ಕಜಕಿಸ್ತಾನ: ಕಜಕಿಸ್ತಾನ್‌ನ ಅಲ್ಮಾಟಿಯಲ್ಲಿರುವ ಸೈರಾನ್ ಜಲಾಶಯದಲ್ಲಿ ಹತ್ತು ವರ್ಷಗಳ ಹಿಂದೆ ಒಂದು ಶ್ವಾನ ನೀರಿನಲ್ಲಿ ಮುಳುಗುತ್ತಿತ್ತು. ಆಗ ಅಲ್ಲಿ ನೆರೆದಿದ್ದ ಒಬ್ಬರಿಗೊಬ್ಬರು ಪರಿಚಯವಿಲ್ಲದ ಅಪರಿಚಿತ ವ್ಯಕ್ತಿಗಳು, ನಾಯಿಯ ರಕ್ಷಣೆಗಾಗಿ ಪರಸ್ಪರ ಕೈಜೋಡಿಸಿ ‘ಮಾನವ ಸರಪಳಿ’ ನಿರ್ಮಿಸಿದ್ದರು.
ಪ್ರಾಣದ ಹಂಗು ತೊರೆದು ಆ ಮೂಕ ಪ್ರಾಣಿಯನ್ನು ಉಳಿಸಿದ ಆ ಮಹಾನ್ ಕ್ಷಣದ ನೆನಪಿಗಾಗಿ ಈಗ ಅಲ್ಲಿ ಒಂದು ಸುಂದರ ಶಿಲ್ಪಕಲೆಯನ್ನು ನಿರ್ಮಿಸಲಾಗಿದೆ. ಈ ಸ್ಮಾರಕವು ನಮಗೆ ಒಗ್ಗಟ್ಟು ಮತ್ತು ಕರುಣೆಯ ಮಹತ್ವವನ್ನು ಸಾರುತ್ತಿದ್ದು, ಸಣ್ಣ ಮಾನವೀಯ ಕಾರ್ಯಗಳು ಹೇಗೆ ಭರವಸೆಯ ಸಂಕೇತವಾಗಬಲ್ಲವು ಎಂಬುದಕ್ಕೆ ಸಾಕ್ಷಿಯಾಗಿದೆ.

