Showing 20 of 21651 articles • Page 240 of 1083
ಸೇಂಟ್ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಇದರ ಸ್ಕೂಲ್ ಆಫ್ ಬಿಸಿನೆಸ್ ಆಂಡ್ ಮ್ಯಾನೇಜ್ಮೆಂಟ್ನ ಎಂಬಿಎ ವಿಭಾಗವು ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ (EDP) – 2026 ಅನ್ನು ಫೆಬ್ರವರಿ 10 ರಂದು ಕೊಟೇಕಾರಿನ ಎಐಎಂಐಟಿ (AIMIT) ಕ್ಯಾಂಪಸ್ನ ಆರ್ಥರ್ ಶೆನಾಯ್ ಸ್ಮಾರಕ ಸಭಾಂಗಣದಲ್ಲಿ ಯಶಸ್ವಿಯಾಗಿ ಆಯೋಜಿಸಿತು.
ಬೈಕ್ ಮೇಲೆ ಖಾಸಗಿ ಬಸ್ ಹರಿದು ಇಬ್ಬರು ಪುಟ್ಟ ಮಕ್ಕಳು ದಾರುಣ ಸಾವನ್ನಪ್ಪಿರುವ ಘಟನೆ ಥಣಿಸಂದ್ರ ಬಳಿ ನಡೆದಿದೆ.
ನಗರದ ಕಲ್ಯಾಣ ಮಂಟಪದಲ್ಲಿ ಮದುವೆಗೆ ಆಗಮಿಸಿದ್ದ ಮಹಿಳೆಯೊಬ್ಬರು ಕಳೆದುಕೊಂಡಿದ್ದ ಪರ್ಸ್ ನ್ನು ನಗರದ ಉದ್ಯಮಿಯೊಬ್ಬರು ವಾಪಸ್ಸು ನೀಡಿ ಮಾನವೀಯತೆ ಮೆರೆದಿರುವುದು ನಗರದಲ್ಲಿ ಮಂಗಳವಾರ ಕಂಡು ಬಂದಿದೆ.
ನಾಲೆಗಳು ಕೆರೆಕಟ್ಟೆಗಳಿಗೆ ನೀರು ಬಿಡುವಂತೆ ರೈತರಿಂದ ಮೈಸೂರಿನ ಕಾಡಾ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಮೈಸೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಕಾರು ಕದ್ದಿದ್ದ ಕಳ್ಳನನ್ನು ಬಂಧಿಸಲಾಗಿದೆ. ಬಂಧಿತನಿಂದ 14 ಲಕ್ಷ ಮೌಲ್ಯದ ಥಾರ್ ವಾಹನ ವಶಕ್ಕೆ ಪಡೆಯಲಾಗಿದೆ.
ಕಾವೇರಿ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಿದ ಘಟನೆ ಕೆ.ಆರ್.ನಗರ ತಾಲೂಕಿನ ಕಪ್ಪಡಿ ದೇವಸ್ಥಾನದ ಬಳಿ ನಡೆದಿದೆ.
ಹರಾಜಿನಲ್ಲಿ ಫ್ಲ್ಯಾಟ್ ಮತ್ತು ಚಿನ್ನದ ಖರೀದಿಸಿ ಕೊಡುವುದಾಗಿ ನಂಬಿಸಿ ಮುಂಬೈ ಮೂಲದ ಉದ್ಯಮಿ ಮಮತಾ ಶೆಟ್ಟಿಗೆ ಸುಮಾರು 4.78 ಕೋಟಿ ರೂ. ವಂಚನೆ ನಡೆಸಿರುವ ಆರೋಪ ಉಡುಪಿಯ ದಂಪತಿ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಸುಹಾಸಿನಿ ಶೆಟ್ಟಿ ಹಾಗೂ ಅವರ ಪತಿ ಪುನೀತ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಾಡಗುಡ್ಡೆಅಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರಿನ ಜಾರು ಬಂಡಿ ಮೈದಾನದಲ್ಲಿ ವಿಚಿತ್ರ ಸುಳಿಗಾಳಿ ಕಾಣಿಸಿಕೊಂಡಿದ್ದು ಅದರ ವಿಡಿಯೋ ವೈರಲ್ ಆಗಿದೆ. ಮೈದಾನದ ಮಧ್ಯೆ ಧೂಳಿನ ಜೊತೆಗೆ ಗಿರ ಗಿರನೇ ತಿರುಗುವ ವಿಚಿತ್ರ ವಿದ್ಯಮಾನ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ.
