Showing 20 of 1934 posts • Page 13 of 97
ಅಪರಾಧ ಪತ್ತೆ ದಳ ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಕೇರಳಾ ರಾಜ್ಯದ ಲಾಟರಿ ಟಿಕೆಟ್ ಗಳನ್ನ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ನಗರದ ಕಲ್ಯಾಣ ಮಂಟಪದಲ್ಲಿ ಮದುವೆಗೆ ಆಗಮಿಸಿದ್ದ ಮಹಿಳೆಯೊಬ್ಬರು ಕಳೆದುಕೊಂಡಿದ್ದ ಪರ್ಸ್ ನ್ನು ನಗರದ ಉದ್ಯಮಿಯೊಬ್ಬರು ವಾಪಸ್ಸು ನೀಡಿ ಮಾನವೀಯತೆ ಮೆರೆದಿರುವುದು ನಗರದಲ್ಲಿ ಮಂಗಳವಾರ ಕಂಡು ಬಂದಿದೆ.
ನಾಲೆಗಳು ಕೆರೆಕಟ್ಟೆಗಳಿಗೆ ನೀರು ಬಿಡುವಂತೆ ರೈತರಿಂದ ಮೈಸೂರಿನ ಕಾಡಾ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಮೈಸೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಕಾರು ಕದ್ದಿದ್ದ ಕಳ್ಳನನ್ನು ಬಂಧಿಸಲಾಗಿದೆ. ಬಂಧಿತನಿಂದ 14 ಲಕ್ಷ ಮೌಲ್ಯದ ಥಾರ್ ವಾಹನ ವಶಕ್ಕೆ ಪಡೆಯಲಾಗಿದೆ.
ಕಾವೇರಿ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಿದ ಘಟನೆ ಕೆ.ಆರ್.ನಗರ ತಾಲೂಕಿನ ಕಪ್ಪಡಿ ದೇವಸ್ಥಾನದ ಬಳಿ ನಡೆದಿದೆ.
ಕಂಟೇನರ್ ನಲ್ಲಿ ಗೋವುಗಳನ್ನು ತುಂಬಿಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ತಡೆದಿದ್ದಾರೆ. KA01 AG 4796 ನಂಬರ್ ನ ಕಂಟೇನರ್ ನಲ್ಲಿ ಸುಮಾರು 38 ಜಾನುವಾರುಗಳನ್ನು ಕೊಂಡೊಯ್ಯಲಾಗುತ್ತಿತ್ತು. ಮೈಸೂರಿನ ನಂಜನಗೂಡು ಮಾರ್ಗವಾಗಿ ತರುವ ವೇಳೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಗ್ರಾಮದೇವತೆ ಜಾತ್ರೇಲಿ ಕುಡಿದು ಗಲಾಟೆ ಮಾಡಿದ್ರೆ, ಹೆಣ್ಣು ಮಕ್ಕಳ ವಿಡಿಯೋ ಮಾಡಿದ್ರೆ 30 ಸಾವಿರ ದಂಡ ವಿಧಿಸುವ ವಾರ್ನಿಂಗ್ ನೀಡಲಾಗಿದೆ. ನಂಜನಗೂಡು ತಾಲ್ಲೂಕು ಗೋಳೂರು ಗ್ರಾಮದಲ್ಲಿ ಡಂಗುರ ಭಾರಿಸಿ ಎಚ್ಚರಿಕೆ ನೀಡಲಾಗಿದೆ.
ಮಾರ್ಚ್ 30 ರಂದು ನಂಜನಗೂಡಿನಲ್ಲಿ ನಡೆಯುವ ದೊಡ್ಡ ಜಾತ್ರೆಗೆ ಲಕ್ಷಾಂತರ ಜನ ಆಗಮಿಸುತ್ತಾರೆ. ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಆಗದಂತೆ ಕಟ್ಟುನಿಟ್ಟಾಗಿ ಬ್ಯಾರಿಕೆಡ್ ಗಳನ್ನು ಅಳವಡಿಸುವ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಂಟೇನರ್ ವಾಹನದಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳನ್ನು ಕವಲಂದೆ ಪೊಲೀಸರು ರಕ್ಷಿಸಿ ಮೈಸೂರಿನ ಪಿಂಜಾರಪೋಲ್ ಗೆ ರವಾನಿಸಿದ್ದಾರೆ.
ಕಾರ್ ರೇಸ್ ವೇಳೆ ಭೀಕರ ಅಪಘಾತ ಸಂಭವಿಸಿದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಳಿಮಾವು ಬಳಿ ನಡೆದಿದೆ. ಡ್ರೈವರ್ ಗೆ ಗಂಭೀರ ಗಾಯಗಳಾಗಿದೆ.
ಹಳೆಯ ವಸ್ತು ಸಂಗ್ರಹಿಸಿದ್ದ ಗೋದಾಮಿಗಳಿಗೆ ಬೆಂಕಿ ತಗುಲಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ದೇಶದಲ್ಲಿ ಗೋ ಹತ್ಯೆಯನ್ನು ನಿಷೇಧ ಮಾಡಬೇಕು. ಗೋವನ್ನು ರಾಷ್ಟ್ರೀಯ ಎರಡನೇ ಪ್ರಾಣಿ ಎಂದು ಘೋಷಣೆ ಮಾಡಬೇಕು ಎಂದು ಹಂಗರಹಳ್ಳಿಯ ಕೆ.ಜಿ ದೇವಪಟ್ಟಣದ ಶೃಂಗೇರಿ ಶಾರದಾ ಪೀಠ, ಶ್ರೀ ವಿದ್ಯಾ ಚೌಡೇಶ್ವರಿ ಮಹಾ ಸಂಸ್ಥಾನ ಮಠದ ಶ್ರೀ ವಿದ್ಯಾನಂದ ಸ್ವಾಮೀಜಿ ಹೇಳಿದರು.
