News Karnataka Kannada
Saturday, April 13 2024
Cricket
ಮಂಗಳೂರು

ಯೆನೆಪೋಯದಲ್ಲಿ ಮೂರು ದಿನಗಳ ಸಿ.ಸಿ.ಎಲ್.ಎಸ್, ಎಸ್.ಟಿ.ಎಲ್.ಎಸ್ ತರಬೇತಿ ಕಾರ್ಯಕ್ರಮ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆಸ್ಪತ್ರೆಯ ಸಿಮ್ಯುಲೇಶನ್ ಲ್ಯಾಬ್‌ನಲ್ಲಿ 'ಡಾ.ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆ'ಯ ಯಶಸ್ವಿ ಅನುಷ್ಠಾನಕ್ಕಾಗಿ ಎಲ್ಲಾ ಪಾಲುದಾರರಿಗೆ ತರಬೇತಿಯನ್ನು ನಡೆಸಿತು.
Photo Credit : NewsKarnataka

ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆಸ್ಪತ್ರೆಯ ಸಿಮ್ಯುಲೇಶನ್ ಲ್ಯಾಬ್‌ನಲ್ಲಿ ‘ಡಾ.ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆ’ಯ ಯಶಸ್ವಿ ಅನುಷ್ಠಾನಕ್ಕಾಗಿ ಎಲ್ಲಾ ಪಾಲುದಾರರಿಗೆ ತರಬೇತಿಯನ್ನು ನಡೆಸಿತು.

ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯು ‘ಡಾ. ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆ’ಗೆ ಮಾನ್ಯತೆ ಪಡೆದ ಕೇಂದ್ರವಾಗಿ ಆಯ್ಕೆಯಾಗಿದೆ.

ಈ ಯೋಜನೆಯ ಯಶಸ್ವಿ ಅನುಷ್ಠಾನದ ಪೂರ್ವಭಾವಿ ಹಂತದ೦ತೆ, ವೈದ್ಯಕೀಯ ಅಧಿಕಾರಿಗಳು, ದಾದಿಯರು ಮತ್ತು ಆಂಬ್ಯುಲೆನ್ಸ್ ಸಿಬ್ಬಂದಿಗಾಗಿ ಮೂರು ದಿನಗಳ `ಸಿ.ಸಿ.ಎಲ್.ಎಸ್ ಮತ್ತು ಎಸ್.ಟಿ.ಎಲ್.ಎಸ್’ ತರಬೇತಿ ಕಾರ್ಯಕ್ರಮವು 2024 ರ ಮಾರ್ಚ್ 26, 27 ಮತ್ತು 28 ರಂದು ಯೆನೆಪೊಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ) ಕ್ಯಾಂಪಸ್, ದೇರಳಕಟ್ಟೆಯ ಸಿಮ್ಯುಲೇಶನ್ ಲ್ಯಾಬ್‌ನಲ್ಲಿ ಜರುಗಿತು.

ಡಾ. ಉಮಾ, ಉಪ ನಿರ್ದೇಶಕಿ, ಎನ್‌ಸಿಡಿ ವಿಂಗ್‌, ಆರೋಗ್ಯ ಸೌಧ, ಕರ್ನಾಟಕ ಸರ್ಕಾರ ಅವರು ತರಬೇತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ತರಬೇತಿ ಕಾರ್ಯಕ್ರಮವು ಮೂರು ದಿನಗಳಲ್ಲಿ, ಎರಡು ಜಿಲ್ಲೆಯ ಸುಮಾರು 70 ಪ್ರಥಮ ಪ್ರತಿಸ್ಪಂದಕರ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರವು ಯಸ್.ಟಿ.ಈ.ಎಂ.ಐ ಪ್ರಕರಣಗಳ ಸಮರ್ಥ ನಿರ್ವಹಣೆಗಾಗಿ ಸ್ಪೋಕ್ ಆಸ್ಪತ್ರೆಗಳ ವೈದ್ಯಕೀಯ ಅಧಿಕಾರಿಗಳು, ದಾದಿಯರು ಮತ್ತು ಆಂಬ್ಯುಲೆನ್ಸ್ ಸಿಬ್ಬಂದಿಗೆ ಜೀವರಕ್ಷಾ ಟ್ರಸ್ಟ್ ಸಹಯೋಗದಲ್ಲಿ ಸಿ.ಸಿ.ಎಲ್.ಎಸ್ ಮತ್ತು ಎಸ್.ಟಿ.ಎಲ್.ಎಸ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿತ್ತು.

‘ಡಾ ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆ’ ಕರ್ನಾಟಕ ಸರ್ಕಾರದ ಯೋಜನೆಯಾಗಿದ್ದು, ಯಸ್.ಟಿ.ಈ.ಎಂ. ಮತ್ತು ಏನ್.ಯಸ್.ಟಿ.ಈ.ಎಂ. ಯಂತಹ ಪರಿಸ್ಥಿತಿಗಳನ್ನು ಪತ್ತೆಹಚ್ಚುವ ಮತ್ತು ನಿರ್ವಹಿಸುವ ಮೂಲಕ ಹೃದಯದ ಆರೋಗ್ಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆಯೋಜಿಸಲಾದ 3-ದಿನಗಳ ಸುದೀರ್ಘ ಕಾರ್ಯಾಗಾರವು ಹೆಚ್ಚಿನ ಸಂಖ್ಯೆಯ ಪ್ರಥಮ ಪ್ರತಿಸ್ಪಂದಕರಿಗೆ ತರಬೇತಿ ನೀಡಲು, ಮೊಬೈಲ್ ಅಪ್ಲಿಕೇಶನ್‌ನ ಮೂಲಕ ಮೌಲ್ಯ ಸರಪಳಿಯನ್ನು ಸಂಯೋಜಿಸಲು ಮತ್ತು ಅಗತ್ಯವಾದ ಕ್ಲಿನಿಕಲ್ ಕೌಶಲ್ಯ ಮತ್ತು ಸಾಕ್ಷ್ಯ ಆಧಾರಿತ ಪ್ರೋಟೋಕಾಲ್‌ಗಳೊಂದಿಗೆ ತುರ್ತು ಆರೈಕೆ ಸಿಬ್ಬಂದಿಯನ್ನು ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು