ಮೈಸೂರು : ಚುಟುಪುಟು ಯುದ್ಧ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರವಾಗಿ ಮೈಸೂರಿನಲ್ಲಿ ಪ್ರತಾಪ ಸಿಂಹ ಪ್ರತಿಕ್ರಿಯೆ ನೀಡಿದರು. ಖರ್ಗೆ ಅವರ ಬಾಯಲ್ಲಿ ಅಪರೇಷನ್ ಸಿಂದೂರ್ ಬಗ್ಗೆ ಬಹಳ ಹಗುರವಾದ ಮಾತು ಬಂದಿರುವುದು ಆಶ್ಚರ್ಯ ತಂದಿದೆ. ಖರ್ಗೆಯವರು ಯಾಕೆ ಅವರ ಮಗನ ರೀತಿ ಮಾತನಾಡುತ್ತಿದ್ದಾರೆ ಎಂದರು.
ರಾಹುಲ್ ಗಾಂಧಿ ಜೊತೆ ಇದ್ದು ಪಪ್ಪು ರೀತಿ ಮಾತನಾಡುತ್ತಿದ್ದಾರೆ. ಖರ್ಗೆ ಅವರು ಸಹ ಪಪ್ಪು ಆಗಿದ್ದಾರೆ. ಚುಟುಪುಟು ದಾಳಿಯ ನಂತರ ಚೀನಾದ ಕ್ಷಿಪಣೆ ಮಾರ್ಕೆಟ್ 10% ಬಿದ್ದು ಹೋಗಿದೆ. ಚುಟುಪುಟು ದಾಳಿಯ ನಂತರವೇ ಚೀನಾದ ಮಾರ್ಕೆಟ್ ಬಿದ್ದಿದೆ. ಅಂತರಾಷ್ಟ್ರೀಯ ಮಾರ್ಕೆಟ್ ನಲ್ಲಿ ಅವರ ಆಯುಧಗಳನ್ನು ಖರೀದಿ ಮಾಡಲು ಯಾರು ಮುಂದೆ ಬರುತ್ತಿಲ್ಲ. ಈ ಚುಟುಪುಟು ದಾಳಿಯ ನಂತರ ಬ್ರಹ್ಮೋಸ್ ಗೆ 18 ರಾಷ್ಟ್ರಗಳಿಂದ ಬೇಡಿಕೆ ಬಂದಿದೆ.
ಕದನ ವಿರಾಮದ ಬಗ್ಗೆ ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿರುವ ಬಗ್ಗೆ ಪಾಕಿಸ್ತಾನದವರೇ ಸ್ಪಷ್ಟ ಪಡಿಸಿದ್ದಾರೆ. ಪಾಕಿಸ್ತಾದ ಪ್ರಧಾನಿ ಸಹ ಭಾರತದ ದಾಳಿಗೆ ಬಗ್ಗೆ ಮಾತನಾಡಿದ್ದಾರೆ. ಮುಂಬೈ ದಾಳಿಗೆ ಪ್ರತಿಯಾಗಿ ಚುಟುಪುಟು ದಾಳಿ ಸಹ ನಡೆಯಲಿಲ್ಲ. ಮೋದಿ ಅವರ ಮೇಲಿನ ಮತ್ಸರಕ್ಕೆ ಸೈನ್ಯದ ಬಗ್ಗೆ ಮಾತನಾಡಬೇಡಿ. ಯುಪಿಎ ಸರ್ಕಾರದಲ್ಲಿ ದಾವುದ್ ಇಬ್ರಾಹಿಂ ರಾಜಾರೋಷವಾಗಿ ಓಡಾಡುತ್ತಿದ್ದ. ಮೋದಿ ಪ್ರಧಾನಿಯಾದ ನಂತರ ಮಿಲಿಟರಿಗೆ ಶಕ್ತಿ ಬಂದಿದೆ ಎಂದರು.
ಎಲ್ಲಿಯೂ ದಾವುದ್ ಇಬ್ರಾಹಿಂ ಕಾಣಿಸಿಲ್ಲ. ಪಾಕಿಸ್ಥಾನದಲ್ಲಿ ಎಕೆ 47 ಇಟ್ಟುಕೊಂಡು ಓಡಾಡುತ್ತಿದ್ದವರು ಈಗ ಮನೆಯೊಳಗೆ ಹೊಕ್ಕಿದ್ದಾರೆ. ಪಾಕಿಸ್ತಾನ ಭಯೋತ್ಪಾದಕರನ್ನ ಹೆಕ್ಕಿ ಹೆಕ್ಕಿ ಹೊಡೆಯುತ್ತಿದ್ದಾರೆ. ಭಯೋತ್ಪಾದಕರನ್ನ ಸಾಯಿಸುತ್ತಿರುವುದು ನಮ್ಮ ಸೈಜಿಕರೇ. ಮೋದಿ ಅವರು ಬಂದ ಮೇಲೆ ಸೇನೆಯ ಕಾರ್ಯಕ್ಷಮತೆ ಹೆಚ್ಚಾಗಿದೆ ಎಂದರು.
ಯುದ್ಧದ ಬಗ್ಗೆ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರವಾಗಿ ಮೋದಿ ಅವರ ಮೇಲಿನ ಮತ್ಸರದಿಂದ ಕಾಂಗ್ರೆಸ್ ನವರು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಶಶಿತರೂರು ಸೇರಿದಂತೆ ಹಲವರು ಈ ರೀತಿ ಮಾತನಾಡುತ್ತಿಲ್ಲ. ಮೋದಿ ಅವರ ನಾಯಕತ್ವದ ಬಗ್ಗೆ ಎಲ್ಲಾ ದೇಶಗಳಿಗೆ ಹೋಗಿ ಹೋಗಳುವ ಕೆಲಸವಾಗುತ್ತಿದೆ. ಪಾಕಿಸ್ತಾನದ ಪಿತಾಮಹ ನಮ್ಮ ಕಾಂಗ್ರೆಸ್ ಎಂದರು.
ಕರ್ನಾಟಕ ಕಾಂಗ್ರೆಸ್ ಟ್ವೀಟರ್ ಪೇಜ್ ನಲ್ಲಿ ಭಾರತಕ್ಕೆ ಯಾವ ರಾಷ್ಟ್ರ ಬೆಂಬಲ ಕೊಟ್ಟಿಲ್ಲ ಅಂತಾರೇ. ಪ್ರಿಯಾಂಕ ಖರ್ಗೆ ಅವರೇ ಎಷ್ಟು ಓದಿದ್ದಾರೆ ಎಂಬುದು ನಮಗೆ ಗೊತ್ತಿದೆ. ಪಾಕಿಸ್ತಾನ ಪರ ಚೈನಾ ಟರ್ಕಿ ಬೆಂಬಲ ಕೊಟ್ಟಿದೆ. ಟರ್ಕಿ ಇಸ್ಲಾಮಿಕ್ ದೇಶ ಹೀಗಾಗಿ ಪಾಕಿಸ್ತಾನದ ಪರ ನಿಂತಿದೆ. ಅಂಬೇಡ್ಕರ್ ಚಿಂತನೇಯನ್ನ ನೀವು ಓದಿಲ್ಲ. ಟರ್ಕಿ ಎಂದಿಗೂ ನಮಗೆ ಬೆಂಬಲ ಕೊಟ್ಟಿಲ್ಲ. ಖಿಲಾಫತ್ ಚಳುವಳಿಗೆ ಬೆಂಬಲ ಕೊಟ್ಟಿದು ಗಾಂಧೀಜಿ ಎಂದರು.
ಟರ್ಕಿಯನ್ನ ಬೆಳೆಸಿದ್ದು ಕಾಂಗ್ರೆಸ್ ಪಕ್ಷ. ಅಂದಿನಿಂದಲೇ ಭಾರತದ ಮುಸ್ಲೀಂರ ಮೇಲೆ ಟರ್ಕಿಗೆ ಪ್ರೀತಿ ಬಂತು. ಚೈನಾ ನಮ್ಮ ಎನಿಮಿ ಕಂಟ್ರಿ. ಸೌದಿ ಅರೇಬಿಯಾ ಈ ಬಾರಿ ಪಾಕಿಸ್ತಾನದ ಪರ ನಿಲ್ಲಲಿಲ್ಲ. ಕೆಲ ದೇಶಗಳನ್ನ ಹೊರತು ಪಡಿಸಿ ಎಲ್ಲಾ ರಾಷ್ಟ್ರಗಳು ನಮಗೆ ಬೆಂಬಲ ಕೊಟ್ಟಿದೆ ಎಂದು ಮೈಸೂರಿನಲ್ಲಿ ಪ್ರತಾಪ ಸಿಂಹ ಹೇಳಿಕೆ ನೀಡಿದರು.

