Showing 20 of 2253 posts • Page 70 of 113
2 ಸಾವಿರ ಕೊಟ್ಟು ಟಿಕೆಟ್ ಮಾಡಿಸಿ ನೇರ ದರ್ಶನ ಪಡೆದ ಭಕ್ತಾಧಿಗಳ ಭರ್ಜರಿ ರೆಸ್ಪಾನ್ಸ್ ಬಂದಿದೆ. ತಾಯಿಯ ನೇರ ದರ್ಶನ ಪಡೆದು ಭಕ್ತಾಧಿಗಳು ಖುಷಿ ಹಂಚಿಕೊಂಡರು. 2000 ಕೊಟ್ಟಿದ್ದಕ್ಕೂ ಸಾರ್ಥಕ ಒಳ್ಳೆಯ ದರ್ಶನ ಸಿಕ್ಕಿದೆ ಎಂದರು.
ನಗರದ ತಾಲ್ಲೂಕು ಆಡಳಿತ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಾಡಪ್ರಭು ಕೆಂಪೇಗೌಡ ರವರ ಜಯಂತಿಯನ್ನು ಆಚರಣೆ ಮಾಡಲಾಯಿತು.
ಚಲಿಸುತ್ತಿರುವ ಸಾರಿಗೆ ಬಸ್ಸಿನಲ್ಲಿ ಬರ್ತಡೇ ಆಚರಣೆ ನಡೆದಿದೆ. ಕಂಡಕ್ಟರ್ ನ ಹುಟ್ಟುಹಬ್ಬವನ್ನು ಮಹಿಳಾ ಪ್ರಯಾಣಿಕರು ಬಸ್ ನ ಇಂಜಿನ್ ಮೇಲೆ ಕೇಕ್ ಇಟ್ಟು ಕತ್ತರಿಸಿ ನಿರ್ವಾಹಕನ ಜನುಮ ದಿನವನ್ನ ಆಚರಿಸಿದ್ದಾರೆ.
ಹುಚ್ಚುನಾಯಿ ಕಡಿತಕ್ಕೆ ಸುಮಾರು 20 ಕ್ಕೂ ಹೆಚ್ಚುಮಕ್ಕಳು ಗಾಯಗೊಂಡಿದ್ದಾರೆ. ಗ್ರಾಮಸ್ಥರ ಆಕ್ರೋಶಕ್ಕೆ ಒಂದು ಹುಚ್ಚು ನಾಯಿ ಬಲಿ ಆಗಿದೆ.
ದೂರಿನ ಬಗ್ಗೆ ವಿಚಾರಣೆಗೆ ಬಂದ ವ್ಯಕ್ತಿ ಮೇಲೆ ಪತ್ನಿ ಹಾಗೂ ಬೀಗರು ಸೇರಿ ಠಾಣೆಯಲ್ಲೇ ಹಲ್ಲೆ ನಡೆಸಿದ ಘಟನೆ ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಮೈಸೂರಿನ ಪೀಡಿಯಾಟ್ರಿಕ್ ನ್ಯೂರಾಲಜಿಸ್ಟ್ ಡಾ.ಅನೂಷಾ ರಾಜ್ ರವರು ಮಿಸ್ ಮೆಡಿಕ್ವೀನ್ 2025 ಸ್ಪರ್ಧೆಯಲ್ಲಿ ವಿಜಯಿಯಾಗಿ ಹೊರಹೊಮ್ಮಿದ್ದಾರೆ.
ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಕಾರ್ಯಕರ್ತರೊಡನೆ ಛತ್ರಪತಿ ಸಾಹು ಮಹಾರಾಜ್ ಮತ್ತು ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಸಾರಿಗೆ ಬಸ್ ಪಲ್ಟಿಯಾಗಿ ಬಸ್ ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ಮೈಸೂರು ಬನ್ನೂರು ಮುಖ್ಯ ರಸ್ತೆಯ ಮಾದೇಗೌಡನ ಹುಂಡಿ ಬಳಿ ನಡೆದಿದೆ.
ನಿಯತ್ತಿಗೆ ಮತ್ತೊಂದು ಪದವೇ ನಾಯಿ ಎಂಬ ಮಾತಿಗೆ ಮೇಟಗಳ್ಳಿಯಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಹುಚ್ಚುನಾಯಿ ಕಡಿದು ಮೃತಪಟ್ಟ ಮಹಾಲಿಂಗೇಶ್ವರ ದೇವಾಲಯದ ಬಸವನ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಶ್ವಾನಗಳು ಸ್ನೇಹಕ್ಕೆ ತುಂಬು ಅರ್ಥ ನೀಡಿವೆ.
ಮೈಸೂರಿನ ರಾಜೇಂದ್ರ ನಗರದ ಪೆನ್ಷನ್ ಬ್ಲಾಕ್ ನಲ್ಲಿರುವ ಕಣಿಯರ ಸೇವಾ ಸಮಾಜಕ್ಕೆ 11.75 ಲಕ್ಷ ವಂಚಿಸಿರುವುದಾಗಿ ಆರೋಪಿಸಿ ಹಾಲಿ ಅಧ್ಯಕ್ಷ ಸೇರಿದಂತೆ ಮೂವರ ವಿರುದ್ದ ಕಾರ್ಯದರ್ಶಿಗಳು ಎನ್.ಆರ್. ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಹುಚ್ಚುನಾಯಿ ಕಡಿದು ಅನಾರೋಗ್ಯಕ್ಕೆ ಸಿಲುಕಿದ್ದ ಮೇಟಗಳ್ಳಿ ಮಹಾಲಿಂಗೇಶ್ವರ ದೇವಾಲಯದ ಬಸವ ಚಿಕಿತ್ಸೆ ಫಲಕಾರಿಯಾಗದ ಹಿನ್ನಲೆ ಮೃತಪಟ್ಟಿದೆ.
