Showing 20 of 2247 posts • Page 45 of 113
ಸಿಎಂ ತವರಿನಲ್ಲಿ ಮೈಕ್ರೋ ಫೈನಾನ್ಸ್ ಮತ್ತೆ ಬಾಲ ಬಿಚ್ಚಿದೆ. ಸಾಲದ ಕಂತು ಕಟ್ಟಿಲ್ಲ ಎಂದು ಮನೆ ಜಪ್ತಿ ಮಾಡಿದೆ. ನಂಜನಗೂಡು ತಾಲ್ಲೂಕಿನ ಕಂದೇಗಾಲ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ.
ನಾಪತ್ತೆಯಾಗಿದ್ದ ಹುಣಸೂರು ಖ್ಯಾತ ವಕೀಲ ಶವವಾಗಿ ಪತ್ತೆಯಾಗಿದ್ದಾರೆ. ಹುಣಸೂರಿನ ಗೋಕುಲ ಬಡಾವಣೆ ನಿವಾಸಿ ವಕೀಲ ಕೆ.ರಾಜು (52) ಆತ್ಮಹತ್ಯೆಗೆ ಶರಣಾದ ವ್ಯಕ್ತಿ
ಪತಿಯ ಹತ್ಯೆಗೆ ಪತ್ನಿ ಸ್ಕೆಚ್ ಹಾಕಿದ್ದು ಕೌಟುಂಬಿಕ ಕಲಹ ಎಂದು ಅಡಿಷನಲ್ ಎಸ್ಪಿ ನಾಗೇಶ್ ತಿಳಿಸಿದ್ದಾರೆ. ಗಂಡನನ್ನ ಕೊಲೆ ಮಾಡಲು ರಾಬರಿ ತರ ಸ್ಕೆಚ್ ಹಾಕಿದ್ದಾರೆ. ತನಿಖೆ ಮಾಡುವಾಗ ಇದರ ಸತ್ಯ ತಿಳಿದು ಬಂದಿದೆ.
ಹುಣಸೂರು ಖ್ಯಾತ ವಕೀಲ ನಾಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಹುಣಸೂರಿನ ಗೋಕುಲ ಬಡಾವಣೆ ನಿವಾಸಿ ಕೆ.ರಾಜು (52) ನಾಪತ್ತೆಯಾದ ವಕೀಲ.
ಐತಿಹಾಸಿಕ ಕಾರ್ಯ ಶ್ರೀ ಸಿದ್ದೇಶ್ವರಸ್ವಾಮಿಯ ಚಿಕ್ಕಜಾತ್ರಾ ಮಹೋತ್ಸವವು ಸಡಗರ ಸಂಭ್ರಮದಿಂದ ನಡೆಯಿತು. ಕಾರ್ಯ ಶ್ರೀ ಸಿದ್ದೇಶ್ವರನ ಸನ್ನಿಧಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸುವ ಮೂಲಕ ಮಹಿಳೆಯರ ಜಾತ್ರೆಗೆ ಕಳೆ ತಂದಿದ್ದಾರೆ.
ಸೆಲ್ಫಿ ವಿಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಟಿ.ನರಸೀಪುರ ತಾಲ್ಲೂಕಿನ ತಲಕಾಡಿನಲ್ಲಿ ನಡೆದಿದೆ. ಲಕ್ಷ್ಮೀಕಾಂತ (55) ಮೃತ ವ್ಯಕ್ತಿ. ಜಮೀನು ವ್ಯಾಜ್ಯ ವಿಚಾರ ಸಹೋದರಿಯರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಡ್ಯೂಟಿ ಬಿಟ್ಟು, ಹಣ ವಸೂಲಿಗೆ ಬಾಡಿಗೆ ಕಾರಲ್ಲಿ ಪೊಲೀಸರು ಬಂದಿದ್ದು, ಸರಗೂರು ಪೊಲೀಸ್ ಪೇದೆಗಳಿಂದ ಹಣ ಸೆಟ್ಲಮೆಂಡ್ ಡೀಲ್ ನಡೆದಿದೆ.
ರೈಲು ಹಳಿ ದಾಟುವ ವೇಳೆ ರೈಲಿಗೆ ಸಿಲುಕಿ ವ್ಯಕ್ತಿ ಸಾವನ್ನಪ್ಪಿದ್ದ ಘಟನೆ ಚಾಮರಾಜಪುರಂ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಸಿಎಂ ಬದಲಾವಣೆ ಗೊಂದಲ ವಿಚಾರವಾಗಿ ಮೈಸೂರಿನಲ್ಲಿ ಅಹಿಂದ ಸಂಘಟನೆಗಳ ಒಕ್ಕೂಟದಿಂದ ಪತ್ರ ಚಳುವಳಿ ನಡೆಯಿತು. ನಗರದ ರಾಮಸ್ವಾಮಿ ವೃತ್ತದಲ್ಲಿ ಪತ್ರ ಚಳುವಳಿಯನ್ನು ಅಹಿಂದ ಸಂಘಟನೆಗಳು ನಡೆಸಿದರು
ನಂಜನಗೂಡು ನಗರದ ಕಲ್ಲಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯೊಂದರಲ್ಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕ ನೊಬ್ಬ ಮೃತಪಟ್ಟಿದ್ದು,
2011 ರಿಂದ 2023 ಮಾರ್ಚ್ ತನಕ ನಿವೃತ್ತಿಯಾದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೂ ಸುಪ್ರೀಂಕೋರ್ಟ್ ಆದೇಶದಂತೆ ಗ್ರಾಚ್ಯುಟಿ ಮೊತ್ತ
ಜ್ಯೋತಿಗೌಡನಪುರದಲ್ಲಿ ಅಂಬೇಡ್ಕರ್ ರವರ ಫ್ಲೆಕ್ಸ್ ಹಾಗೂ ಬುದ್ದನ ವಿಗ್ರಹ ವಿರೂಪಗೊಳಿಸಿದ ಪ್ರಕರಣವನ್ನು ಖಂಡಿಸಿ ನಂಜನಗೂಡಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರತಿಭಟನೆ ನಡೆಸಿದರು.
