ಮೈಸೂರು: ಮನೆಯ ಕಿಬೋರ್ಡ್ ನಲ್ಲಿದ್ದ ನಗದು ಸೇರಿದಂತೆ 15.60 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾದ ಘಟನೆ ವಿಜಯನಗರ 4 ನೇ ಹಂತದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆ ವಿ.ಸಿ.ಫಾರಂ ನಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುವ ಡಾ.ಸುಮಾ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯಲ್ಲಿ ಅತ್ತೆ ಹಾಗೂ ಮಾವ ಇದ್ದರೂ ಮೊದಲ ಮಹಡಿಯಲ್ಲಿದ್ದ ಕಬೋರ್ಡ್ ನಿಂದ ಕಳ್ಳರು ಚಿನ್ನಾಭರಣಗಳನ್ನ ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಡಾ.ಸುಮಾ ಪ್ರಕರಣ ದಾಖಲಿಸಿದ್ದಾರೆ.

