ಹೆಚ್.ಡಿ.ಕೋಟೆ: ಸಾರ್ವಜನಿಕರೊಂದಿಗೆ ಸೂಕ್ತವಾಗಿ ಸ್ಪಂದಿಸದ ಇನ್ಸ್ಪೆಕ್ಟರ್ ವಿರುದ್ದ ಸ್ಥಳೀಯರು ಆಕ್ರೋಷ ವ್ಯಕ್ತಪಡಿಸಿ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಹೆಚ್.ಡಿ.ಕೋಟೆಯಲ್ಲಿ ನಡೆದಿದೆ. ಮಾಜಿ ಶಾಸಕ ಚಿಕ್ಜಣ್ಣ ನೇತೃತ್ವದಲ್ಲಿ ಠಾಣೆಗೆ ಬಂದ ನೂರಾರು ಸ್ಥಳೀಯರು ನಿರೀಕ್ಷಕ ಗಂಗಾಧರ್ ರವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ಸ್ ಪೆಕ್ಟರ್ ಗಂಗಾಧರ್ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ.ನಂತರ ತನ್ನ ವರ್ತನೆಯನ್ನ ಸರಿ‌ಪಡಿಸಿಕೊಳ್ಳುವ ಭರವಸೆ ನಂತರ ಠಾಣೆಯಿಂದ ನಿರ್ಗಮಿಸಿದ್ದಾರೆ. ಜಮೀನೊಂದರ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಜೆಡಿಎಸ್ ತಾಲೋಕು ಅಧ್ಯಕ್ಷರೊಂದಿಗೆ ಸಹನೆಯಿಂದ ವರ್ತಿಸದ ಆರೋಪ ಮಾಡಲಾಗಿದೆ.

ಈ ಹಿನ್ನಲೆ ನೂರಾರು ಜೆಡಿಎಸ್ ಕಾರ್ಯಕರ್ತರು ಠಾಣೆಗೆ ಧಾವಿಸಿದ್ದಾರೆ. ಜೆಡಿಎಸ್ ಅಧ್ಯಕ್ಷ ರಾಜೇಂದ್ರ, ನರಸಿಂಹೇಗೌಡ, ಚಿಕ್ಕೆರೆಯೂರು ನಾಗರಾಜು ಮಳಲಿ ಶಾಂತ ನೇತೃತ್ವದಲ್ಲಿ ಜನ ಜಮಾಯಿಸಿದ್ದ