ಮಂಗಳೂರು: ಮಂಗಳೂರಿನ ಜ್ಯುವೆಲ್ಲರಿ ಶಾಪ್ ಮಾಲೀಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ನಗರದ ಪ್ರಸಿದ್ಧ ‘ಶುಭಾಂಗಿ ಜ್ಯುವೆಲ್ಲರ್ಸ್’ ಅಂಗಡಿಗೆ ಸ್ವಾಮೀಜಿ ವೇಷದಲ್ಲಿ ಬಂದ ವ್ಯಕ್ತಿಯೊಬ್ಬ, ಮಾಲೀಕರನ್ನು ನಂಬಿಸಿ ಸುಮಾರು 4 ಗ್ರಾಂ ತೂಕದ ಚಿನ್ನದ ಉಂಗುರವನ್ನು ದೋಚಿ ಪರಾರಿಯಾಗಿದ್ದಾನೆ.

ಈ ವಂಚಕ ತನ್ನ ಚತುರ ಮಾತುಗಳಿಂದ ನಂಬಿಕೆ ಹುಟ್ಟಿಸಿ ಈ ಕೃತ್ಯ ಎಸಗಿದ್ದಾನೆ. ಇಂತಹ ವೇಷಧಾರಿಗಳು ಅಥವಾ ಅನುಮಾನಾಸ್ಪದ ವ್ಯಕ್ತಿಗಳು ನಿಮ್ಮ ಅಂಗಡಿ ಅಥವಾ ಶಾಪಿಂಗ್ ಪರಿಸರದಲ್ಲಿ ಕಂಡುಬಂದರೆ ಕೂಡಲೇ ಮಂಗಳೂರು ಪೊಲೀಸರಿಗೆ ಮಾಹಿತಿ ನೀಡುವಂತೆ ವಿನಂತಿಸಲಾಗಿದೆ.

View this post on Instagram

A post shared by News Karnataka (@newskarnataka)