ಇಟ್ಟಿಗೆ ತಯಾರಿಸುವ ಯಂತ್ರ ಕೊಡುವುದಾಗಿ ನಂಬಿಸಿ ಕೇರಳಾ ರಾಜ್ಯದ ಉದ್ಯಮಿ ಮೈಸೂರಿನ ಸಿವಿಲ್ ಕಂಟ್ರಾಕ್ಟರ್ ಗೆ 25 ಲಕ್ಷ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.
ದಕ್ಷಿಣಕಾಶಿ ನಂಜನಗೂಡಿನ ಶ್ರೀಕಂಠೇಶ್ವರನ ದೇವಾಲಯಕ್ಕೆ ಬರುವ ಭಕ್ತರನ್ನ ಸುಲಿಗೆ ಮಾಡುತ್ತಿರುವ ಆರೋಪ ಕೇಳಿಬಂದಿದೆ.ಪಾರ್ಕಿಂಗ್ ಶುಲ್ಕದಲ್ಲಿ ನಿಗದಿತ ದರಕ್ಕಿಂತಲೂ ಹೆಚ್ಚು ವಸೂಲಿ ಮಾಡುವ ಮೂಲಕ ಹಗಲು ದರೋಡೆ ಮಾಡುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.ದಾಖಲೆ ಸಮೇತ ರೆಡ್ ಹ್ಯಾಂಡಾಗಿ ಹಿಡಿದರೂ ದೇವಾಲಯ ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದೆ.
ಮೈಸೂರು: ನಗರ ಸಿಸಿಬಿ ಪೊಲೀಸರು ನೀಡಿದ ಖಚಿತ ಮಾಹಿತಿ ಆಧಾರದ ಮೇರೆಗೆ ಉದಯಗಿರಿ ಠಾಣಾ ವ್ಯಾಪ್ತಿಯ ಸಾತಗಳ್ಳಿಯಲ್ಲಿರುವ ಮೂನ್ ಬಕ್ಸ್ ಕೆಫೆ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರನ್ನ ಬಂಧಿಸಿ 1.20 ಲಕ್ಷ ಮೌಲ್ಯದ 11 ಗ್ರಾಂ 90 ಮಿಲಿ ತೂಕದ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಅಮೀರ್ ಖಾನ್ ಸೈಯದ್ ಇಮ್ರಾನ್ ಮಹಮ್ಮದ್ ನಬೀಲ್ ಬಂಧಿತ ಆರೋಪಿಗಳು. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಮೂವರು ಆರೋಪಿಗಳ ಪೈಕಿ ಅಮೀರ್ ಖಾನ್ […]
ನಗರದ ಕಾಮಾಕ್ಷಿ ಬಾಯಿ ಕಲ್ಯಾಣ ಮಂಟಪದಲ್ಲಿ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ನಂಜನಗೂಡು ಕೇಂದ್ರ ಘಟಕವನ್ನು ಶಾಸಕ ದರ್ಶನ್ ಧ್ರುವನಾರಾಯಣ್ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಬಿಎಐ ನಂಜನಗೂಡು ಕೇಂದ್ರ ಘಟಕವನ್ನು ಉದ್ಘಾಟನೆ ಮಾಡಿರುವುದು ನನಗೆ ಸಂತಸ ತಂದಿದೆ. 1941 ರಲ್ಲಿ ಸಂಸ್ಥೆಯು ಪ್ರಾರಂಭವಾಗಿ ಇತಿಹಾಸ ಪುಟಕ್ಕೆ ಸೇರಿದೆ.
ವಿದ್ಯುತ್ ಸ್ಪರ್ಶದಿಂದಾಗಿ ಕಾಡಾನೆ ಸಾವನ್ನಪ್ಪಿದ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ಬೈಲಕುಪ್ಪೆ ಸಮೀಪ ದೊಡ್ಡಹಾರವೇ ಅರಣ್ಯ ಮೀಸಲು ಪ್ರದೇಶದಲ್ಲಿ ನಡೆದಿದೆ.
ನಂಜನಗೂಡಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಶಾಸಕ ದರ್ಶನ್ ಧ್ರುವನಾರಾಯಣ್ ಮಟ ಮಟ ಮಧ್ಯಾಹ್ನ ದಿಢೀರ್ ಭೇಟಿ ನೀಡಿ, ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ. ಶಾಸಕರ ದಿಢೀರ್ ಭೇಟಿಗೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ತಬ್ಬಿಬ್ಬಾಗಿ ನಿಂತರು.
ಬೇಸಿಗೆ ಆರಂಭಕ್ಕೂ ಮೊದಲೇ ಅರಣ್ಯದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ವರುಣಾ ವಿಧಾನಸಭಾ ಕ್ಷೇತ್ರದ ಕೋಣನೂರು ಮತ್ತು ಚುಂಚನಹಳ್ಳಿ ಕಿರು ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
ಬೈಕ್ ಮತ್ತು ಗೊಬ್ಬರದ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ, ಸ್ಥಳದಲ್ಲಿಯೇ ಇಬ್ಬರು ದುರ್ಮರಣ ಹೊಂದಿದ ಘಟನೆ ನಂಜನಗೂಡು ತಾಲ್ಲೂಕಿನ ಹನುಮನಪುರ ಗೇಟ್ ಬಳಿ ನಡೆದಿದೆ.