ಯಾತ್ರಾರ್ಥಿಗಳ ಹೋಗುತ್ತಿದ್ದ ಬಸ್‌ವೊಂದು ಉರುಳಿ ಬಿದ್ದು 35 ಮಂದಿ ಸಾವನಪ್ಪಿದ್ದು 7 ಮಂದಿ ಗಂಭೀರ ಗಾಯ ಗೊಂಡಿದ್ದಾರೆ.ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇರಾನ್ನ ಯಾಜ್ದ್ನಲ್ಲಿರುವ ಚೆಕ್ಪೋಸ್ಟ್ ಬಳಿ ಬಸ್ ಪಲ್ಟಿ ಹೊಡೆದಿದೆ. ಸಾವನ್ನಪ್ಪಿದವರೆಲ್ಲ ಪಾಕಿಸ್ತಾನಿ ಯಾತ್ರಿಕರು ಎಂದು ಗುರುತಿಸಲಾಗಿದೆ. ಇರಾಕ್ಗೆ ಹೊರಟ್ಟಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಪಾಕಿಸ್ತಾನ ಯಾತ್ರಾರ್ಥಿಗಳು 7ನೇ ಶತನಮಾನದ ಶಿಯಾ ಸಂತನ ಮರಣದ 4ನೇ ದಿನವನ್ನು ಗುರುತಿಸುವ ಅರ್ಬೈನ್ ಸ್ಮರಣಾರ್ಥ ಇರಾಕ್ಗೆ ಹೊರಟಿದ್ದರು. ಆದರೆ ಈ ವೇಳೆ ಬಸ್ನಲ್ಲಿ ಹೋಗುತ್ತಿದ್ದಾಗ ಬಸ್ ನೆಲಕ್ಕುರುಳಿದೆ. ಇನ್ನು ಬಸ್ ಪಲ್ಟಿ ಹೊಡೆದ ಪರಿಣಾಮ 11 ಮಹಿಳೆಯರು ಮತ್ತು 17 ಪುರುಷರು ಸಾವನ್ನಪ್ಪಿದ್ದಾರೆ. ಗಾಯಗೊಂಡವರಲ್ಲಿ 7 ಜನರ ಸ್ಥಿತಿ ಗಂಭೀರವಾಗಿದ್ದು, ಆರು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ತಿಳಿಸಿವೆ. ಆದರೆ ಪಾಕ್ 35 ಜನರು ಸಾವನ್ನಪ್ಪಿದ್ದಾರೆ ಎಂದಿದೆ.

