಕೆ ಬಜೆಟ್‌ನಲ್ಲಿ ಹಣ ಮಂಜೂರು ಮಾಡಿದೆ ಎಂದು ವರದಿ ಆಗಿದೆ.