ಮೈಸೂರು: ಸಚಿವ ಸ್ಥಾನದಿಂದ ಕೆ.ಎನ್ ರಾಜಣ್ಣ ವಜಾ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ದ ವಾಲ್ಮೀಕಿ ನಾಯಕ ಸಮುದಾಯ ತಿರುಗಿ ನಿಂತಿದೆ. ಮೈಸೂರಿನಲ್ಲಿ ಇದೇ ಸೋಮವಾರ ಕಾಂಗ್ರೆಸ್ ಹೈಕಮಾಂಡ್ ವಿರುದ್ದ ಬೃಹತ್ ಪ್ರತಿಭಟನೆ ನಡೆಯಲಿದೆ.
ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಯಲಿದೆ. ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ವತಿಯಿಂದ ಪ್ರತಿಭಟನೆಗೆ ಕರೆ ನೀಡಲಾಗಿದೆ. ಕೆಎನ್ ರಾಜಣ್ಣ ನಮ್ಮ ಸಮುದಾಯದ ಬಹುದೊಡ್ಡ ಶಕ್ತಿ. ನಮ್ಮ ಸಮುದಾಯ ಎಸ್.ಟಿ ಮೀಸಲು ಕ್ಷೇತ್ರಗಳಲ್ಲಿ ಎಲ್ಲಾ ಶಾಸಕರನ್ನು ಕಾಂಗ್ರೆಸ್ ಪಕ್ಷದವರನ್ನೆ ಆಯ್ಕೆ ಮಾಡಿದೆ.
ಸರ್ಕಾರದಲ್ಲಿ ಸಮುದಾಯದ 15 ಜನ ಶಾಸಕರಿದ್ದಾರೆ. ಇಂತಹ ದೊಡ್ಡ ಸಮುದಾಯಕ್ಕೆ ರಾಜಕೀಯವಾಗಿ ಕಾಂಗ್ರೆಸ್ ಅವಮಾನ ಮಾಡುತ್ತಿದೆ. ಯಾವುದೆ ತನಿಖೆ ನೆಡೆಸದೆ ನಾಗೇಂದ್ರ ರವರ ರಾಜೀನಾಮೆ ಪಡೆಯಲಾಯ್ತು. ಇದೀಗ ಕೆ.ಎನ್ ರಾಜಣ್ಣರನ್ನು ಸಚಿವ ಸ್ಥಾನದಿಂದ ವಜಾ ಮಾಡಿದ್ದಾರೆ.
ನಾವೇ ಬೆಂಬಲಿಸಿದ್ದ ಸರ್ಕಾರದ ವಿರುದ್ದ ಇದೀಗ ಬೀದಿಗಿಳಿಯುವ ಸಂಧರ್ಭ ಬಂದಿದೆ. ನಮ್ಮ ಹೋರಾಟದ ಮೂಲಕ ಕಾಂಗ್ರೆಸ್ ಹೈಕಮಾಂಡ್ ಗೆ ತಕ್ಕ ಪಾಠ ಕಲಿಸುತ್ತೇವೆ. ಕೆ.ಎನ್ ರಾಜಣ್ಣರನ್ನು ಮರಳಿ ಸಚಿವ ಸಂಪುಟಕ್ಕೆ ಸೇರ್ಪಡೆ ಗೊಳಿಸಬೇಕು. ನಾಗೇಂದ್ರ ಅವರ ಸ್ಥಾನಕ್ಕೆ ನಮ್ಮದೆ ಸಮುದಾಯದವರನ್ನು ಸಚಿವರನ್ನಾಗಿ ಮಾಡಬೇಕು.
ಇಲ್ಲವಾದಲ್ಲಿ ಮುಂದಿನ ದಿನ ಕಾಂಗ್ರೆಸ್ ಪಕ್ಷ ದೊಡ್ಡ ಹಾನಿ ಅನುಭವಿಸಬೇಕಾಗುತ್ತೆ ಎಂದು ಬೃಹತ್ ಪ್ರತಿಭಟನೆ ಮೂಲಕ ಹೈಕಮಾಂಡ್ ಗೆ ಆಗ್ರಹ ಪಡಿಸುತ್ತೇವೆ ಎಂದು ನಾಯಕರ ಯುವ ಸೇನೆ ರಾಜ್ಯಾಧ್ಯಕ್ಷ ದೇವರಾಜ ಕಾಟೂರು ಹೇಳಿಕೆ ನೀಡಿದರು.

