ಮೈಸೂರು: ಮಳೆಗೆ ರಸ್ತೆ ಕೆಸರು ಗದ್ದೆಯಂತಾಗಿದೆ. ಭತ್ತದ ನಾಟಿ ಮಾಡಲು ದಾರಿ ಅಣಿಯಾದಂತೆ ಕಂಡಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ಪಟ್ಟಣದ ರಸ್ತೆಯಾಗಿದೆ. ಹೌಸಿಂಗ್ ಬೋರ್ಡ್, ಕೆಂಪಾಲಮ್ಮ ಬಡಾವಣೆ, ರಂಗಯ್ಯಂಗಾರ್ ಬಡಾವಣೆ, ಬೆಳಗನಹಳ್ಳಿ ರಸ್ತೆ, ಸ್ಟೇಡಿಯಂ ಬಡಾವಣೆ, ಹನುಮಂತ ನಗರ ಬಡಾವಣೆಗಳ ರಸ್ತೆ ದುಸ್ಥಿತಿ ಕಂಡಿದೆ.
ರಸ್ತೆ ದಾಟಲು ದಾರಿ ಹೋಕರು ಹರಸಾಹಸ ಪಡುತ್ತಿದ್ದಾರೆ. ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು ವಯೋವೃದ್ದರಿಂದ ಹಿಡಿಶಾಪ ಹಾಕುತ್ತಿದ್ದಾರೆ. ರಸ್ತೆ ಸರಿಪಡಿಸಿ ಅಂತ ಜನರು ಆಗ್ರಹಿಸಿದರು. ಕ್ಯಾರೆ ಎನ್ನದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

