Showing 20 of 21629 articles • Page 197 of 1082
ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿಯಾಗಿ ಮೆಸ್ಕಾಂ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ ಘಟನೆ ಸುಳ್ಯ ತಾಲೂಕಿನ ನಿಂತಿಕಲ್ಲು ಸಮೀಪ ನಡೆದಿದೆ.
ನಕಲಿ ಬಿಡಿಎಸ್ ಪ್ರಮಾಣಪತ್ರ ಬಳಸಿ 20 ವರ್ಷಗಳ ಕಾಲ ಅಕ್ರಮ ಕ್ಲಿನಿಕ್ ನಡೆಸುತ್ತಿದ್ದನು. ಅನುಮಾನ ಬರದಂತೆ ರಾತ್ರಿ ಮಾತ್ರ ಕ್ಲಿನಿಕ್ ಕಾರ್ಯಾಚರಣೆ ನಡೆಯುತ್ತಿತ್ತು.
ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್ ಮಂಗಳವಾರ ತಡರಾತ್ರಿ ದಾಳಿ ನಡೆಸಿದೆ. ಈ ದಾಳಿಯಿಂದಾಗಿ ವಿಮಾನ ನಿಲ್ದಾಣದ ಇಂಧನ ಟ್ಯಾಂಕ್ವೊಂದಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಆಕಾಶದತ್ತ ದಟ್ಟವಾದ ಹೊಗೆ ಆವರಿಸಿರುವ ದೃಶ್ಯಗಳು ಕಂಡುಬಂದಿವೆ.
ತುಳುನಾಡಿನ ಏಳು ಪ್ರಸಿದ್ಧ ಜಾತ್ರೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಕಾಪುವಿನ ಶ್ರೀ ಹಳೇ ಮಾರಿಗುಡಿ , ಶ್ರೀ ಹೊಸ ಮಾರಿಗುಡಿ ಮತ್ತು ಶ್ರೀ ಮೂರನೇ ಮಾರಿಗುಡಿ (ಕಲ್ಯ)ಯಲ್ಲಿ ನಡೆಯುವ ಎರಡು ದಿನಗಳ ಸುಗ್ಗಿ ಮಾರಿಪೂಜೆ ಬುಧವಾರ ಸಂಜೆ ವೈಭವದಿಂದ ಸಂಪನ್ನಗೊಂಡಿತು.
ಭಾರೀ ಮಳೆಯಿಂದಾಗಿ ಉತ್ತರ ಸಿಕ್ಕಿಂನ ಚುಂಗ್ಥಾಂಗ್ನ ಹಲವೆಡೆ ಭೂಕುಸಿತಗಳು ಸಂಭವಿವೆ. ಇದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸುಮಾರು 200 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಮಂಗಳೂರಿನ ಜ್ಯುವೆಲ್ಲರಿ ಶಾಪ್ ಮಾಲೀಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ನಗರದ ಪ್ರಸಿದ್ಧ ‘ಶುಭಾಂಗಿ ಜ್ಯುವೆಲ್ಲರ್ಸ್’ ಅಂಗಡಿಗೆ ಸ್ವಾಮೀಜಿ ವೇಷದಲ್ಲಿ ಬಂದ ವ್ಯಕ್ತಿಯೊಬ್ಬ, ಮಾಲೀಕರನ್ನು ನಂಬಿಸಿ ಸುಮಾರು 4 ಗ್ರಾಂ ತೂಕದ ಚಿನ್ನದ ಉಂಗುರವನ್ನು ದೋಚಿ ಪರಾರಿಯಾಗಿದ್ದಾನೆ.
ದಾಖಲೆಯ ಐಪಿಎಲ್ ಒಪ್ಪಂದದಲ್ಲಿ 16,000 ಕೋಟಿ ರೂ.ಗೂ ಹೆಚ್ಚು ಬೆಲೆಗೆ ಮಾರಾಟವಾಗಿದೆ. ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಒಕ್ಕೂಟವು ಮಂಗಳವಾರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸ್ವಾಧೀನವನ್ನು ಪೂರ್ಣಗೊಳಿಸಿತು.
ಕಾಪು ಕಡಲ ಕಿನಾರೆಯಲ್ಲಿ ಅಕ್ರಮ ಪಾಚ್ಚಾಲೆ (ಅಜಿರ್ ) ತೆಗೆಯುತ್ತಿದ್ದ ತಮಿಳುನಾಡು ಮೂಲದ ಮೀನುಗಾರ ದೋಣಿ ಗುದ್ದಿದ ಪರಿಣಾಮ ಸ್ಥಳೀಯ ಮೀನುಗಾರ ದೋಣಿ ಮಗುಚಿ ಇಬ್ಬರು ಮೀನುಗಾರು ನೀರಿಗೆ ಬಿದ್ದು ಒಬ್ಬನನ್ನು ರಕ್ಷಿಸಲಾಗಿದ್ದು, ಇನ್ನೊಬ್ಬ ಮೀನುಗಾರ ನಾಪತ್ತೆಯಾದ ಘಟನೆ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ ತಲ್ಲೂರು-ಪ್ರವಾಸಿ ಮಂದಿರದ ಬಳಿ ಕಳೆದ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕುಂದಾಪುರ ತಾಲೂಕು ಗಾಣಿಗ ಸಮಾಜ ಸಂಘಟನೆಯ ಮಾಜಿ ಅಧ್ಯಕ್ಷ ಹಾಗೂ ಖ್ಯಾತ ಪಂಚಾಯತ್ ರಾಜ್ ಕಾರ್ಯಕರ್ತ ಶ್ರೀನಿವಾಸ ಗಾಣಿಗ (68) ಅವರು ದುರ್ಮರಣಕ್ಕೀಡಾಗಿದ್ದಾರೆ.
ಶ್ರೀಕೃಷ್ಣ ದೇವರ ದರ್ಶನಕ್ಕೆ ತೆರಳುವ ಮಾರ್ಗದಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದು, ಪ್ರತಿಯೊಬ್ಬ ಭಕ್ತರಿಗೂ ದೇವರ ದರ್ಶನವಾಗಬೇಕೆನ್ನುವ ನಿಟ್ಟಿನಲ್ಲಿ ನೂತನ ಪಥಕ್ಕೆ ತಯಾರಿ ಮಾಡಲಾಗಿದೆ ಎಂದು ಶೀರೂರು ಮಠದ ದಿವಾನರಾದ ಉದಯಕುಮಾರ್ ಸರಳಾತ್ತಾಯ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲಾದ ಹಿನ್ನೆಲೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕೇರಳ ಪ್ರವಾಸ ರದ್ದುಗೊಳಿಸಿದ್ದಾರೆ.
ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಸಂಭವಿಸಿದ ಪಿಜಿ ವೈದ್ಯೆ ಡಾ. ಲಾವಣ್ಯ ಅವರ ಸಾವಿನ ಕುರಿತು ತುರ್ತು ಕ್ರಮ ಕೈಗೊಳ್ಳುವಂತೆ ಡಾ. ಲಾವಣ್ಯ ಅವರ ಕುಟುಂಬ ಮನವಿ ಮಾಡಿಕೊಂಡಿದೆ. ಮಾರ್ಚ್ 12 ರಂದು ಶಿವಮೊಗ್ಗದ ಮೆಗಾನ್ ಆಸ್ಪತ್ರೆಯ ಆವರಣದಲ್ಲಿ ನಡೆದ ಅತ್ಯಂತ ಭೀಕರ ಮತ್ತು ದುರದೃಷ್ಟಕರ ಘಟನೆ ನಡೆದಿದ್ದು, ಮೆಗ್ಗಾನ್ ವೈದ್ಯಕೀಯ ಕಾಲೇಜಿನ ಮಕ್ಕಳ ವಿಭಾಗದ (Pediatric) ಪಿಜಿ ವಿದ್ಯಾರ್ಥಿನಿಯಾಗಿದ್ದ ಡಾ. ಲಾವಣ್ಯ ಅವರು ಆಸ್ಪತ್ರೆಯ ಆವರಣದಲ್ಲೇ ನಡೆದ ಅಪಘಾತದಲ್ಲಿ ಬಲಿಯಾಗಿದ್ದಾರೆ. ಅಂದು […]
ಜ್ಯೂನಿಯರ್ ವೈದ್ಯನ ಪ್ರೇಮ ಪಾಶಕ್ಕೆ ಸೀನಿಯರ್ ವೈದ್ಯೆ ಬಲಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಯುಬಿಯುಎನ್ ಟಿಯು ಕನ್ಸೋರ್ಟಿಯಂ ಹಾಗೂ ಉಡುಪಿಯ ಪವರ್ ಸಂಸ್ಥೆಯ ವತಿಯಿಂದ ಮಹಿಳಾ ಉದ್ಯಮಿಗಳಿಗಾಗಿ ಡಿಜಿಟಲ್ ಸಬಲೀಕರಣ ಕಾರ್ಯಕ್ರಮ ಇದೇ 27ರಂದು ಬೆಳಿಗ್ಗೆ 10 ರಿಂದ 4 ಗಂಟೆಯವರೆಗೆ ಮಣಿಪಾಲದ ಈಶ್ವರ ನಗರದ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಕಾಲೇಜಿನ ಆವರಣದ ಮಣಿಪಾಲ ಕೌಶಲಾಭಿವೃದ್ದಿ ಕೇಂದ್ರದಲ್ಲಿ ನಡೆಯಲಿದೆ ಎಂದು ಪವರ್ ಸಂಸ್ಥೆಯ ಸಂಸ್ಥಾಪಕಿ ರೇಣು ಜಯರಾಮ್ ಮತ್ತು ಅಧ್ಯಕ್ಷೆ ವೀಣಾ ಕುಡ್ವಾ ತಿಳಿಸಿದರು.
