Showing 20 of 2247 posts • Page 26 of 113
ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ಮಧ್ಯೆ ರಾತ್ರಿ ಶ್ರೀ ಮಹದೇಶ್ವರಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ಜರುಗಿದೆ. ನಡುರಾತ್ರಿಯಲ್ಲೇ ರಥವನ್ನು ಗ್ರಾಮಸ್ಥರು ಪುನೀತರಾದರು. ಎರಡು ದಿನಗಳ ಕಾಲ ನಡೆಯುವ ಚುಂಚನಹಳ್ಳಿ ಶ್ರೀ ಮಹದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಸೋಮವಾರ ಮಧ್ಯರಾತ್ರಿ 12 ಗಂಟೆಯಲ್ಲಿ ಶ್ರೀ ಮಹದೇಶ್ವರ ಸ್ವಾಮಿಯ ರಥೋತ್ಸವವು ವಿಜೃಂಭಣೆಯಿಂದ ನಡೆದಿದೆ.
ಗಮನ ಬೇರೆಡೆ ಸೆಳೆದು ವೃದ್ದೆಯ 40 ಗ್ರಾಂ ಮಾಂಗಲ್ಯ ಸರ ಲಪಟಾಯಿಸಿದ ಘಟನೆ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೈಸೂರು: ಮುಡಾ ಇದೀಗ ಎಂಡಿಎ ಹಗರಣಗಳು ಸಾಕಷ್ಟು ಬಯಲಿಗೆ ಬಂದಿದೆ. ಹಗರಣಗಳಿಂದ ಬೇಸತ್ತ ಸರ್ಕಾರ ಮುಡಾ ಗೆ ಮೇಜರ್ ಸರ್ಜರಿ ಮಾಡಿ ಮೈಸೂರು ಅಭಿವೃದ್ದಿ ಪ್ರಾಧಿಕಾರ ಎಂದು ಬದಲಿಸಿದೆ. ಹೀಗಿದ್ದರೂ ಇನ್ನೂ ಅಧಿಕಾರಿಗಳಾಗಲಿ ಕಾನೂನು ಶಾಖೆಯಾಗಲಿ ಎಚ್ಚೆತ್ತುಕೊಂಡಿಲ್ಲ. ಭ್ರಷ್ಟ ಅಧಿಕಾರಿಯ ಪರ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಸರ್ಕಾರದ ಕೆಂಗಣ್ಣಿಗೂ ಗುರಿಯಾಗಿದೆ. ಅಮಾನತಿನಲ್ಲಿರುವ ವಿಶೇಷ ತಹಸೀಲ್ದಾರ್ ಪರ ನಿಂತ ಪ್ರಾಧಿಕಾರಕ್ಕೆ ಸರ್ಕಾರ ಚಾಟಿ ಬೀಸಿ ಬಿಸಿ ಮುಟ್ಟಿಸಿದೆ. ಭ್ರಷ್ಟ ಅಧಿಕಾರಿ ನಡೆಸಿದ ಅಕ್ರಮದ ಬಗ್ಗೆ ದಾಖಲೆಗಳ ಸಮೇತ […]
ಬೇಸಿಗೆ ಬೆನ್ನಲ್ಲೇ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ನೀರಿನ ಕೊರತೆಗೆ ಅವಕಾಶ ನೀಡಬಾರದೆಂದು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದರೂ ಅಭಾವ ಶುರುವಾಗಿದೆ. ಕೆ.ಆರ್.ನಗರ ಪುರಸಭೆ 6 ನೇ ವಾರ್ಡ್ ಅರ್ಕೇಶ್ವರ ನಗರದಲ್ಲಿ ಕಳೆದ 6 ತಿಂಗಳಿಂದ ನೀರಿನ ಸಮಸ್ಯೆಗೆ ಪರಿಹಾರ ದೊರೆತಿಲ್ಲ.
ಕಳೆದ 10 ದಿನಗಳ ಹಿಂದೆ ನಗರದ ಬೇಕರಿಯೊಂದರಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರೋಡೆಕೋರನೊಬ್ಬನನ್ನು ನಂಜನಗೂಡು ಪಟ್ಟಣ ಪೊಲೀಸರು ಬಂಧಿಸಿದ್ದಾರೆ.
2025-26ನೇ ಸಾಲಿನ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಬಜೆಟ್ ಜಿಲ್ಲಾಧಿಕಾರಿ, ಮೂಡ ಅಧ್ಯಕ್ಷ ಲಕ್ಷ್ಮಿಕಾಂತ ರೆಡ್ಡಿ ನೇತೃತ್ವದಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಮಂಡನೆ ಮಾಡಲಾಯಿತು.
ವಾತ್ಸಲ್ಯ ಯೋಜನೆಯಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ನಿರ್ಗತಿಕ ಮಹಿಳೆಗೆ ಸೂರು ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ .
ನಗರದ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಸಮೀಪವಿರುವ ಹೆಜ್ಜಿಗೆ ಗ್ರಾಮದ ಬಳಿಯ ಕಪಿಲಾ ನದಿ ತೀರದಲ್ಲಿ ದಶಕಗಳಿಂದ ಬೆಳೆದ ನಿಂತಿದ್ದ ಬೃಹತ್ ಮರಗಳನ್ನು ಕಡಿದು ಹಾಕುತ್ತಿದ್ದರೂ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದು, ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಹೈಕಮಾಂಡ್ ಅವಕಾಶ ಕೊಟ್ಟರೆ ಮತ್ತೆರಡು ಬಜೆಟ್ ಮಂಡನೆ ಮಾಡುತ್ತೇನೆ. ಅವರು ಮುಂದುವರೆಯಿರಿ ಎಂದರೆ ಮುಂದುವರೆಯುತ್ತೇನೆ. ಎಲ್ಲದೂ ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಖದೀಮರನ್ನು ಕವಲಂದೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳವು ಮಾಡಿದ್ದ 2.28 ಲಕ್ಷ ನಗದು ಹಾಗೂ 22 ಗ್ರಾಂ ಚಿನ್ನದ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ.
ಸುರಕ್ಷತಾ ಪರಿಕರಗಳನ್ನ ಧರಿಸದೆ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಮಾಡುವಂತಿಲ್ಲ. ಪೌರಕಾರ್ಮಿಕರ ಸುರಕ್ಷತೆಗಾಗಿ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನ ಜಾರಿಗೊಳಿಸಿದೆ. ಆದ್ರೆ ನಂಜನಗೂಡಿನಲ್ಲಿ ಪೌರಕಾರ್ಮಿಕರಿಗೆ ಇರುವ ಸುರಕ್ಷತಾ ಕ್ರಮ ಮಾಯವಾಗಿದೆ.
ಕರ್ನಾಟಕ ರಾಜ್ಯ ರೈತ ಸಂಘಕ್ಕೆ ನಂಜನಗೂಡಿನಲ್ಲಿ ನೂತನವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನಂಜನಗೂಡು ನಗರದ ಎಪಿಎಂಸಿ ಆವರಣದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶಿರಮಳ್ಳಿ ಸಿದ್ದಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಹೆಜ್ಜಿಗೆ ಪ್ರಕಾಶ್ ರವರ ನೇತೃತ್ವದಲ್ಲಿ ಸರಗೂರು, ಹೆಚ್. ಡಿ ಕೋಟೆ ಮತ್ತು ನಂಜನಗೂಡು ಸಂಘದ ನೂತನ ಪದಾಧಿಕಾರಿಗಳ ಮೂಲಕ ಸಂಘಟನೆಗೆ ಕಾಲಿಟ್ಟರು.
ಟ್ರೇಡಿಂಗ್ ನೆಪದಲ್ಲಿ ವೈದ್ಯರೊಬ್ಬರಿಗೆ 22 ಲಕ್ಷ ವಂಚಿಸಿದ ಪ್ರಕರಣ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ವಿಜಯನಗರದ ನಿವಾಸಿ ವೃತ್ತಿಯಲ್ಲಿ ವೈದ್ಯರಾದ ಕಂಠೇಶ್ ಕೆ ಕಟ್ಟಿ ಎಂಬುವರೇ ವಂಚನೆಗೆ ಒಳಗಾದವರು.