ನಿಷೇಧಿತ ಮಾದಕ ವಸ್ತುಗಳನ್ನ ಮಾರಾಟ ಮಾಡಲು ಯತ್ನಿಸಿದ ತೃತೀಯಲಿಂಗಿ ಪೊಲೀಸರ ಅತಿಥಿಯಾಗಿದ್ದಾರೆ. ಬಂಧಿತರಿಂದ 4 ಗ್ರಾಂ 10 ಮಿಲೀ MDMA ವಶಪಡಿಸಿಕೊಳ್ಳಲಾಗಿದೆ.
ಪ್ರೀತಿಸಿ ಮದುವೆ ಆದ ಹುಡುಗಿಗೆ ವಿಚಾರಣೆ ನೆಪದಲ್ಲಿ ಬೆದರಿಸಿ 10 ಸಾವಿರ ವಸೂಲಿ ಮಾಡಿದ್ದಾರೆಂದು ನಂಜನಗೂಡು ಗ್ರಾಮಾಂತರ ಠಾಣೆಯ ಪಿಎಸ್ಐ ಸುನೀಲ್ ಕುಮಾರ್ ಮೇಲೆ ಗಂಭೀರ ಆರೋಪ ಹೊರಿಸಲಾಗಿದೆ.
ನದಿಯಲ್ಲಿ ಸಿಲುಕಿದ್ದವರ ರಕ್ಷಣೆಗೆ ಪೊಲೀಸ್ ಧಾವಿಸಿದ್ದು, ಬನ್ನೂರು ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮನೋಜ್ ಕುಮಾರ್ ಸಮಯಪ್ರಜ್ಞೆಯಿಂದ ತಂದೆ ಮಗ ಬದುಕಿ ಬಂದ ಘಟನೆ ಮೈಸೂರು ಜಿಲ್ಲೆ ಬನ್ನೂರಿನ ಕಾವೇರಿ ನದಿಯಲ್ಲಿ ನಡೆದಿದೆ.
ಕೇರಳದಲ್ಲಿ ಮದ್ಯ ನಿಷೇಧ ಎಫೆಕ್ಟ್ ನಿಂದ ರಾಜ್ಯದ ಗಡಿ ಭಾಗಕ್ಕೆ ಬಂದು ಪಾನಮತ್ತರಾಗಿ ಕೇರಳಿಗರು ತೂರಾಡುತ್ತಿದ್ದಾರೆ. ಕೇರಳಕ್ಕೆ ಹೊಂದಿಕೊಂಡಿರುವ ಕರ್ನಾಟಕದ ಮದ್ಯದಂಗಡಿಗಳಿಗೆ ಕೇರಳಿಗರು ಆಗಮಿಸಿದ್ದಾರೆ.
ದ್ವಿದಳ ಧಾನ್ಯ ಬೆಳೆಗಳಿಗೆ ಹಳದಿ ಬಣ್ಣದ ರೋಗ ಬಂದಿದ್ದು, ರೈತರು ಆತಂಕದಲ್ಲಿದ್ದಾರೆ. ರೋಗದ ಹತೋಟಿಗೆ ಕೃಷಿ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ನಿಕಟ ಪೂರ್ವ ಅಧ್ಯಕ್ಷ ಸಿ. ನಿಂಗರಾಜು ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಾಗರತ್ನಮ್ಮ ರನ್ನ ಹೊರತುಪಡಿಸಿ ಯಾರು ನಾಮಪತ್ರ
ದಿನಗೂಲಿ ನೌಕರರರಿಗೆ ವೇತನದ ಸಮಸ್ಯೆ ಉಂಟಾಗಿದ್ದು, ಎಪ್ರೀಲ್ ಮೇ ತಿಂಗಳ ಕಷ್ಟ ಪರಿಹಾರ ಭತ್ಯೆ ಪಾವತಿಸದೆ ಇದ್ದು, ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗ
ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನ ನಿಲುಗಡೆ ವಿಚಾರದಲ್ಲಿ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಹಾಗೂ ಸಾರ್ವಜನಿಕರ ನಡುವೆ ಕಿರಿಕ್ ಆಗಿ ಪರಸ್ಪರ ಕೈ ಕೈ ಮಿಲಾಯಿಸಿಕೊಂಡ ಘಟನೆ ಹುಣಸೂರು ಬಸ್ ನಿಲ್ದಾಣದಲ್ಲಿ ನಡೆದಿದೆ.
ಪಟ್ಟಣದ ಗುರುಭವನದಲ್ಲಿ ತಾಲೂಕು ಆಡಳಿತ ವತಿಯಿಂದ ತಹಸೀಲ್ದಾರ್ ಅನುಪಸ್ಥಿತಿಯಲ್ಲಿ ಉಪಾ ತಹಶೀಲ್ದಾರ್ ರಾಜಕಾಂತ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.