ದೇಶದ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಗೂ ಎಲ್ಲಾ ಶಾಲೆಗಳಲ್ಲಿ ರಾಷ್ಟ್ರಗೀತೆ ‘ಜನ ಗಣ ಮನ’ ಜೊತೆಗೆ ‘ವಂದೇ ಮಾತರಂ’ ಕಡ್ಡಾಯವಾಗಿ ಹಾಡಬೇಕು ಎಂದು ಕೇಂದ್ರ ಗೃಹ ಸಚಿವಾಲಯವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಕಸ್ತೂರ್ಬಾ ಮೆಡಿಕಲ್ ಕಾಲೇಜು (ಕೆ.ಎಂ.ಸಿ), ಮಂಗಳೂರಿನ ಸಮುದಾಯ ವೈದ್ಯಶಾಸ್ತ್ರ ವಿಭಾಗವು ಆಯೋಜಿಸಿದ 6ನೇ ಡಾ. ಬಿ. ಎಸ್. ಸಜ್ಜನ್ ದತ್ತಿ ಉಪನ್ಯಾಸವು 2026ರ ಫೆಬ್ರವರಿ 10ರಂದು ಮೆಡಿಕಲ್ ಎಜುಕೇಶನ್ ಯೂನಿಟ್ ಎ.ವಿ. ಹಾಲ್, ಲೈಟ್ ಹೌಸ್ ಹಿಲ್ ರಸ್ತೆ, ಮಂಗಳೂರಿನಲ್ಲಿ ನಡೆಯಿತು.
ತನ್ನ ಬ್ಯಾಂಕಿಂಗ್ ಶ್ರೇಷ್ಠತೆಯ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುವ ಇಂಡಿಯನ್ ಓವರ್ಸೀಸ್ ಬ್ಯಾಂಕ್ (ಐಒಬಿ) ನ ಮಂಗಳೂರು ಪ್ರಾದೇಶಿಕ ಕಚೇರಿಯು ಆರೋಗ್ಯ ಜಾಗೃತಿಗಾಗಿ ವಾಕಥಾನ್ ಎಂಬ ಸಮುದಾಯ ಕೇಂದ್ರಿತ ಉಪಕ್ರಮಗಳ ಸರಣಿಯೊಂದಿಗೆ ತನ್ನ 90 ನೇ ಸಂಸ್ಥಾಪನಾ ದಿನವನ್ನು ಆಚರಿಸಿತು.
ಮದುವೆಯಾದ 6 ನೇ ದಿನಕ್ಕೆ ಹುಡುಗನಿಗೆ ಶಾಕ್ ಆಗುವ ಘಟನೆ ನಡೆದಿದೆ.
ಕೂಳೂರು ಬಳಿಯ ರಾಯಿಕಟ್ಟೆ ಪ್ರದೇಶದಲ್ಲಿ ಹರಿಯುವ ಪಲ್ಗುಣಿ ನದಿಗೆ ಸೇರುವ ಹಳ್ಳದಲ್ಲಿ ನೀರು ಕೊಳೆತು ನಾರುತ್ತಿದೆ. ಮೀನುಗಳು ಸತ್ತಿವೆ. ಕಳೆದ ಒಂದು ವಾರದಿಂದ ಈ ಸ್ಥಿತಿ ಇದ್ದರೂ ಜಿಲ್ಲಾಡಳಿತ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.
ನಟಿ ತಮನ್ನಾ ಭಾಟಿಯಾ ಅವರು ಮೈಸೂರು ಸ್ಯಾಂಡಲ್ ಸೋಪ್ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ಆ ಮೂಲಕ ಕೆಎಸ್ಡಿಎಲ್ ವಹಿವಾಟನ್ನು 5,000 ಕೋಟಿ ರೂ.ಗೆ ಹೆಚ್ಚಿಸುವ ಗುರಿ ಹೊಂದಿದೆ.
