ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2025 ಹಿನ್ನಲೆ ಅರಮನೆಯಲ್ಲಿ ಇಂದು ಸಿಂಹಾಸನ ಜೋಡಣೆ ಕಾರ್ಯ ನೆರವೇರಿದೆ. ಜೋಡಣೆ ಹಿನ್ನಲೆ ಅರಮನೆಗೆ ಅರ್ಧ ದಿನ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ರಾಜವಂಶ್ಥರ ಧಾರ್ಮಿಕ ಕಾರ್ಯ ಖಾಸಗಿ ದರ್ಬಾರ್ ಗಾಗಿ ಇಂದು ಸಿಂಹಾಸನ ಜೋಡಣೆ ಕಾರ್ಯ ನೆರವೇರಿದೆ. ಸ್ಟ್ರಾಂಗ್ ರೂಂನಿಂದ ಬಿಗಿ ಭದ್ರತೆಯೊಂದಿಗೆ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಸಮ್ಮುಖದಲ್ಲಿ ಸಿಂಹಾಸನ ಜೋಡಣೆ ಕಾರ್ಯ ನಡೆದಿದೆ.

ಬೆ.8.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅರಮನೆಗೆ ಪ್ರವಾಸಿಗರ ಪ್ರವೇಶ ನಿರ್ಬಂಧ ವಿಧಿಸಲಾಗಿತ್ತು. ಚಿನ್ನದ ಸಿಂಹಾಸನದ ಬಿಡಿಭಾಗ ಹಾಗೂ ಬೆಳ್ಳಿಯ ಭದ್ರಾಸನದ ಬಿಡಿ ಭಾಗಗಳನ್ನು ದರ್ಬಾರ್ ಹಾಲ್ ಗೆ ತಂದು ಜೋಡಣೆ ಮಾಡಲಾಗಿದೆ. ಬೆಳ್ಳಿ ಭದ್ರಾಸನವನ್ನು ಕನ್ನಡಿ ತೊಟ್ಟಿಯಲ್ಲಿ ಜೋಡಣೆ ಮಾಡಲಾಗಿದೆ.

ಸಿಂಹಾಸನ ಜೋಡಣೆ ಕಾರ್ಯ ನಡೆಯುವ ವೇಳೆ ದರ್ಬಾಲ್ ಹಾಲ್ ಸೇರಿದಂತೆ ವಿವಿಧೆಡೆ ಅಳವಡಿಸಿರುವ ಸಿಸಿ ಕ್ಯಾಮರಾಗೆ ಪರದೆ ಹಾಕಲಾಗಿದೆ. ಸಿಂಹಾಸನ ಜೋಡಣೆ ಕಾರ್ಯದ ನಿಮಿತ್ತ ಬೆಳ್ಳಗ್ಗೆಯೇ ದರ್ಬಾರ್ ಹಾಲ್ ನಲ್ಲಿ ಗಣಪತಿ, ಚಾಮುಂಡಿ ಪೂಜೆ ಸೇರಿಂದತೆ ಹೋಮ ಪೂಜೆ ಮುಗಿದ ಬಳಿಕ ಸಿಂಹಾಸನ ಬಿಡಿಭಾಗವನ್ನು ದರ್ಬಾರ್ ಹಾಲ್ ಗೆ ತಂದು ಸಿಂಹಾಸನ ಜೋಡಣೆ ಮಾಡಲಾಗಿದೆ.