ತಿ. ನರಸೀಪುರ: ಮುತ್ತಲವಾಡಿ ಗ್ರಾಮ ಪಂಚಾಯಿತಿಯ ನರೇಗಾ ಕಾಮಗಾರಿಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಮಧು ದೂರು ನೀಡಿದ್ದಾರೆ. ದೂರು ನೀಡಿದ ಹಿನ್ನೆಲೆ ಜಿಲ್ಲಾ ಪಂಚಾಯಿತಿ ಒಂಬುಡ್ಸುಮನ್ ಶಶಿಕುಮಾರ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ನರೇಗಾ ಕಾಮಗಾರಿಯ ವಿವರದ ಎರಡು ನಾಮ ಫಲಕಗಳನ್ನು ಒಡೆದು ಆಗಿರುವುದು ಸ್ಥಳ ಪರಿಶೀಲನೆ ವೇಳೆ ಕಂಡುಬಂದಿತು. ಮುತ್ತಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ. ಅಕ್ರಮ ಕಾಮಗಾರಿಯಲ್ಲಿ ತೊಡಗಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದರು.

ನರೇಗಾ ಕಾಮಗಾರಿಯಲ್ಲಿ ಕೂಲಿ ಕೆಲಸ ಮಾಡುವ ಕಾರ್ಮಿಕರ ಬೇರೆ ಫೋಟೋ ತೆಗೆಸಿಕೊಳ್ಳುವವರು ಬೇರೆ ಖಾತೆಗೆ ಹಣ ಜಮಾ ಆಗೋದೇ ಬೇರೆಯವರಿಗೆ ಕಾಮಗಾರಿಗಳು ಕೂಡ ಪೂರ್ಣಗೊಂಡಿರುವುದಿಲ್ಲ ಎಂದು ಮಧು  ಗಂಭೀರ ಆರೋಪ  ಮಾಡಿದರು. ಇದಕ್ಕೆಲ್ಲ ಪೂರಕವಾಗಿ ದಾಖಲೆಗಳಿವೆ ಎಂದರು.