ನಂಜನಗೂಡು: ಸ್ಯಾಂಟ್ರೋ ಕಾರ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೋರ್ವ ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೈಕ್ ಸವಾರ ಭರತ್ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದರೆ ಹಿಂಬದಿ ಸವಾರ ಚೇತನ್ ಗಂಭೀರವಾಗಿ ಗಾಯಗೊಂಡು ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಯಡಿಯಾಲ ಹಾಗೂ ಬೇಗೂರು ಮಧ್ಯೆ ಈರೇಗೌಡನ ಹುಂಡಿ ಮತ್ತು ಹೊಸವೀಡು ಗ್ರಾಮದ ಗೇಟ್ ಬಳಿ ಇರುವ ಆಲದ ಮರದ ಹತ್ತಿರ ಭರತ್ ಕುಮಾರ್ ಹಾಗೂ ಚೇತನ್ ನಂಬರ್ ಪ್ಲೇಟ್ ಇಲ್ಲದ ಯಮಾಹಾ ಬೈಕ್ ನಲ್ಲಿ ತೆರಳುತ್ತಿದ್ದಾಗ ಸ್ಯಾಂಟ್ರೋ ಕಾರು ವೇಗವಾಗಿ ಬಂದು ಢಿಕ್ಕಿ ಹೊಡೆದ ಪರಿಣಾಮ ಭರತ್ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದರೆ ಚೇತನ್ ಗಂಭೀರ ಗಾಯಗೊಂಡಿದ್ದಾನೆ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸ್ಯಾಂಟ್ರೋ ಕಾರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.