Bengaluru 23°C
Ad

ದುಬೈನಲ್ಲಿ ಬರೋಬ್ಬರಿ 1 ಮಿಲಿಯನ್​ ಲಾಟರಿ ಗೆದ್ದ ಭಾರತೀಯ ಮಹಿಳೆ!

Lottry

ದುಬೈ: ದುಬೈನಲ್ಲಿರೋ ಕುಟುಂಬವೊಂದು ದಿನಬೆಳಗಾಗೋದ್ರಲ್ಲಿ ಏಕಾಏಕಿ ಕೋಟ್ಯಾಧಿಪತಿಗಳಾಗಿದ್ದಾರೆ. ಅದಕ್ಕೆ ಕಾರಣ ಲಾಟರಿ. ಹೌದು, ದುಬೈನಲ್ಲಿ ಭಾರತೀಯ ಮಹಿಳೆಯೊಬ್ಬರಿಗೆ ಭರ್ಜರಿ ಲಾಟರಿ ಹೊಡೆದಿದೆ.

ಪಾಯಲ್‌ ಅನ್ನೋ ಮಹಿಳೆಗೆ ಬರೋಬ್ಬರಿ $1 ಮಿಲಿಯನ್ ಲಾಟರಿ ಹೊಡೆದಿದೆ. ನಗದು ಬಹುಮಾನ ಗೆದ್ದ ಮಹಿಳೆ ಫುಲ್‌ ಖುಷಿಯಾಗಿದ್ದಾರೆ. ದುಬೈ ಡ್ಯೂಟಿ-ಫ್ರೀ ಮಿಲೇನಿಯಂ ಡ್ರಾದಲ್ಲಿ $1 ಮಿಲಿಯನ್ ಬಹುಮಾನವನ್ನು ಗೆದ್ದ ಆ ಮಹಿಳೆ ಸಂತೋಷಕ್ಕೆ ಪಾರವೇ ಇರಲಿಲ್ಲ.

ಪಾಯಲ್‌ ಮೂಲತಃ ಪಂಜಾಬ್‌ನವರು. ಮೇ 3 ರಂದು ಟಿಕೆಟ್‌ ಖರೀದಿ ಮಾಡಿದ್ದರು. ಮದುವೆ ಆನಿವರ್ಸರಿಗಾಗಿ ಪತಿ ಉಡುಗೊರೆಯಾಗಿ ನೀಡಿದ ಹಣದಿಂದ ಆನ್‌ಲೈನ್‌ನಲ್ಲಿ ಲಾಟರಿ ಟಿಕೆಟ್ ಖರೀದಿಸಿದ್ದರು.

ಆ ಟಿಕೆಟ್‌ನಿಂದಲೇ ಅವರು ದುಬೈ ಡ್ಯೂಟಿ-ಫ್ರೀ ಮಿಲೇನಿಯಂ ಡ್ರಾದಲ್ಲಿ $1 ಮಿಲಿಯನ್ ಬಹುಮಾನವನ್ನು ಗೆದ್ದರು. ಆಕೆಯ ಪತಿ ನೀಡಿದ ಸರಳ ವಾರ್ಷಿಕೋತ್ಸವದ ಉಡುಗೊರೆಯಿಂದ ಅವರ ಅದೃಷ್ಟವೇ ಬದಲಾಯ್ತು. ಪಾಯಲ್‌, ಆನ್‌ಲೈನ್‌ನಲ್ಲಿ ಟಿಕೆಟ್‌ ಖರೀದಿ ಮಾಡಿದ್ದು, ಅದರಲ್ಲಿ ಹೆಚ್ಚು 3 ಸಂಖ್ಯೆಗಳೇ ಇದ್ದಿದ್ದವು. ತಾನು ಟಿಕೆಟ್ ಸಂಖ್ಯೆ 3337 ಅನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.

 

 

Ad
Ad
Nk Channel Final 21 09 2023
Ad