ನಂಜನಗೂಡು: ಹೋಟೆಲ್ ಹೆಸರಿನಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಸಿದ್ದತೆ ಮಾಡುತ್ತಿರುವ ಮಾಲೀಕನ ವಿರುದ್ದ ಗ್ರಾಮಸ್ಥರು ಕಿಡಿಕಾರಿದ್ದಾರೆ. ನಂಜನಗೂಡಿನ ರಾಷ್ಟ್ರೀಯ ಹೆದ್ದಾರಿಯ ಏಲಚಗೆರೆ ಗ್ರಾಮದ ಸಮೀಪ ಸಂಗೀತಾ ಹೋಟೆಲ್ ಹೆಸರಲ್ಲಿ ಬಾರ್ ತೆರೆಯುವ ಸಿದ್ದತೆ ನಡೆಯುತ್ತಿದೆ.

ಈ ಬಗ್ಗೆ ಮಾಹಿತಿ ಪಡೆದ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಇದೇ ಸ್ಥಳದಲ್ಲಿ ಬಾರ್ ಆರಂಭವಾಗಿತ್ತು. ಗ್ರಾಮಸ್ಥರು ಪ್ರತಿಭಟನೆ ಹಾದಿ ಹಿಡಿದು ಸರ್ಕಾರದ ಕಣ್ಣು ತೆರೆಸಿದ್ದರು.

ಅಬಕಾರಿ ಇಲಾಖೆ ಬಾರ್ ಸ್ಥಗಿತಗೊಳಿಸಿ ಗ್ರಾಮಸ್ಥರ ಮನವಿಗೆ ತಲೆ ಬಾಗುವಂತಾಗಿತ್ತು. ಇದೀಗ ಮತ್ತೆ ಇದೇ ಸ್ಥಳದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಆರಂಭಿಸಲು ಸಿದ್ದತೆ ನಡೆಯುತ್ತಿದೆ. ಈಗಾಗಲೇ ಅಬಕಾರಿ ಇಲಾಖೆಗೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಹೀಗಿದ್ದೂ ಬಾರ್ ಓಪನ್ ಆದ್ರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ವಾರ್ನಿಂಗ್ ನೀಡಿದ್ದಾರೆ.