ನಂಜನಗೂಡು: ಜನಪ್ರತಿನಿಧಿಗಳು ಹಾಗೂ ಸರ್ಕಾರ ವಿಶ್ವಕರ್ಮ ಜನಾಂಗವನ್ನು ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಕಡೆಗಣಿಸುತ್ತಿದೆ ಎಂದು ವಿಶ್ವಕರ್ಮ ಸಂಘದ ತಾಲ್ಲೂಕು ಅಧ್ಯಕ್ಷ ಚಂದ್ರು ಆಕ್ರೋಶ ವ್ಯಕ್ತಪಡಿಸಿದರು.
ನಂಜನಗೂಡಿನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ತಾಲ್ಲೂಕು ಆಡಳಿತ ಭವನದಲ್ಲಿ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದ ಜನರು ಯಾವಾಗಲೂ ಶಾಂತಿ ಪ್ರಿಯರಾಗಿದ್ದಾರೆ. ಶಾಂತಿ ಮಂತ್ರದ ಮೂಲಕ ಹಕ್ಕುಗಳನ್ನ ಕೇಳಿದರೆ ತಾಲ್ಲೂಕು ಆಡಳಿತ ನೀಡುತ್ತಿಲ್ಲ.
ಇದು ಹೀಗೆ ಮುಂದುವರೆದರೆ ಹೋರಾಟದ ಮೂಲಕ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಸಮಾಜದ ಜನರು ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದಾರೆ. ಯಾವುದೇ ಸ್ಥಾನಮಾನಗಳು ಸರಿಯಾದ ರೀತಿಯಲ್ಲಿ ದೊರಕುತ್ತಿಲ್ಲ ಎಂದರು.
ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರು ಹಾಗೂ ತಾಲ್ಲೂಕು ದಂಡಾಧಿಕಾರಿ ಗೈರು ಹಾಜರಿಯಲ್ಲಿ ಕಾರ್ಯಕ್ರಮ ನಡೆಯುತ್ತಿರುವುದಕ್ಕೆ ಸಮಾಜದ ಜನರು ಬೇಸರ ವ್ಯಕ್ತಪಡಿಸಿದರು. ಜೊತೆಗೆ ಕಾರ್ಯಕ್ರಮಕ್ಕೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಬಂದಿಲ್ಲ. ದೊಡ್ಡ ದೊಡ್ಡ ಸಮಾಜದ ಜಯಂತಿ ಕಾರ್ಯಕ್ರಮಗಳಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೋಗುತ್ತಾರೆ ಆದರೆ ನಮ್ಮಂತ ಕಡಿಮೆ ಜನಸಂಖ್ಯೆ ಇರುವ ಜಯಂತಿ ಕಾರ್ಯಕ್ರಮಗಳಿಗೆ ಯಾರು ಬರುವುದಿಲ್ಲ.
ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಸಾವಿರಾರು ರೂಗಳನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಅರ್ಥಪೂರ್ಣವಾಗಿ ಜಯಂತಿಯನ್ನು ಆಚರಿಸದೆ ವಿನಾಕಾರಣ ಸರ್ಕಾರದ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾರ್ಯಕ್ರಮದಲ್ಲಿ ಅಧಿಕಾರಿಗಳಾದ ರಾಜು ಮಹದೇವ ಪ್ರಸಾದ್ ವಿರೂಪಾಕ್ಷ ಮುಖಂಡರಾದ ಚಂದ್ರು ಎಚ್ ಬಿ ಪುಟ್ಟಣ್ಣ, ವಿನಯ್, ರಮೇಶ್, ಗುರುಸ್ವಾಮಿ,ಅಳಗಂಚಿ ನಂಜುಂಡ ಚಾರ್, ಗೋಳೂರು ಸ್ನೇಕ್ ಬಸವರಾಜ್,ಹೆಡತಲೆ ನಾಗಣ್ಣ,ಶ್ಯಾಮ್ ಸುಂದರ್,ಅನಿಲ್ ಕುಮಾರ್, ಶೇಖರಣ್ಣ, ಪ್ರಕಾಶ್,ಸಿಂಧುವಳ್ಳಿ ಗಿರೀಶ್, ನಂಜುಂಡಸ್ವಾಮಿ, ಪ್ರಭುಸ್ವಾಮಿ ಸೇರಿದಂತೆ ವಿಶ್ವಕರ್ಮ ಸಮಾಜದ ಮುಖಂಡರು ಹಾಜರಿದ್ದರು.

