News Karnataka Kannada
Thursday, April 25 2024
Cricket
ಚಿಕಮಗಳೂರು

ಜಾನುವಾರು ಆರೋಗ್ಯ ದೃಷ್ಟಿಯಿಂದ ಪಶು ಚಿಕಿತ್ಸಾಲಯ ಆರಂಭ

ಗ್ರಾಮದ ಜಾನುವಾರುಗಳು ತುರ್ತು ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲಬಾರದೆಂಬ ದೃಷ್ಟಿಯಿಂದ ಗ್ರಾಮದ ಮುಖ್ಯದ್ವಾರದಲ್ಲೇ ಪಶು ಚಿಕಿತ್ಸಾಲಯ ಆರಂಭಿಸಲಾಗಿದೆ ಎಂದು ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಹೇಳಿದರು.
Photo Credit : News Kannada

ಚಿಕ್ಕಮಗಳೂರು:  ಗ್ರಾಮದ ಜಾನುವಾರುಗಳು ತುರ್ತು ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲಬಾರದೆಂಬ ದೃಷ್ಟಿಯಿಂದ ಗ್ರಾಮದ ಮುಖ್ಯದ್ವಾರದಲ್ಲೇ ಪಶು ಚಿಕಿತ್ಸಾಲಯ ಆರಂಭಿಸಲಾಗಿದೆ ಎಂದು ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಹೇಳಿದರು. ತಾಲೂಕಿನ ಅಂಬಳೆ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಪಶುಚಿಕಿತ್ಸಾಲಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಾನುವಾರುಗಳು ದಿಡೀರನೇ ಆರೋಗ್ಯ ಸಮಸ್ಯೆ ಎದುರಾದರೆ ಸೂಕ್ತ ಚಿಕಿತ್ಸೆ ಕೊಡಿಸುವ ಸಂಬಂಧ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಅತಿಯಾದ ಬಿಸಿಲು, ಬಾಯಾರಿಕೆ ಹಾಗೂ ನೀರಿನ ಅಭಾವದಿಂದ ಜಾನುವಾರುಗಳ ಆರೋಗ್ಯ ಸ್ಥಿತಿ ಹದಗೆಡುವ ಸಂಭವವಿರುವುದರಿಂದ ಪಟ್ಟಣಕ್ಕೆ ತಕ್ಷಣವೇ ಕರೆದೊಯ್ಯಲು ಕಷ್ಟಸಾಧ್ಯ. ಹೀಗಾಗಿ ಗ್ರಾಮದಲ್ಲೇ ತಾತ್ಕಾಲಿಕ ಚಿಕಿತ್ಸಾಲಯ ತೆರೆದಿದ್ದು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಸುಧಾರಿಸಲಿವೆ ಎಂದು ತಿಳಿಸಿದರು.

