ಢಾಕಾ: ಬಾಂಗ್ಲಾದಲ್ಲಿ ನಡೆದ ಪ್ರತಿಭಟನೆಯ ಸಮಯದಲ್ಲಿ ಹಿಂದೂಗಳನ್ನು ರಕ್ಷಣೆ ಮಾಡ ಲಾಗದ್ದಕ್ಕೆ, ಮಧ್ಯಾಂತರ ಸರಕಾರ‌ದಲ್ಲಿ ಗೃಹ ಇಲಾಖೆ ಸಲಹೆಗಾರ (ಸಚಿವ)ರಾಗಿರುವ ಎಂ.ಶೇಖಾವತ್‌ ಹಿಂದೂಗಳ ಕ್ಷಮೆ ಕೇಳಿದ್ದಾರೆ.

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾಕರಾದ ಹಿಂದೂ ಗಳನ್ನು ರಕ್ಷಿಸಬೇಕಾದ್ದು ಬಾಹುಳ್ಯ ಹೊಂದಿರುವ ಮುಸ್ಲಿಮರ ಕರ್ತವ್ಯವಾಗಿದೆ.

ಆದರೆ ಇದಾಗದ ಕಾರಣಕ್ಕೆ ನಾನು ಹಿಂದೂಗಳ ಕ್ಷಮೆ ಕೇಳುತ್ತೇನೆ. ಇದು ನಮ್ಮ ಲೋಪ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊ ಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ. ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದ ಬಾಂಗ್ಲಾ ಪೊಲೀಸರು ಮಧ್ಯಾಂತರ ಸರಕಾರ‌ದ ಜತೆ ಮಾತುಕತೆ ನಡೆಸಿದ ಬಳಿಕ ಮುಷ್ಕರವನ್ನು ಹಿಂಪಡೆದಿದ್ದಾರೆ. ಪ್ರತಿಭಟನೆ ಹಿಂಪಡೆಯಲು ಪೊಲೀಸರು ಇಟ್ಟಿದ್ದ 11 ಬೇಡಿಕೆಗಳನ್ನು ಈಡೇರಿಸಲು ಮಧ್ಯಾಂತರ ಸರಕಾರ‌ ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಪ್ರತಿಭಟನಕಾರರು ಬಳಕೆ ಮಾಡುತ್ತಿರುವ ಅಕ್ರಮ ಹಾಗೂ ಅನಧಿಕೃತ ಆಯುಧಗಳನ್ನು ಆ.19ರೊಳಗೆ ಸರಕಾರ‌ದ ವಶಕ್ಕೆ ನೀಡಬೇಕು ಎಂದು ಮಧ್ಯಾಂತರ ಸರಕಾರ‌ ಸೂಚನೆ ನೀಡಿದೆ.