ಇಸ್ಲಮಾಬಾದ್: ಪಾಕಿಸ್ತಾನದಲ್ಲಿ 78ನೇ ಸ್ವಾತಂತ್ರ್ಯ ದಿನದಂದೇ ಹೀನ ಕೃತ್ಯವೊಂದು ಬೆಳಕಿಗೆ ಬಂದಿದೆ. ಬೆಲ್ಜಿಯಂ ಮೂಲದ ಮಹಿಳೆಯ ಮೇಲೆ ಕಳೆದ ಐದು ದಿನಗಳಿಂದ ನಿರಂತರ ಸಾಮೂಹಿಕ ಅತ್ಯಾಚಾರ ನಡೆದಿದೆ. ಘೋರ ಕೃತ್ಯದ ಬಳಿಕ ಮಹಿಳೆಯ ಕೈ ಕಾಲು ಕಟ್ಟಿ ಆಕೆಯನ್ನು ರಸ್ತೆಯಲ್ಲಿ ಎಸೆದಿರುವ ಘಟನೆ ವರದಿಯಾಗಿದೆ. ಇನ್ನು ಈ ಪ್ರಕರಣ ಇಡೀ ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿದೆ.
ಪಾಕಿಸ್ತಾನದ 78ನೇ ಸ್ವಾತಂತ್ರ್ಯ ದಿನದಂದು ಆಗಸ್ಟ್ 14 ರಂದು ಇಸ್ಲಾಮಾಬಾದ್ನ ಬೀದಿಗಳಲ್ಲಿ 28 ವರ್ಷದ ಬೆಲ್ಜಿಯಂ ಮಹಿಳೆಯೊಬ್ಬರು ಕೈಗಳನ್ನು ಕಟ್ಟಿಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತನ್ನ ಮೇಲೆ ಐದು ದಿನಗಳ ಕಾಲ ಅತ್ಯಾಚಾರ ಎಸಗಲಾಗಿದೆ ಎಂದು ಮಹಿಳೆ ಆರೋಪಿಸಿದ್ದು, ಅಪರಾಧಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.
A tourist from Belgium was brutally assaulted for five days after being abducted. She was later found on the roadside. pic.twitter.com/BM227QCSpB
— Maddy Khan 🆇 (@MaddyViews) August 14, 2024

