Showing 20 of 2250 posts • Page 65 of 113
ಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣರಾಜಪುರ, ವೀರೇದೇವನಪುರ ಗ್ರಾಮಗಳ 6ನೇ ಮತ್ತು 11ನೇ ಗಸ್ತು ಗ್ರಾಮಗಳಲ್ಲಿ “ಮನೆ ಮನೆಗೆ ಪೊಲೀಸ್” ಕಾರ್ಯಕ್ರಮಕ್ಕೆ ಕವಲಂದೆ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಬಿ.ಬಸವರಾಜು ಚಾಲನೆ ನೀಡಿದರು.
ಸೂರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸ್ಥಳಾಂತರ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರೈತರು ಹಾಗೂ ಗ್ರಾಮಸ್ಥರು ದಿಢೀರ್ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಸುಕ್ಷೇತ್ರ ಸುತ್ತೂರು ಮಠದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಂದ ಸೀಡ್ಸ್ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬೈಕ್ ನಲ್ಲಿ ಅಕ್ರಮವಾಗಿ ಒಣಗಾಂಜಾ ಸಾಗಾಟ ಮಾಡುತ್ತಿದ್ದವನನ್ನ ಅಬಕಾರಿ ಪೊಲೀಸರು ದಾಳಿ ನಡೆಸಿ ಬಂಧಿಸಿರುವ ಘಟನೆ ಪಟ್ಟಣದ ಟೀಚರ್ಸ್ ಲೇಔಟ್ ಬಳಿ ತಡರಾತ್ರಿ ನಡೆದಿದೆ.
ಬರ್ತ್ ಡೇ ಸೆಲೆಬ್ರೇಷನ್ ಗೆ ಕರೆಸಿಕೊಂಡು ಸ್ನೇಹಿತರು ಚಾಕು ಇರಿದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕೆಂಪಿಸಿದ್ದನಹುಂಡಿ ಗ್ರಾಮದಲ್ಲಿ ನಡೆದಿದೆ.
ರಾಷ್ಟ್ರೀಯ ಲಾಂಛನ,ಬಾವುಟ,ಹೆಸರು,ಲೋಗೋ,ಮೊಹರು,ಸ್ಟಿಕ್ಕರ್ ಗಳನ್ನ ಅನಧಿಕೃತವಾಗಿ ಬಳಸಿ ದುರ್ಬಳಕೆ ಮಾಡುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ಕೇಂದ್ರ ಗ್ರಾಹಕ ಸಚಿವಾಲಯ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ನವ ಸಮೃದ್ಧಿ ಬೆನಿಫಿಟ್ ಫಂಡ್ ನಿಧಿ ಲಿಮಿಟೆಡ್ ನಿಂದ ಕೋಟ್ಯಂತರ ಹಣ ವಂಚಿಸಿರುವ ಆರೋಪದ ಹಿನ್ನಲೆ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲ್ಲೂಕಿನ ಕಸಬಾ ಹೋಬಳಿಯ ದೇವಿರಮ್ಮನಹಳ್ಳಿ ಗ್ರಾಮದಲ್ಲಿರುವ ಕೆರೆಗೆ ಚರಂಡಿ ನೀರು ಸೇರುತ್ತಿದ್ದು, ಕೆರೆ ಮಲಿನಗೊಳ್ಳುತ್ತಿರುವ ಪರಿಣಾಮ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಜಮೀನು ವಿವಾದ ಹಿನ್ನೆಲೆ ಮಹಿಳೆಯನ್ನು ಎಳೆದಾಡಿ ಅಸಭ್ಯವಾಗಿ ವರ್ತನೆ ಮಾಡಿರುವ ಘಟನೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ರತ್ನಪುರಿ ಗ್ರಾಮದಲ್ಲಿ ನಡೆದಿದೆ.
ಸೋಸಲೆ, ಕೈಯಂಬಳ್ಳಿ, ಹಲವಾರ, ಕೊಳತೂರು, ದೊಡ್ಡ ಬಾಗಿಲು, ಮುರಾರ್ಜಿ ವಸತಿ ಶಾಲೆಯ ಒಳ ಕ್ರೀಡಾಂಗಣ ಸೇರಿದಂತೆ 12 ಕೋಟಿ ರೂಗಳ ವೆಚ್ಚದ ಎಸ್. ಸಿ.ಪಿ ರಸ್ತೆ ಮತ್ತು ಚರಂಡಿ
ನಾಡ ಅಧಿದೇವತೆ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವ ನಡೆಯುತ್ತಿದ್ದು, ವಿವಿಧ ಬಗೆಯ ಹೂವುಗಳಿಂದ ದೇವಾಲಯ ಕಂಗೊಳಿಸುತ್ತಿದೆ.
