ಮೈಸೂರು : SSLCಯಲ್ಲಿ ನಿರೀಕ್ಷೆಯಂತೆ ಅಂಕ‌ ಬರದ ಹಿನ್ನೆಲೆ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದರೂ ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದಾರೆ. ನಂಜನಗೂಡಿನ ಶ್ರೀ ಗುರುಮಲ್ಲೇಶ್ವರ ಖಾಸಗಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಬಾಲಕಿ ವಿದ್ಯಾಭ್ಯಾಸ ಮಾಡುತ್ತಿದ್ದಳು.

ಪ್ರಥಮ ದರ್ಜೆಯಲ್ಲಿ ಪಾಸ್ ಆಗಿದ್ದರು ಕೂಡ ಕಡಿಮೆ ಅಂಕ ಬಂದಿದೆ ಎಂದು ಮನನೊಂದು ನೇಣಿಗೆ ಶರಣಾಗಿದ್ದು, ನಂಜನಗೂಡು ತಾಲೂಕಿನ ಕುರಹಟ್ಟಿ ಗ್ರಾಮದ ಮಂಜು, ಸವಿತಾ ದಂಪತಿ ಪುತ್ರಿ ತ್ರಿಶಾಲ 16 ಮೃತ ಬಾಲಕಿ. 440 ಅಂಕಗಳನ್ನು ಗಳಿಸಿ ಪ್ರಥಮ ದರ್ಜೆಯಲ್ಲಿ ಮೃತ ಬಾಲಕಿ ತೇರ್ಗಡೆಯಾಗಿದ್ದಳು.

ಪರೀಕ್ಷೆಯನ್ನು ಡಿಸ್ಟಿಂಕ್ಷನ್ ಬರುವ ಮಟ್ಟಕ್ಕೆ ಬರೆದಿದ್ದೇನೆ ಎಂದುಕೊಂಡಿದ್ದಳು. ಪ್ರಥಮ ದರ್ಜೆಯಲ್ಲಿ ತೆರ್ಗಡೆಯಾಗಿರುವುದು ಕಡಿಮೆ ಅಂಕ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ನೇಣಿಗೆ ಶರಣಾಗಿದ್ದಾರೆ.