ವಾಷಿಂಗ್ಟನ್: ಹಲವು ದಿನಗಳ ಬಳಿಕ ಮತ್ತೆ ಅಮೆರಿಕದಲ್ಲಿ ಭಾರತ ಮೂಲದ ವ್ಯಕ್ತಿಯನ್ನು ಕೊಲೆಮಾಡಲಾಗಿದೆ. ಹೌದು, ಅಪ್ರಾಪ್ತ ಯುವಕನೊಬ್ಬ ಗುಜರಾತ್ನ ವಡೋದರ ಮೂಲದ ದಿನಸಿ ಅಂಗಡಿ ಮಾಲೀಕರನ್ನು ಗುಂಡಿಟ್ಟು ಕೊಂದಿರುವ ಘಟನೆ ಆ.13ರಂದು ಅಮೆರಿಕದ ನಾರ್ತ್ ಕ್ಯಾರೋಲಿನಾದ ಸ್ಯಾಲಿಸ್ಬರಿಯಲ್ಲಿ ನಡೆದಿದೆ.
ಟೊಬಾಕೋ ಹೌಸ್ ಹೆಸರಿನ ದಿನಸಿ ಅಂಗಡಿ ದರೋಡೆಗೆ ಮುಂದಾದ ಅಪ್ರಾಪ್ತ, ಮಾಲೀಕರಾದ ಮೈನಾಕ್ ಪಟೇಲ್ರನ್ನು ಗುಂಡು ಹಾರಿಸಿ ಕೊಂದಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದರೂ ಅಪ್ರಾಪ್ತನಾಗಿರುವ ಕಾರಣ ಹೆಸರು ಬಹಿರಂಗಪಡಿಸಲಾಗುವುದಿಲ್ಲ ಎಂದು ರೋವನ್ ಕಂಟ್ರಿ ಶೆರಿಫ್ ನ ತನಿಖಾಧಿಕಾರಿಗಳು ತಿಳಿಸಿದ್ದಾರೆ.

