ಮೈಸೂರು: ಮೈಸೂರು ಮೃಗಾಲಯದಲ್ಲಿ ಜಿರಾಫೆ ಯುವರಾಜನ 25 ನೇ ವರ್ಷದ ಹುಟ್ಟುಹಬ್ಬ ಆಚರಿಸಲಾಗಿದೆ. ಜಿರಾಫೆಗೆ ಇಷ್ಟವಾದ ಆಹಾರವಾದ ಕಿತ್ತಲೆ ಹಣ್ಣು ಹಾಗೂ ವಿವಿಧ ಕಾಳುಗಳಿಂದ ತಯಾರಿಸಿದ ಕೇಕ್ ತಿನ್ನಿಸಿ ಮೃಗಾಲಯದ ಸಿಬ್ಬಂದಿ ಸಂಭ್ರಮಿಸಿದ್ದಾರೆ.
ಯುವರಾಜ ಖುಷಿಯಿಂದ ಕೇಕ್ ತಿಂದು ಸವಿದಿದ್ದಾನೆ. ಬರ್ತ್ ಡೇ ಆಚರಿಸಿದ ಎಲ್ಲ ಸಿಬ್ಬಂದಿಗಳಿಗೆ ವಿಶೇಷವಾಗಿ ಕೃತಜ್ಞತೆ ಹೇಳಿದ್ದಾನೆ. ಜಿರಾಫೆ ಹುಟ್ಟ ಹಬ್ಬ ಆಚರಣೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