ಬೆಂಗಳೂರು ಮತ್ತು ಮಂಗಳೂರು ಮಧ್ಯೆ ವಂದೇ ಭಾರತ್ ರೈಲು ಸಂಚಾರ ಆರಂಭಿಸುವುದಾಗಿ ಸಿಹಿ ಸುದ್ದಿ ನೀಡಬೇಕಿದ್ದ ರೈಲ್ವೆ ಇಲಾಖೆ ಕರಾವಳಿಗರಿಗೆ ಡಬಲ್ ಆಘಾತವನ್ನು ನೀಡಿದೆ. ಹೆಚ್ಚಿನ ಸೌಕರ್ಯ ಕೊಡುವ ಬದಲು ಇದ್ದ ಸೌಕರ್ಯವನ್ನೂ ಕಿತ್ತುಕೊಳ್ಳುವ ಸೂಚನೆಯ ನಿರ್ಧಾರಕ್ಕೆ ಮಂಗಳೂರಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮಹಾನಗರ ಪಾಲಿಕೆಯು ಆಸ್ತಿ ತೆರಿಗೆಯನ್ನು ಶೇ. 3ರಷ್ಟು ಹೆಚ್ಚಳ ಮಾಡುವುದಾಗಿ ಘೋಷಿಸಿದ್ದು, ಇದು ಮುಂದಿನ ಹಣಕಾಸು ವರ್ಷದಿಂದ ಜಾರಿಗೆ ಬರಲಿದೆ.
ಮುಕ್ಕ ಶ್ರೀನಿವಾಸ್ ಕಾಲೇಜಿನಲ್ಲಿ ಕ್ರಿಮಿನಾಲಜಿ ಬಿಎಸ್ಸಿ ಕಲಿಯುತ್ತಿದ್ದ ಕಾಸರಗೋಡು ಮೂಲದ ಹಿಂದು ಯುವತಿ, ಕೇರಳದ ವಯನಾಡು ಮೂಲದ ಮುಸ್ಲಿಂ ಯುವಕನೊಂದಿಗೆ ಎಸ್ಕೇಪ್ ಆಗಿದ್ದು, ವಯನಾಡಿನಲ್ಲಿ ರಿಜಿಸ್ಟರ್ ಮದುವೆಯಾಗಲು ಮುಂದಾಗಿರುವ ಘಟನೆ ನಡೆದಿದೆ.
ನಗರದ ಕಾವೂರು ಮೂಲದ ಯುವಕನೊಬ್ಬ ಮ್ಯಾಟ್ರಿಮೋನಿ ಸೈಟ್ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಂಡು ಮದುವೆಯಾಗುತ್ತೇನೆಂದು ನಂಬಿಸಿ ಮುಂಬೈ, ಉಡುಪಿ ಹೀಗೆ ಹಲವೆಡೆ ಯುವತಿಯರನ್ನು ಮದುವೆಯಾಗಿ ಅವರಿಂದ ಹಣ ಪಡೆದು ವಂಚಿಸಿದ್ದಲ್ಲದೆ, ಇನ್ನೂ ಹಲವು ಯುವತಿಯರನ್ನು ಮದುವೆಯಾಗುವ ಭರವಸೆ ನೀಡಿ ಹಣ ಪಡೆದು ಮೋಸಗೈದು ಕಂತ್ರಿ ಬುದ್ಧಿ ತೋರಿಸಿ ಕಾವೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಬೆಳ್ತಂಗಡಿ ವಿದ್ಯಾರ್ಥಿನಿ ಅಪಹರಣ ಕೇಸ್ ಟ್ವಿಸ್ಟ್ ಸಿಕ್ಕಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಪಿ ಅರುಣ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಗೈನೆಸ್ವಿಲ್ಲೆಯಲ್ಲಿ ಜನದಟ್ಟಣೆಯ ರಸ್ತೆಯಲ್ಲಿ ಸಣ್ಣ ವಿಮಾನವೊಂದನ್ನು ತುರ್ತು ಭೂಸ್ಪರ್ಶ ಮಾಡಲಾಗಿದ್ದು, ಇದರ ಪರಿಣಾಮ ವಿಮಾನವು ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿರುವ ವಿಡಿಯೋ ವೈರಲ್ ಆಗಿದೆ.