ಶಕ್ತಿನಗರದ ಸಾನಿಧ್ಯ ಭಿನ್ನ ಸಾಮರ್ಥ್ಯ ಮಕ್ಕಳ ವಸತಿಯುತ ಶಾಲೆಯಲ್ಲಿ ವಿಶ್ವ ಡೌನ್ ಸಿಂಡ್ರೋಮ್ ದಿನಾಚರಣೆ ಕಾರ್ಯಕ್ರಮ ನಡೆಯಿತು. ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.
ಪ್ರಖ್ಯಾತ ಭಜನಾ ತರಬೇತುದಾರ ಪ್ರಕಾಶ್ ಕುಲಾಲ್ (35) ಅವರು ಮಂಗಳವಾರ ತಮ್ಮ ಸ್ವಗೃಹದಲ್ಲಿ ಹೃದಯಘಾತದಿಂದ ನಿಧನರಾದರು.
ದೇಶದಾದ್ಯಂತ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಪಿವಿ (HPV) ಲಸಿಕ ಅಭಿಯಾನ ದ.ಕ ಜಿಲ್ಲೆಯಲ್ಲೂ ಮಾರ್ಚ್ ನಿಂದ ಮೇ ತಿಂಗಳವರೆಗೆ ನಡೆಯಲಿದೆ.
ಟಿಪ್ಪರ್ ಮತ್ತು ಸ್ಕೂಟರ್ ನಡುವೆ ಡಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ದುರ್ಘಟನೆ ಮಾ. 24ರಂದು ಬೆಳಿಗ್ಗೆ ಮಾಳ ಮುಳ್ಳೂರಿನಲ್ಲಿ ನಡೆದಿದೆ.
ಕಜಕಿಸ್ತಾನ್ನ ಅಲ್ಮಾಟಿಯಲ್ಲಿರುವ ಸೈರಾನ್ ಜಲಾಶಯದಲ್ಲಿ ಹತ್ತು ವರ್ಷಗಳ ಹಿಂದೆ ಒಂದು ಶ್ವಾನ ನೀರಿನಲ್ಲಿ ಮುಳುಗುತ್ತಿತ್ತು. ಆಗ ಅಲ್ಲಿ ನೆರೆದಿದ್ದ ಒಬ್ಬರಿಗೊಬ್ಬರು ಪರಿಚಯವಿಲ್ಲದ ಅಪರಿಚಿತ ವ್ಯಕ್ತಿಗಳು, ನಾಯಿಯ ರಕ್ಷಣೆಗಾಗಿ ಪರಸ್ಪರ ಕೈಜೋಡಿಸಿ ‘ಮಾನವ ಸರಪಳಿ’ ನಿರ್ಮಿಸಿದ್ದರು.
ಸುಪ್ರೀಂಕೋರ್ಟ್ನಿಂದ ದಯಾಮರಣಕ್ಕೆ ಅನುಮತಿ ಪಡೆದಿದ್ದ ಉತ್ತರ ಪ್ರದೇಶದ ಹರೀಶ್ ರಾಣಾ 13 ವರ್ಷಗಳ ನರಳಾಟದ ಬಳಿಕ ಕೊನೆಯುಸಿರೆಳೆದಿದ್ದಾರೆ.