ನಗರದ ಎಂಟನೇ ಕ್ರಾಸ್ ನಲ್ಲಿರುವ ಶ್ರೀ ಚಾಮುಂಡೇಶ್ವರಿ ಭಾವ ಸಾರ್ ಕ್ಷತ್ರಿಯ ಯುವಕರ ಸಂಘದಿಂದ ಆಷಾಡ ಮಾಸದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವವನ್ನು ಏರ್ಪಡಿಸಲಾಗಿತ್ತು.
ಇದೇ ಜುಲೈ 21 ರಂದು ಸೋಮವಾರ ದೊಡ್ಡ ಕವಲಂದೆ ಹೋಬಳಿ ಮಟ್ಟದಲ್ಲಿ ಕಂದಾಯ ಅದಾಲತ್ ನಡೆಯಲಿದೆ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ತಿಳಿಸಿದ್ದಾರೆ.
ಜಿಲ್ಲೆಯ ಸರಗೂರು ತಾಲೂಕಿನ ಸರಗೂರು ಪಟ್ಟಣದ ಹತ್ತನೇ ವಾರ್ಡಿನಲ್ಲಿ ಕೋತಿಯ ಉಪಟಳ ಹೆಚ್ಚಾಗಿದ್ದು ಸಾರ್ವಜನಿಕರು ಭಯದಲ್ಲಿ ಜೀವನ ನಿರ್ವಹಿಸುವಂತೆ ಆಗಿದೆ ವಯಸ್ಕರಂತ ಹಿಡಿದು ವೃದ್ಧರ ತನಕ ಈ ಒಂದು ಕೋತಿಯ ವರ್ತನೆಗೆ ಹೆದರಿದ್ದಾರೆ .
: 7 ನೇ ತರಗತಿ ವಿದ್ಯಾರ್ಥಿನಿಗೆ ವಿವಾಹ ನೆರವೇರಿಸಿದ ಹಿನ್ನಲೆ ಬಾಲ್ಯ ವಿವಾಹ ಕಾಯ್ದೆಯಡಿ ಬಾಲಕಿಯ ತಂದೆ, ತಾಯಿ, ಗಂಡ, ಅತ್ತೆ, ವಿರುದ್ದ ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೈದ್ಯರನ್ನ ಬದಲಾಯಿಸಿ, ಇಲ್ಲಾಂದ್ರೆ ಆಸ್ಪತ್ರೆ ಮುಚ್ಚಿ ಎಂದು ಮೈಸೂರಲ್ಲಿ ವೈದ್ಯರ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ಕಳೆದ ಎರಡು ತಿಂಗಳಿನಲ್ಲಿ ಮೈಸೂರು ನಗರ ಪೊಲೀಸರು ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ಒಟ್ಟು 42 ಸ್ವತ್ತು ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.
ಶಕ್ತಿ ಯೋಜನೆಯಡಿ 500 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ಟಿ ನರಸೀಪುರ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಸಂಭ್ರಮಾಚರಣೆ ಮಾಡಲಾಯಿತು.
ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು. ಪಟ್ಟಣದ ಲಿಂಕ್ ರಸ್ತೆಯ ಮಸ್ಜಿದ್ -ಎ-ನೂರ್ ಆವರಣದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ಮನ್ಸೂರ್ ಆಲಿ ಅಧ್ಯಕ್ಷತೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಸರ್ಕಾರಿ ವಾಹನದಲ್ಲಿ ಮಧ್ಯ ಬಾಟಲಿಗಳು, ಸರ್ಕಾರಿ ಕಡತಗಳು ಪತ್ತೆಯಾಗಿದೆ. ಸರ್ಕಾರಿ ವಾಹನದಲ್ಲಿ ಖಾಸಗಿ ವ್ಯಕ್ತಿ ಚಾಲಕನಾಗಿದ್ದನು. ಸಾರ್ವಜನಿಕರ ಕೈಗೆ ವಾಹನ ಸಿಕ್ಕಿಬಿದ್ದಿರುವ ಘಟನೆ ಹುಣಸೂರಿನ ಬಸ್ ಸ್ಟ್ಯಾಂಡ್ ಬಳಿ ನಡೆದಿದೆ.