ಯಶಸ್ವಿನಿ ಯೋಜನೆ ಸಹಕಾರ ಇಲಾಖೆಯಲ್ಲಿ ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್ ಗೆ ನಂಜನಗೂಡು ತಾಲ್ಲೂಕಿನ ವರುಣ ವಿಧಾನಸಭಾ ಕ್ಷೇತ್ರದ ಬಿಳುಗಲಿ ಗ್ರಾಮದ ಕುಮಾರ್ ರವರನ್ನು ಟ್ರಸ್ಟಿಯಾಗಿ ಆಯ್ಕೆ
ನಗರದ ಟಿಎಪಿಸಿಎಂಎಸ್ಗೆ ಶಾಸಕ ದರ್ಶನ್ ಧ್ರುವನಾರಾಯಣ್ ಮತ್ತು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಬೆಂಬಲಿತರು ‘ಎ’ ತರಗತಿ ಅಭ್ಯರ್ಥಿ ಸ್ಥಾನದಲ್ಲಿ ಅವಿರೋಧವಾಗಿ ಆಯ್ಕೆ
ಮೈಸೂರಿನಲ್ಲಿ ಹುಲಿ ಹಾವಳಿ ಹೆಚ್ಚಿದ್ದು, ಹುನಗನಹಳ್ಳಿಯಲ್ಲಿ ಹುಲಿ ಪ್ರತ್ಯಕ್ಷವಾಗಿದೆ. ಹುಲಿ ಕಂಡು ಜನರು ಬೆಚ್ಚಿ ಬಿದ್ದಿದ್ದಾರೆ. ಗ್ರಾಮದ ಬಳಿ ಬಂಡೆಯ ಮೇಲೆ ಹುಲಿ ಕಾಣಿಸಿಕೊಂಡಿದೆ.
ವಿದ್ಯುತ್ ಅವಘಡದಿಂದ ತಾಯಿ, ಮಗ ಸಾವನ್ನಪ್ಪಿದ ಘಟನೆ ಹುಣಸೂರು ತಾಲ್ಲೂಕಿನ ಎಮ್ಮೆಕೊಪ್ಪಲು ಗ್ರಾಮದಲ್ಲಿ ನಡೆದಿದೆ. ತಾಯಿ ನೀಲಮ್ಮ (42) ಮಗ ಹರೀಶ್ (24) ಮೃತ ದುರ್ದೈವಿಗಳು.
ರೈತನ ಬಲಿ ಪಡೆದಿದ್ದ ಹುಲಿ ಸೆರೆಯಾದ ಘಟನೆ ಸರಗೂರು ತಾಲ್ಲೂಕಿನ ಮುಳ್ಳುರು ಬಳಿ ನಡೆದಿದೆ. ಅರಣ್ಯ ಸಿಬ್ಬಂದಿಗಳು ಯಶಸ್ವಿ ಕಾರ್ಯಾಚರಣೆ ನಡೆಸಿದರು. ಸಾಕಾನೆಗಳ ಸಹಾಯದಿಂದ ಹುಲಿ ಸೆರೆಯಾಗಿದೆ. ಯಡಿಯಾಲ ಅರಣ್ಯ ವಲಯದಲ್ಲಿ ಹುಲಿ ಸೆರೆ ಸಿಕ್ಕಿದೆ.
ಮೈಸೂರಿನಲ್ಲಿ ರಾತ್ರಿ ವೇಳೆ ಅಪರಾಧ ಕೃತ್ಯಗಳು ನಿಲ್ಲಲಿಲ್ಲ. ಪೊಲೀಸರ ನಿರಂತರ ನೈಟ್ ರೌಂಡ್ಸ್ ಇದ್ದರು ಕಳ್ಳತನಕ್ಕೆ ಯತ್ನ ನಡೆಯುತ್ತಿದೆ.
ಈಜಲು ಹೋಗಿದ್ದ ಇಬ್ಬರು ಬಾಲ್ಯ ಸ್ನೇಹಿತರು ನೀರುಪಾಲಾಗಿರುವ ಘಟನೆ ಬಸವಕಲ್ಯಾಣ ತಾಲೂಕಿನ ರಾಮ್ಪೂರವಾಡಿ ಗ್ರಾಮದಲ್ಲಿ ನಡೆದಿದೆ.
ಗುಡಿಸಲು ಮುಕ್ತ ಯೋಜನೆ ಸರ್ಕಾರದ ಮಹತ್ವದ ಯೋಜನೆ.ಯೋಜನೆ ಸಾಕಾರಗೊಳಿಸುವ ಜವಾಬ್ದಾರಿ ಕೊಳಚೆ ನಿರ್ಮೂಲನಾ ಮಂಡಳಿಗೆ ಸೇರಿದ್ದು. ನಂಜನಗೂಡಿನಲ್ಲಿ ಫಲಾನುಭವಿಗಳನ್ನ ಆಯ್ಕೆ