ವಾರ್ಸಾ: ಮೋದಿಯವರು ಉಕ್ರೇನ್ ಹಾಗೂ ಪೋಲೆಂಡ್ ಪ್ರವಾಸದ ಮೊದಲ ಹಂತದಲ್ಲಿ ಪೋಲೆಂಡ್‍ಗೆ ಭೇಟಿ ನೀಡಿದ್ದಾರೆ. ವಾರ್ಸಾದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಅವರು ಮಾತನಾಡಿದ್ದಾರೆ. ಭಾರತವು ಭಗವಾನ್ ಬುದ್ಧನ ಪರಂಪರೆಯ ನಾಡು. ಆದ್ದರಿಂದ, ಭಾರತವು ಜಗತ್ತಿನ ಎಲ್ಲೆಡೆ ಶಾಶ್ವತ ಶಾಂತಿಯನ್ನು ಪ್ರತಿಪಾದಿಸಿಸುತ್ತದೆ ಎಂದರು.
ಇದು ಯುದ್ಧದ ಯುಗವಲ್ಲ. ಭಾರತವು ಯಾವಾಗಲೂ ಸಂಘರ್ಷವನ್ನು ಪರಿಹರಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬಲವಾಗಿ ನಂಬುತ್ತದೆ. ನಾವು ಇಡೀ ಜಗತ್ತನ್ನು ಒಂದೇ ಕುಟುಂಬವೆಂದು ಪರಿಗಣಿಸಿದ್ದೇವೆ ಮತ್ತು ಇದು ಇಂದಿನ ಭಾರತದ ನೀತಿಗಳು ಮತ್ತು ನಿರ್ಧಾರಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ ಎಂದಿದ್ದಾರೆ.
ಇಂದಿನ ಭಾರತವು ಎಲ್ಲರೊಂದಿಗೆ ಸಂಪರ್ಕ ಹೊಂದಲು ಬಯಸುತ್ತದೆ. ಈ ಮೂಲಕ ಎಲ್ಲರ ಅಭಿವೃದ್ಧಿ ಹಾಗೂ ಹಿತಾಸಕ್ತಿಗಳ ಬಗ್ಗೆ ಯೋಚಿಸುತ್ತದೆ. ಕೋವಿಡ್ ಬಂದಾಗ, ಭಾರತ ಮಾನವೀಯತೆಯೇ ಮೊದಲು ಎಂದು ಹೇಳಿತ್ತು. ನಾವು ವಿಶ್ವದ 150 ಕ್ಕೂ ಹೆಚ್ಚು ದೇಶಗಳಿಗೆ ಔಷಧಗಳು ಮತ್ತು ಲಸಿಕೆಗಳನ್ನು ಕಳುಹಿಸಿದ್ದೇವೆ. ಎಲ್ಲಿ ಭೂಕಂಪ ಅಥವಾ ಯಾವುದೇ ವಿಪತ್ತು ಸಂಭವಿಸಿದರೂ ಭಾರತಕ್ಕೆ ಮಾನವೀಯತೆ ಒಂದೇ ಮೊದಲ ಮಂತ್ರ ಎಂದು ಶಾಂತಿಯ ಸಂದೇಶ ಸಾರಿದ್ದಾರೆ.