ಗ್ರಾಮದಲ್ಲಿ ಪಶು ಚಿಕಿತ್ಸಾಲಯ ತೆರೆಯಬೇಕೆಂಬ ಬೇಡಿಕೆಯಿದ್ದ ಹಿನ್ನೆಲೆಯಲ್ಲಿ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿದ ಬಳಿಕ ನೂತನ ಆಸ್ಪತ್ರೆಗೆ ಮಾತ್ರ ಅವಕಾಶವಿರುವ ಕಾರಣ ಸದ್ಯಕ್ಕೆ ತಾತ್ಕಾಲಿಕ ಕೇಂದ್ರ ಆರಂಭಿಸಿ ದ್ದು ಮುಂದೆ ಗ್ರಾಮದಲ್ಲೇ ಜಾಗ ಗುರುತಿಸಿ ಸಕಲ ಸೌಕರ್ಯಗಳನ್ನು ಒಳಗೊಂಡ ಪರಿಪೂರ್ಣ ಪಶು ಚಿಕಿತ್ಸಾ ಕೇಂದ್ರ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ಅಂಬಳೆ ಹೋಬಳಿ ಮೇಲ್ದರ್ಜೇಗೇರಿಸುವುದು. ಹಾಲಿನ ಡೈರಿ ನಿರ್ಮಾಣ ಹಾಗೂ ಜಾನುವಾರುಗಳಿಗೆ ಪಶು ಚಿಕಿತ್ಸಾಲಯ ಸಂಬಂಧ ಜನ ಸಂಪರ್ಕ ಸಭೆಯಲ್ಲಿ ಗ್ರಾಮಸ್ಥರು ಒಕ್ಕೊರಲಿನಿಂದ ಮನವಿ ಮೇರೆಗೆ ಇದೀಗ ಪಶು ಚಿಕಿತ್ಸಾಲಯ ಕಲ್ಪಿಸಲಾಗಿದ್ದು ಮುಂಬರುವ ದಿನಗಳಲ್ಲಿ ಒಂದೊಂದೇ ಸೌಕರ್ಯಗಳನ್ನು ಪೂರೈಸಲು ಶ್ರಮ ವಹಿಸಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ವಿ.ಮಂಜುನಾಥ್ ಮಾತನಾಡಿ ಅಂಬಳೆ ಹಾಗೂ ಮುಗುಳುವಳ್ಳಿ ಗ್ರಾಮಸ್ಥರು ಈ ಹಿಂದೆ ಪಶು ಚಿಕಿತ್ಸಾಲಯ ಸಂಬಂಧ ಶಾಸಕರಿಗೆ ಒತ್ತಾಯಿಸಲಾಗಿತ್ತು. ಇದೀಗ ಶಾಸಕರು ಅಂಬಳೆ ಗ್ರಾಮಕ್ಕೆ ತಾತ್ಕಾಲಿಕ ಪಶು ಚಿಕಿತ್ಸಾಲಯ ತೆರೆದಿದ್ದು ಮುಂಬರುವ ದಿನಗಳಲ್ಲೂ ಮುಗುಳುವಳ್ಳಿ ಗ್ರಾಮಕ್ಕೂ ಅನು ಕೂಲ ಮಾಡಿಕೊಡಬೇಕು ಎಂದರು.

ಗ್ರಾಮದ ಸುತ್ತಲು ಸುಮಾರು ಸಾವಿರಕ್ಕೂ ಹೆಚ್ಚು ಜಾನುವಾರುಗಳಿರುವ ಕಾರಣ ಕೆಮ್ಮು, ಬೇದಿ, ಕಾಲು ಬಾ ಯಿ ಸೇರಿದಂತೆ ಸಣ್ಣಪುಟ್ಟ ಆರೋಗ್ಯ ಎದುರಾಗುತ್ತಿತ್ತು. ಹೀಗಾಗಿ ಗ್ರಾಮದಲ್ಲೇ ಚಿಕಿತ್ಸಾಲಯ ತೆರೆದಿರುವುದರಿಂದ ಬಹಳಷ್ಟು ಅನುಕೂಲವಾಗಿದೆ. ಜೊತೆಗೆ ತುರ್ತು ಸಂದರ್ಭದಲ್ಲಿ ಪಶು ವೈದ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿಗೆ ಅವ ಕಾಶ ಕಲ್ಪಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಂಬಳೆ ಹೋಬಳೀ ಕಾಂಗ್ರೆಸ್ ಅಧ್ಯಕ್ಷ ವಿಜಯ್‌ಕುಮಾರ್, ಗ್ರಾ.ಪಂ. ಸದಸ್ಯೆ ವಿಜ ಯಮ್ಮ, ಗ್ರಾಮಸ್ಥರಾದ ಮಂಜೇಗೌಡ, ಮಲ್ಲಿಕಾರ್ಜುನ್, ಸೋಮಶೇಖರ್, ಹರಿಹರದಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಕೆಂಚೇಗೌಡ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಮೋ ಹನ್‌ಕುಮಾರ್, ಸಹಾಯಕ ನಿರ್ದೇಶಕ ಡಾ.ಹೇಮಂತ್‌ಕುಮಾರ್ ಮತ್ತಿತರರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು