ಟೊರೊಂಟೋ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಇಂಡಿಯಾ ಡೇ ಪರೇಡ್‌ ಕಾರ್ಯಕ್ರಮದಲ್ಲಿ ಖಲಿಸ್ತಾನಿ ಪ್ರತ್ಯೇಕ ವಾದಿಗಳು ಗೋ ಬ್ಯಾಕ್‌ ಇಂಡಿಯಾ ಘೋಷಣೆ ಕೂಗುವುದಲ್ಲದೆ ತ್ರಿವರ್ಣ ಧ್ವಜ ಹರಿದು ಅಟ್ಟಹಾಸ ಮೆರೆದಿದ್ದಾರೆ.ಘಟನೆ ಟೊರೊಂಟೋದಲ್ಲಿ ನಡೆದಿದೆ. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌ ಆಗುತ್ತಿದೆ.

ಕೆನಡಾದಲ್ಲಿ ಸ್ವಾತಂತ್ರ್ಯದ ಅತಿದೊಡ್ಡ ಆಚರಣೆಯಾದ ಇಂಡಿಯಾ ಡೇ ಪರೇಡ್ ಟೊರೊಂಟೊದಲ್ಲಿ ನಡೆಯಿತು. ಖಲಿಸ್ತಾನ್ ಪರ ಗುಂಪುಗಳ ಯೋಜಿತ ಪ್ರತಿ-ರ್ಯಾಲಿಯಿಂದಾಗಿ ಈ ಕಾರ್ಯಕ್ರಮಕ್ಕೆ ಸಕಲ ಭದ್ರತೆ ಒದಗಿಸಲಾಗಿತ್ತು. ಇಂಡಿಯಾ ಡೇ ಪರೇಡ್ ಅನ್ನು ಆಗಸ್ಟ್ 15 ರ ನಂತರದ ಮೊದಲ ಭಾನುವಾರದಂದು ನಡೆಸಲಾಯಿತು.

ಕೆಲವು ದಿನಗಳ ಹಿಂದೆಯಷ್ಟೇ ಭಯೋತ್ಪಾದಕ ಚಟುವಟಿಕೆಗಳಿಗೆ ಮಾರಾಕಾಸ್ತ್ರಗಳ ಪೂರೈಕೆಗೆ ಸಂಬಂಧಿಸಿ ಖಲಿಸ್ತಾನಿ ಭಯೋತ್ಪಾದಕ ಲಖ್ಬೀರ್ ಸಿಂಗ್ ಸಂಧು ಅಲಿಯಾಸ್ ಲಾಂಡಾನ ಪ್ರಮುಖ ಸಹಾಯಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಶುಕ್ರವಾರ ಬಂಧಿಸಿದೆ.