ಮೈಸೂರು: ಕಾಡಿನಿಂದ ನಾಡಿಗೆ ಬಂದ ಕಾಡಾನೆಗಳು ನಂಜನಗೂಡು ತಾಲ್ಲೂಕಿನ ನೆಲ್ಲಿತಾಳಪುರ ಗ್ರಾಮದ ಮಹದೇವಯ್ಯ ಎಂಬುವರ ಜಮೀನಿಗೆ ಲಗ್ಗೆ ಇಟ್ಟ ಕಾಡಾನೆಗಳು ಬೆಳ್ಳಗೆಯಾದರೂ ಜಮೀನಿನಲ್ಲೇ ಬೀಡುಬಿಟ್ಟು ಸುಮಾರು 4 ಎಕ್ಕರೆ ಜಮೀನಿನಲ್ಲಿ ಬೆಳೆದಿದ್ದ ಮುಸುಕ್ಕಿನ ಜೋಳದ ಫಸಲುಗಳನ್ನು ಸಂಪೂರ್ಣವಾಗಿ ನಾಶಮಾಡಿವೆ.
ಕಾಡಾನೆಗಳ ಹಿಂಡನ್ನು ಕಂಡ ಸಾರ್ವಜನಿಕರು ಗಾಬರಿಯಾಗಿ ಅರಣ್ಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆನೆಗಳನ್ನು ಕಾಡಿಗೆ ಓಡಿಸಲು ಪ್ರಯತ್ನಿಸುತ್ತಿದ್ದಾರೆ.ಈಗಾಗಲೇ ರೈತರು ತಮ್ಮ ಜಮೀನುಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ.
ಸಾಲ ಸೊಲ ಮಾಡಿ ಬೆಳೆದ ಫಸಲು ಕಾಡಾನೆಗಳ ಪಾಲಾಗುತ್ತಿದ್ದು ಸಾಲವನ್ನು ತೀರಿಸುವುದಾದರೂ ಹೇಗೆ? ಕಾಡಾಂಚಿನ ಗ್ರಾಮದಲ್ಲಿ ಕಷ್ಟ ಪಟ್ಟು ಬೆಳೆಯುತ್ತೆವೆ ಕಟಾವಿಗೆ ಬರುವ ಸಂದರ್ಭದಲ್ಲಿ ಕಾಡಾನೆಗಳು ನಾಶ ಮಾಡುತ್ತಿವೆ ಇದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ರೈತ ಮಹದೇವಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ರೈತರು ಬೆಳೆದ ಫಸಲುಗಳನ್ನು ಕಟ್ಟಾವು ಮಾಡುವ ಹಂತಕ್ಕೆ ತಲುಪಿದೆ ಹಾಡಾಗಲ್ಲೇ ಆನೆಗಳ ಆಟಹಾಸದಿಂದ ರೈತರು ತಮ್ಮ ಜಮೀನಿಗೆ ತೆರಳಿ ಕೆಲಸ ಮಾಡಲು ಭಯಬೀತರಾಗಿದ್ದಾರೆ.ಕಾಡಾನೆಗಳು ರೈತರ ಜಮೀನಿಗೆ ನುಗ್ಗುವುದನ್ನು ತಪ್ಪಿಸಿ ರೈತರಿಗೆ ಕೆಲಸ ಮಾಡಲು ಅರಣ್ಯ ಅಧಿಕಾರಿಗಳು ಮುಂದಾಗಬೇಕಿದೆ ಎಂದು ಗ್ರಾಮಸ್ಥರ ಒತ್ತಾಯವಾಗಿದೆ.

