ಮೈಸೂರು: ಡ್ರಗ್ಸ್ ಫ್ಯಾಕ್ಟರಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮೈಸೂರು ಡ್ರಗ್ಸ್ ನಗರವಾಗಿದೆ. ಮಹಾರಾಷ್ಟ್ರ ಪೊಲೀಸರು ಮೈಸೂರಿನಲ್ಲಿ ಬಂದು ರೈಡ್ ಮಾಡಿದ್ದಾರೆ. ಈ ಮಾಹಿತಿ ನಮ್ಮ ಪೊಲೀಸರಿಗೆ ಇರಲಿಲ್ವಾ. ಈ ಪ್ರಕರಣದಲ್ಲಿ ಮೈಸೂರು ಪೊಲೀಸರ ಕೈ ಕಟ್ಟಿ ಹಾಕಲಾಗಿದೆ.
ಸರ್ಕಾರದ ಅಥವಾ ಪ್ರಭಾವಿ ವ್ಯಕ್ತಿಗಳ ಪ್ರಭಾವ ಇದೆ. ಮುಡಾ ಪ್ರಕರಣ ಬಳಿಕ ಮೈಸೂರಿನಲ್ಲಿ ಹಗರಣಗಳೆ ನಡೆಯುತ್ತಿದೆ. ಸಿಎಂ ತವರು ಜಿಲ್ಲೆ ಇದು, ಉಸ್ತುವಾರಿ ಸಚಿವರು ಇದೆ ಜಿಲ್ಲೆಯವರು. ಈ ಘಟನೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಲಕ್ಷ್ಮಿಕಾಂತ ತಳವಾರ್ ಅಮಾನತು ಮಾಡಲಾಗುತ್ತದೆ. ಅಮಾನತು ಮಾಡಿದ 24ಗಂಟೆ ಒಳಗೆ ಅಮಾನತು ಆದೇಶ ವಾಪಾಸ್ ಪಡೆಯಲಾಗುತ್ತದೆ.
ಇದು ಪೊಲೀಸರ ಮೇಲೆ ಇರುವ ಒತ್ತಡವನ್ನ ತೋರಿಸುತ್ತದೆ. ಈ ಪ್ರಕರಣವನ್ನ ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಬೇಕು. ಇಲ್ಲವಾದಲ್ಲಿ ನಾವು ರಾಜ್ಯಪಾಲರು ಮದ್ಯ ಪ್ರವೇಶ ಮಾಡುವಂತೆ ಮನವಿ ಮಾಡುತ್ತೇವೆ ಎಂದು ಮೈಸೂರಿನಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ರಘು ಕೌಟಿಲ್ಯಾ ಹೇಳಿಕೆ ನೀಡಿದರು.