ಅಮೆರಿಕ ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸುಪ್ರೀಂ ಲೀಡರ್ ಸಾವು ವಿಚಾರವಾಗಿ ಮೈಸೂರು ಪಿರಿಯಾಪಟ್ಟಣದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಶಿಯಾ ಮುಸ್ಲಿಂ ಸಮುದಾಯದಿಂದ ಮೇಣದಬತ್ತಿ ಬೆಳಗಿ ಮೌನ ಪ್ರತಿಭಟನೆ ನಡೆಸಲಾಯಿತು.
ವೈದ್ಯೆಯೊಬ್ಬರು ನೀಡಿದ ಚಿಕಿತ್ಸೆ ಫಲಕಾರಿಯಾಗದೆ ಸಮಸ್ಯೆ ಉಲ್ಭಣವಾಗಿ ರೋಗಿ ICU ದಾಖಲಾದ ಆರೋಪ ನಂಜನಗೂಡಿನಲ್ಲಿ ಬೆಳಕಿಗೆ ಬಂದಿದೆ. ಚಿಕಿತ್ಸೆ ನೀಡಿದ ಬಗ್ಗೆ ಮಾಹಿತಿ ನೀಡದೆ ಉಡಾಫೆ ವರ್ತನೆ ತೋರಿದ ವೈದ್ಯೆ ವಿರುದ್ದ ಕ್ರಮ ಕೈಗೊಳ್ಳುವಂತೆ ರೋಗಿ ಆರೋಗ್ಯಾಧಿಕಾರಿಗೆ ದೂರು ನೀಡಿದ್ದಾರೆ.
ಸಂಸದ ಸುನಿಲ್ ಬೋಸ್ ರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಮಾಡಲಾಯಿತು. ಟಿ ನರಸೀಪುರ ವಿಧಾನಸಭಾ ಕ್ಷೇತ್ರದ ಚೌಹಳ್ಳಿ ಮಾದಾಪುರ ಸೇರಿದಂತೆ ವಿವಿಧ ಗ್ರಾಮಗಳಿಗೆ ಸಂಸದ ಸುನಿಲ್ ಬೋಸ್ ಭೇಟಿ ನೀಡಿದರು.
ಚಂದ್ರ ಗ್ರಹಣ ಹಿನ್ನೆಲೆ ಮೈಸೂರಿನ ಚಾಮುಂಡೇಶ್ವರಿ ದೇವರ ದರ್ಶನದಲ್ಲಿ ಬದಲಾವಣೆ ಮಾಡಲಾಗಿದೆ. ಗ್ರಹಣ ಹಿನ್ನೆಲೆ ಮಧ್ಯಾಹ್ನ 2 ಗಂಟೆಗೆ ದೇವಾಲಯ ಬಂದ್ ಮಾಡಲಾಗಿದೆ.
ಮಾರ್ಚ್ 06 ರಂದು ಬಜೆಟ್ ಮಂಡನೆ ಆಗುತ್ತಿದ್ದು, ನಮ್ಮ ನಂಜನಗೂಡು ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಅನುದಾನವನ್ನು ನೀಡುತ್ತಾರೆ ಎಂಬ ಭರವಸೆ ನನಗಿದೆ ಎಂದು ಶಾಸಕ ದರ್ಶನ್ ಧ್ರುವ ನಾರಾಯಣ್ ತಿಳಿಸಿದರು.
ಮಾರ್ಚ್ 03 ರಂದು ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿಯ ದೇವಾಲಯದಲ್ಲಿ ಗ್ರಹಣ ದಿನದಂದು ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಭಕ್ತರು ಎಂದಿನಂತೆ ದೇವಾಲಯಕ್ಕೆ ಬಂದು ದೇವರ ದರ್ಶನ ಪಡೆಯಬಹುದಾಗಿದೆ.
ಒಳ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿ ಬಲಗೈ ಸಂಬಂಧಿತ ಜಾತಿಗಳಿಗೆ ಆಗಿರುವ ಅನ್ಯಾಯವನ್ನು ಖಂಡಿಸಿ ಬಲಗೈ ಜಾತಿ ಒಳ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.