ಮಂಗಳೂರು: ಕಾಂತಾರ ಚಾಪ್ಟರ್ 1 ಸಿನಿಮಾ ಬಿಗ್ ಹಿಟ್ ಹಿನ್ನೆಲೆಯಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ, ಮತ್ತು ಕಾಂತಾರ ತಂಡ ಇತ್ತೀಚೆಗೆ ಪಾಲ್ಗೊಂಡ ಹರಕೆಯ ಕೋಲದ ಬಗ್ಗೆ ವಿವಾದ ವ್ಯಕ್ತವಾಗಿದ್ದು, ಕೋಲದ ಸಂದರ್ಭದಲ್ಲಿ ದೈವ ನರ್ತಕನ ವರ್ತನೆಯನ್ನು ದೈವಾರಾಧಕ ತಮ್ಮಣ್ಣ ಶೆಟ್ಟಿ ಸೇರಿದಂತೆ ತುಳುನಾಡಿನ ಹೆಚ್ಚಿನ ಮಂದಿ ಭಕ್ತರು ವಿರೋಧಿಸಿದ್ದರು.
ಈ ಹಿನ್ನೆಲೆ ಸ್ಪಷ್ಟನೆ ನೀಡಲು ದೈವಸ್ಥಾನದ ಅಡಳಿತ ಮಂಡಳಿ ಇಂದು ಸುದ್ದಿಗೋಷ್ಠಿ ನಡೆಸಿತ್ತು. ಈ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಪತ್ರಕರ್ತರ ವಿರುದ್ಧವೇ ಗರಂ ಅದ ಪ್ರಸಂಗ ನಡೆಯಿತು.
ಹರಕೆಯ ನೇಮ ಸಂದರ್ಭದಲ್ಲಿ ದೈವ ನರ್ತಕನ ಅತಿರೇಕದ ವರ್ತನೆಗಳ ಬಗ್ಗೆ ಭಕ್ತರ ಆಕ್ರೋಶ ಹಾಗೂ ವಾರಾಹಿ ಪಂಜುರ್ಲಿ ದೈವದ ಹಿನ್ನಲೆಯನ್ನು ಪತ್ರಕರ್ತರು ಕೇಳಿದರು. ಈ ವೇಳೆ ಏಕಾಏಕಿ ಕೋಪಗೊಂಡ ಅಡಳಿತ ಮಂಡಳಿಯ ಪ್ರಮುಖರು ಹಾಗೂ ಸದಸ್ಯರು ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸದೇ ಪತ್ರಕರ್ತರ ಮೇಲೆಯೇ ರೇಗಿದ್ದಾರೆ.

