Bengaluru 25°C
Ad

ಮಾಂಸ ಉತ್ಪನ್ನಗಳ ಕದ್ದು ಕಡಿಮೆ ಬೆಲೆಗೆ ಮಾರಾಟ ಮಾಡ್ತಿದ್ದ ಭಾರತೀಯ !

Arrest

ಸಿಂಗಾಪುರ: ಸಿಂಗಾಪುರದಲ್ಲಿ ಭಾರತೀಯ ಮೂಲದ ಡೆಲಿವರಿ ಮಾಂಸದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ 170,000 ಮೌಲ್ಯದ ಮಾಂಸವನ್ನು ಕದ್ದು ಮಾರಾಟ ಮಾಡಿದ್ದಾನೆ.

ಇದೀಗ ಆತನಿಗೆ 30 ತಿಂಗಳ ಜೈಲು ಶಿಕ್ಷೆಯನ್ನು ನೀಡಲಾಗಿದೆ. ಇತನನ್ನು ಭಾರತೀಯ ಮೂಲದ ಶಿವಂ ಕರುಪ್ಪನ್ (42) ಎಂದು ಗುರುತಿಸಲಾಗಿದೆ. ಕದ್ದ ಮಾಂಸವನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ, ಹಾಗೂ ಅದರಿಂದ ಬಂದ ಹಣವನ್ನು ತಾನು ಮತ್ತು ವಿತರಕ ಚೀ ಸಾಂಗ್ ಫುಡ್ಸ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇನ್ನೊಬ್ಬ ಸಹೋದ್ಯೋಗಿ ನೀಡಿದ್ದಾನೆ ಎಂದು ಹೇಳಲಾಗಿದೆ.

ಇದೀಗ ಆತನ ಸಹೋದ್ಯೋಗಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆದರೆ ಆತನ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಶಿವಂ ಕರುಪ್ಪನ್ ಅವರ ಸಹೋದ್ಯೋಗಿ ಕೂಡ ಭಾರತೀಯ ಮೂಲದ ನೇಶನ್ ಗುಣಸುಂದ್ರಂ (27) ಎಂದು ಹೇಳಲಾಗಿದೆ.

ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈ ಇಬ್ಬರು ಹಲವು ದಿನಗಳಿಂದ ಈ ಕೃತ್ಯದಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.

 

Ad
Ad
Nk Channel Final 21 09 2023
Ad