News Karnataka Kannada
Sunday, April 21 2024
Cricket
ಉಡುಪಿ

ಜೆರೋಸಾ ಕೇಸ್‌ ನಲ್ಲಿ ಶಾಸಕರಿಬ್ಬರು ನಡೆದುಕೊಂಡ ರೀತಿ ನಾಚಿಕೆಗೇಡಿನದ್ದು: ವೆರೋನಿಕಾ

Vronic
Photo Credit : News Kannada

ಉಡುಪಿ: ಮಂಗಳೂರಿನ ಸಂತ ಜೆರೋಸಾ ಶಾಲೆಯ ಪ್ರಕರಣದಲ್ಲಿ ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಭರತ್‌ ಶೆಟ್ಟಿಯವರು ನಡೆದುಕೊಂಡ ರೀತಿ ನಾಚಿಕೇಗೇಡಿನದ್ದು ಎಂದು ಸಮಾಜ ಸೇವಕಿ ವೆರೋನಿಕಾ ಕರ್ನೆಲಿಯೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಲೆಯಲ್ಲಿ ಏನೋ ಒಂದು ವಿಚಾರ ನಡೆದಿದ್ದು ಅದನ್ನೆ ನೆಪವಾಗಿಟ್ಟುಕೊಂಡು ಶಾಸಕ ವೇದವ್ಯಾಸ್‌ ಕಾಮತ್‌ ಅವರು ಶಾಲೆಯ ಗೇಟಿನ ಹೊರಗಡೆ ಮುಗ್ಧ ಮಕ್ಕಳನ್ನು ಬಳಸಿಕೊಂಡು ಪ್ರತಿಭಟನೆ ಮಾಡಿದ್ದು ಅಲ್ಲದೆ ಘೋಷಣೆಗಳನ್ನು ಕೂಗಲು ಪ್ರೇರಿಪಿಸಿರುವುದು ಖಂಡನೀಯ. ಅವರು ಓರ್ವ ಶಾಸಕರು ಎಂಬುದನ್ನು ಮರೆತು ನಡೆದುಕೊಂಡ ವರ್ತನೆ ನಾಗರೀಕ ಸಮಾಜ ತಲೆತಗ್ಗಿಸುವಂಥದ್ದಾಗಿದೆ.

ಓರ್ವ ಶಾಸಕರಾಗಿ ಆಯ್ಕೆಯಾದವರಿಗೆ ವಿವಿಧ ಜವಾಬ್ದಾರಿಗಳನ್ನು ಹೊಂದಿರುತ್ತಾರೆ. ಶಾಸನ ರಚನೆಯಲ್ಲಿ ವಿಶೇಷ ಜವಾಬ್ದಾರಿ ಹೊಂದಿರುವ ಓರ್ವ ಶಾಸಕ ಕೇವಲ ಒಂದು ಪಕ್ಷ, ಜಾತಿಗೆ ಸೀಮಿತರಲ್ಲ ಎನ್ನುವುದನ್ನು ಅವರು ಮರೆತು ವರ್ತಿಸಿದ್ದಾರೆ.

ಯಾವುದೇ ಘಟನೆ ನಡೆದಾಗ ಅವರಿಗೆ ಇರುವ ಅಧಿಕಾರವನ್ನು ಬಳಸಿಕೊಂಡು ನೇರವಾಗಿ ಶಾಲೆಗೆ ತೆರಳಿ ಅಲ್ಲಿಯ ಘಟನೆಯ ಕುರಿತು ಮಾಹಿತಿ ಪಡೆದು ಸಮಸ್ಯೆಯನ್ನು ಪರಿಹಾರ ಮಾಡುವುದಾಗಿದೆ. ಇಲ್ಲವಾದರೆ ಅದನ್ನು ಸೂಕ್ತ ತನಿಖೆಗೆ ಸೂಚನೆ ಕೊಟ್ಟು, ಅದರಲ್ಲಿ ಯಾವ ಫಲಿತಾಂಶ ಬರುವುದೋ ಅದರ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದನ್ನು ಬಿಟ್ಟು, ಸಂಸ್ಥೆಯ ಗೇಟಿನ ಒಳಗಡೆ ಬರದೆ ಶಾಲೆಯ ಮುಖ್ಯಸ್ಥರು ಮನವಿ ಮಾಡಿಕೊಂಡರೂ ಕೂಡ ಯಾವುದೇ ಸ್ಪಂದನೆ ನೀಡದೆ ಮಕ್ಕಳನ್ನು ಪ್ರೇರೇಪಿಸಿ ಪ್ರತಿಭಟಿಸಿದ್ದು ಅವರ ಘನತೆಗೆ ತಕ್ಕುದಾದಲ್ಲ ಎಂದು ಅವರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು