ನಂಜನಗೂಡು: ಸವ್ಯಸಾಚಿ ಡಾ. ಜಿ ಪರಮೇಶ್ವರ್ ಅಭಿಮಾನಿಗಳ ಬಳಗದಿಂದ ಗುಂಡ್ಲುಪೇಟೆ ತಾಲ್ಲೂಕಿನ ಬೆಂಡರವಾಡಿ ಗ್ರಾಮದಲ್ಲಿ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ನೆನಪಿನ ಭವನ ಉದ್ಘಾಟನೆ ಮತ್ತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮ ಸಂಚಾಲಕ ಮಾದೇವ ಭರಣಿ ಹೇಳಿದರು.

ನಂಜನಗೂಡು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರಳ ಸಜ್ಜನಿಕೆಯ ರಾಜಕಾರಣಿ ಸವ್ಯಸಾಚಿ ಡಾ.ಜಿ ಪರಮೇಶ್ವರ್ ಅಭಿಮಾನಿಗಳ ಬಳಗ. ಗುಂಡ್ಲುಪೇಟೆ ತಾಲ್ಲೂಕಿನ ಬೆಂಡರವಾಡಿ ಗ್ರಾಮದಲ್ಲಿ  ಆ.17 ರಂದು ಭಾನುವಾರ ಬಾಳೆ ಎಲೆ ಮಾದಯ್ಯ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ  ಡಾ.ಜಿ ಪರಮೇಶ್ವರ್ 75 ನೆನಪಿನ ಭವನ  ಅಮೃತ ಮಹೋತ್ಸವ ಉದ್ಘಾಟನೆ ಮಾಡಲಾಗುತ್ತದೆ. ಶಿಕ್ಷಣ ಭೀಷ್ಮ ಎಚ್.ಎಂ ಗಂಗಾಧರಯ್ಯ ರವರ ಪ್ರತಿಮೆ ಅನಾವರಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಡಾ.ಜಿ ಪರಮೇಶ್ವರ್ ಸಂಸ್ಕೃತಿ ಪುರಸ್ಕಾರ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.

ಮಹಿಳಾ ಗೃಹ ಕೈಗಾರಿಕಾ ಘಟಕ ನೂತನ ಕಟ್ಟಡ ಉದ್ಘಾಟನೆ. ಡಾ.ಜಿ ಪರಮೇಶ್ವರ್ ಸಾಲುಮರದ ರಸ್ತೆ ನಾಮಕರಣ ಮಾಡಿ 1001 ಹೊಂಗೆ ಸಸಿಗಳನ್ನು ರಸ್ತೆಯಲ್ಲಿ ನೆಡಲಾಗುತ್ತದೆ. ಬಾಳೆ ಎಲೆ ಮಾದಯ್ಯ ಸೇವಾ ಟ್ರಸ್ಟ್, ಬಾಳೆ ಎಲೆ ಸಹಕಾರ ಸಂಘದ ಉದ್ಘಾಟನೆ, ಸಾರ್ವಜನಿಕ ನೀರಿನ ತೊಟ್ಟಿ ಉದ್ಘಾಟನೆ, ಡಾ.ಜಿ ಪರಮೇಶ್ವರ್ ಕುರಿತ ಧ್ವನಿ ಸುರುಳಿ ಬಿಡುಗಡೆಗೊಳಿಸಲಾಗುತ್ತದೆ.

ಹಾಗೂ ಕಲೆ ಸಾಹಿತ್ಯ ಸಂಸ್ಕೃತಿ ಉದ್ಯಮ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶಿಕ್ಷಣ ಸಂಸ್ಕೃತಿ ಬೀಡು ಬೆಂಡರವಾಡಿ ಊರು ಜ್ಞಾನದ ಜೋಳಿಗೆ ಎಂಬ ಪುಸ್ತಕ ಲೋಕಾರ್ಪಣೆ ಮಾಡಲಾಗುತ್ತದೆ. ಬೆಂಡರವಾಡಿಯ ಶೂಲದ ಮಾರಮ್ಮ ದೇವಾಲಯ ಲೋಕಾರ್ಪಣೆ. 35 ಮಂದಿ ಕವಿಗಳಿಂದ ಡಾ.ಜಿ ಪರಮೇಶ್ವರ್ ಗೌರವಾರ್ಥವಾಗಿ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೃಹ ಸಚಿವರಾದ ಡಾ.ಜಿ ಪರಮೇಶ್ವರ್ ವೈಸಲಿದ್ದಾರೆ, ಚೇತ ವನದ ಮನೋ ರಖ್ಗಿತ ಬಂತೇಜಿ, ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ, ಸಂಸದರಾದ ಸುನೀಲ್ ಬೋಸ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಗೃಹ ಸಚಿವರಾದ ಡಾ.ಜಿ ಪರಮೇಶ್ವರ್ ರವರ ಪತ್ನಿ ಕನ್ನಿಕ ಪರಮೇಶ್ವರಿ, ಶಾಸಕರಾದ ಗಣೇಶ್ ಪ್ರಸಾದ್, ಪುಟ್ಟರಂಗಶೆಟ್ಟಿ, ದರ್ಶನ್ ಧ್ರುವನಾರಾಯಣ್, ಅನಿಲ್ ಚಿಕ್ಕಮಾದು, ಆರ್ ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಡಾ.ಶಿಲ್ಪನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕವಿತಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ನಂಜನಗೂಡು ತಾಲ್ಲೂಕಿನ ಡಾ ಜಿ ಪರಮೇಶ್ವರ್ ಅಭಿಮಾನಿಗಳ ಬಳಗದ ಪದಾಧಿಕಾರಿಗಳು ಹಾಗೂ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

ನಂತರ ಯುವ ಮುಖಂಡ ಕರಾಟೆ ಎಂ.ಡಿ ಬಾಲರಾಜು ಮಾತನಾಡಿ, ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಇಡೀ ರಾಜ್ಯಕ್ಕೆ ಬೆಂಡರವಾಡಿ ಗ್ರಾಮವು ಮಾದರಿಯಾಗಲಿದೆ. ವಿವಿಧ ಕಾರ್ಯಕ್ರಮಗಳನ್ನು ಅಭಿಮಾನಿಗಳ ಬಳಗದ ವತಿಯಿಂದ ಆಯೋಜನೆ ಮಾಡಿಕೊಂಡು ಬರಲಾಗಿದ್ದು, ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಂಜನಗೂಡು ಮತ್ತು ಮೈಸೂರು ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮ ಸಂಚಾಲಕ ಮಾದೇವ ಭರಣಿ, ಯುವ ಮುಖಂಡ ಎಂ.ಡಿ ಬಾಲರಾಜು ಕರಾಟೆ, ದೇಬೂರು ಅಶೋಕ್, ಮುಳ್ಳೂರು ಮಹದೇವಸ್ವಾಮಿ, ದಲಿತ ಸಂಘರ್ಷ ಸಮಿತಿಯ ಗೀಕಹಳ್ಳಿ ಮಹದೇವಸ್ವಾಮಿ, ಮಂಜು ಶಂಕರಪುರ, ಮುಳ್ಳೂರು ಸ್ವಾಮಿ, ಹೊರಳವಾಡಿ ವೀರಭದ್ರ, ಶಿವರಾಜು, ಕವಲಂದೆ ರಾಹುಲ್, ಲೋಕೇಶ್, ಅರುಣ್, ಹೊಸಹಳ್ಳಿ ಜಯರಾಮ್, ಕೃಷ್ಣಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.