ಮೈಸೂರು: ತಿ. ನರಸೀಪುರ ತಾಲ್ಲೂಕಿನ ಕೈಯಂಬಳ್ಳಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ ಬಿ. ಆರ್.ಅಂಬೇಡ್ಕರ್ ರವರ 135ನೇ ಜನ್ಮದಿನಾಚರಣೆ ಅಂಗವಾಗಿ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಭೀಮೋತ್ಸವನ್ನು ಆಚರಿಸಲಾಯಿತು.
ಗ್ರಾಮದ ಜೈ ಭೀಮ್ ಯುವಜನ ಕ್ರೀಡಾ ಮತ್ತು ಸಾಮಾಜಿಕ ಸಾಂಸ್ಕೃತಿಕ ಸಂಘದ ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್ ಅಂಬೇಡ್ಕರ್ ರವರ ಜಯಂತೋತ್ಸವವನ್ನು ಮೈಸೂರು ವಿವಿ ಉಪನ್ಯಾಸಕ ಡಾ.ಕೆ.ಪಿ ರಮೇಶ್ ಉದ್ಘಾಟಿಸಿ, ಮಾತನಾಡಿದ ಅವರು, ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಪಾಲಿಸುವಂತಾಗಬೇಕು. ಅವರ ಆದರ್ಶ ಕೇಳಿಸಿಕೊಂಡರೆ ಸಾಲದು, ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವ ನೀಡಿದಂತಾಗುತ್ತದೆ ಎಂದು ಸಲಹೆ ನೀಡಿದರು.
ಸಾಮಾಜಿಕ ಸಮಾನತೆಗಾಗಿ ಹೋರಾಟ ಮಾಡಿದ ಮಹಾ ಪುರುಷ ಅಂಬೇಡ್ಕರ್. ದೇಶದಲ್ಲಿ ಆಚರಣೆಯಲ್ಲಿದ್ದ ಅಸ್ಪೃಶ್ಯತೆ ವಿರುದ್ಧ ದನಿ ಎತ್ತಿ, ಶೋಷಣೆ ಮತ್ತು ತುಳಿತಕ್ಕೊಳಗಾದವರಿಗೆ ಮೀಸಲಾತಿಯನ್ನು ಕಲ್ಪಿಸುವ ಮೂಲಕ ಸಮಾನತೆಯನ್ನು ಸಾರಿದರು. ಅವರು ಪ್ರತಿಯೊಂದು ಸಮುದಾಯದ ಜನರಿಗೂ ಮೀಸಲಾತಿಯನ್ನು ಕಲ್ಪಿಸಿದ್ದಾರೆ. ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸೀಮಿತವಾಗಿಲ್ಲ. ಎಲ್ಲರೂ ಅವರ ಋಣದಲ್ಲಿ ಇದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹರೀಶ್, ಮಾಜಿ ಗ್ರಾಪಂ ಅಧ್ಯಕ್ಷೆ ನಾಗಮಣಿ, ಗ್ರಾಮದ ಮುಖಂಡರಾದ ಎಸ್ ಗಿರಿಯಯ್ಯ, ಸ್ವಾಮಿ, ನಾಗಣ್ಣ ಮಹದೇವಶೆಟ್ಟರು, ನಾಗೇಶ್, ಮಲ್ಲಿಕಾರ್ಜುನ, ಕೃಷ್ಣ, ಸಂಘದ ಅಧ್ಯಕ್ಷ ಸಿದ್ದರಾಜು, ಗೌರವಾಧ್ಯಕ್ಷ ಕೃಷ್ಣ, ಮಾರ್ಗದರ್ಶಕ ಎಸ್ ಗಿರಿಯಯ್ಯ, ಉಪಾಧ್ಯಕ್ಷ ಮೋಹನ್ ಕುಮಾರ್, ಕಾರ್ಯದರ್ಶಿ ಮಹೇಶ್, ಸಹ ಕಾರ್ಯದರ್ಶಿ ಅಭಿನಂದನ್, ಕಾರ್ಯಕಾರಿ ಸಮಿತಿಯ ಕೀರ್ತಿ, ಖಜಾಂಚಿ ಶಿವರಾಜ್ ಕುಮಾರ್, ಸಹ ಖಜಾಂಚಿ ಹರ್ಷನ್, ಸಂಚಾಲಕರಾದ ಮಣಿಕಂಠ, ಸಾಗರ್
ಕ್ರೀಡಾ ಸಮಿತಿಯ ಮಂಜುನಾಥ, ಮಹದೇವಸ್ವಾಮಿ, ಜಾನಪದ ಸಮಿತಿಯ ಇಂದ್ರಮ್ಮ, ನಾಗರಾಜು, ಮಹೇಶ್ವರಿ, ಪದ್ಮ, ನಾಗಯ್ಯ, ಪುಟ್ಟಸ್ವಾಮಿ, ಮಹದೇವಯ್ಯ, ಕೆ.ಜಿ ಗೋವರ್ಧನ್,
ಹರ್ಷವರ್ಧನ್, ಮಹದೇವಮೂರ್ತಿ, ಮಂಜುನಾಥ್ (ಡೈರಿ) ಮಹಾದೇವಪ್ರಸಾದ್, ಕಿರಣ್, ಪ್ರಮೋದ್, ವಿಶ್ವನಾಥ್, ಸಿದ್ದಾರ್ಥ್, ಶಶಾಂಕ್, ರಾಜೇಶ್, ಅಕ್ಷಯ್ ಕುಮಾರ್, ಮದನ್, ಕಿರಣ್, ಶಿವಣ್ಣ, ನಂಜುಂಡಸ್ವಾಮಿ, ಮಹದೇವಸ್ವಾಮಿ, ಮಹೇಶ್, ಪ್ರದೀಪ್, ಅರ್ಜುನ್, ಮನೋಜ್ ಸಂಜಯ್, ಸುನೀಲ್, ಮಹೇಶ್, ದರ್ಶನ್, ಅಭಿಷೇಕ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು, ಮಹಿಳೆಯರು ಹಾಜರಿದ್ದರು.

