News Karnataka Kannada
Tuesday, April 23 2024
Cricket
ಕಲಬುರಗಿ

ಸೈಬರ್‌ ಅಪರಾಧ ಜನರ ಊಹೆಗೂ ನಿಲುಕದ ವಂಚನೆ

ಎಲೆಕ್ಟ್ರಾನಿಕ್‌ ಸಾಧನಗಳ ಬಳಕೆ ಹೆಚ್ಚಿದಂತೆ ಸೈಬರ್‌ ಕ್ರೈಂ ಪ್ರಕರಣಗಳೂ ಹೆಚ್ಚುತ್ತಿವೆ. ಬರೀ ಒಟಿಪಿ ಹೇಳಿದರೆ ಮಾತ್ರವೇ, ವಂಚನೆ ನಡೆಯುತ್ತೆ ಎಂದೇನಿಲ್ಲ. ಜನರ ಊಹೆಗೂ ಮೀರಿ ವಂಚನೆಗಳು ನಡೆಯಬಲ್ಲವು' ಎಂದು ನಗರ ಪೊಲೀಸ್‌ ಕಮಿಷನರೇಟ್‌ನ ಸೈಬರ್‌ ಕ್ರೈಂ ವಿಭಾಗದ ಸಿಬ್ಬಂದಿ ಅಂಬರೀಷ್‌ ಪಾಟೀಲ ಎಚ್ಚರಿಸಿದರು.
Photo Credit : News Kannada

ಕಲಬುರಗಿ:ಎಲೆಕ್ಟ್ರಾನಿಕ್‌ ಸಾಧನಗಳ ಬಳಕೆ ಹೆಚ್ಚಿದಂತೆ ಸೈಬರ್‌ ಕ್ರೈಂ ಪ್ರಕರಣಗಳೂ ಹೆಚ್ಚುತ್ತಿವೆ. ಬರೀ ಒಟಿಪಿ ಹೇಳಿದರೆ ಮಾತ್ರವೇ, ವಂಚನೆ ನಡೆಯುತ್ತೆ ಎಂದೇನಿಲ್ಲ. ಜನರ ಊಹೆಗೂ ಮೀರಿ ವಂಚನೆಗಳು ನಡೆಯಬಲ್ಲವು’ ಎಂದು ನಗರ ಪೊಲೀಸ್‌ ಕಮಿಷನರೇಟ್‌ನ ಸೈಬರ್‌ ಕ್ರೈಂ ವಿಭಾಗದ ಸಿಬ್ಬಂದಿ ಅಂಬರೀಷ್‌ ಪಾಟೀಲ ಎಚ್ಚರಿಸಿದರು.

ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸಾಮಾಜಿಕ ಜಾಲತಾಣಗಳಲ್ಲಿ ಪರಿಣತಿ: ಸುರಕ್ಷಿತ ಮತ್ತು ಜವಾಬ್ದಾರಿಯುತ ಬಳಕೆ ಮಾರ್ಗದರ್ಶಿ’ ವಿಷಯ ಕುರಿತು ಅವರು ಮಾತನಾಡಿದರು.

‘ಬರೀ ಮೊಬೈಲ್‌ ಸಂಖ್ಯೆ ಸಿಕ್ಕರೆ ಸಾಕು, ವಂಚಕರು ಆ ವ್ಯಕ್ತಿಗಳ ಮೇಲೆ ನಿಗಾ ಇಡಬಲ್ಲರು. ಅವರ ಚುಟುವಟಿಕೆಗಳನ್ನು ಆಧರಿಸಿ ವಂಚನೆಗೆ ಸಂಚು ರೂಪಿಸಬಲ್ಲರು. ಹೀಗಾಗಿ ಎಲ್ಲಿಯೇ ಮೊಬೈಲ್‌ ಕೊಡಬೇಕಾದರೂ ಎಚ್ಚರವಹಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಸೈಬರ್‌ ಅಪರಾಧಗಳಲ್ಲಿ ಆರ್ಥಿಕ ವಂಚನೆ ಹಾಗೂ ಆರ್ಥಿಕೇತರ ವಂಚನೆಗಳೆಂಬ ವಿಧಗಳಿವೆ. ಇತ್ತೀಚೆಗೆ ಆರ್ಥಿಕೇತರ ಅಪರಾಧಗಳು ಹೆಚ್ಚು ವರದಿಯಾಗುತ್ತಿವೆ. ಅಂದರೆ, ಸಾಮಾಜಿಕ ಜಾಲತಾಣಗಳು, ಹ್ಯಾ‌ಕಿಂಗ್‌, ಆನ್‌ಲೈನ್‌ ದೌರ್ಜನ್ಯ, ಸೈಬರ್‌ ಸ್ಟಾಲ್ಕಿಂಗ್‌ಆನ್‌ಲೈನ್‌ನಲ್ಲಿ ಹಿಂಬಾಲಿಸುವಿಕೆ), ಗುರುತು ಕಳವು (ಒಬ್ಬರ ದಾಖಲೆ ಬಳಸಿ, ಅವರ ಹೆಸರಲ್ಲಿ ವಂಚಿಸುವುದು) ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿವೆ’ ಎಂದು ವಿವರಿಸಿದರು.

‘ಮೊಬೈಲ್‌ ಫೋನ್‌ ಜನರ ಬದುಕಿನ ಭಾಗವೇ ಆಗಿದೆ. ಸಾಮಾಜಿಕ ಜಾಲತಾಣಗಳೂ ಅಷ್ಟೇ. ಆದರೆ, ಅವುಗಳ ಸುರಕ್ಷಿತ ಬಳಕೆಗೆ ಅಗತ್ಯ. ಅಗತ್ಯಕ್ಕೆ ತಕ್ಕಷ್ಟೇ ಮೊಬೈಲ್‌ ಬಳಕೆ ಮಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಗೋಪ್ಯತೆ ಕಾಯ್ದುಕೊಳ್ಳುವುದು. ಟು-ಸ್ಟೆಪ್‌ ವೆರಿಫಿಕೇಷನ್‌ ಪಾಸ್‌ವರ್ಡ್‌ ನೀತಿ ಪಾಲನೆ, ಆಮಿಷಗಳಿಗೆ ಒಳಗಾಗಿ ಲಿಂಕ್‌ ಮೇಲೆ ಕ್ಲಿಕ್ಕಿಸದಿರುವುದು, ಒಟಿಪಿ ಹಂಚಿಕೊಳ್ಳದಿರುವುದು, ಅನುಮಾನಾಸ್ಪದ ಕ್ಯುಆರ್‌ ಸ್ಕ್ಯಾನ್‌ ಮಾಡದಿರುವುದೆಲ್ಲ ವಂಚನೆಯ ಸಾಧ್ಯತೆಯಿಂದ ಸುರಕ್ಷಿತವಾಗಿರುವ ಮಾರ್ಗ’ ಎಂದು ಅಂಬರೀಷ್‌ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು