Bengaluru 23°C
Ad

ಸರ್ಕಾರ ಪೆನ್‌ಡ್ರೈವ್ ಪ್ರಕರಣದ ಸೂತ್ರಧಾರನನ್ನು ರಕ್ಷಣೆ ಮಾಡುತ್ತಿದೆ: ವಕೀಲ ಗೋಪಾಲಗೌಡ

ಸರ್ಕಾರ ಪೆನ್‌ಡ್ರೈವ್ ಪ್ರಕರಣದ ಸೂತ್ರಧಾರನನ್ನು ರಕ್ಷಣೆ ಮಾಡುತ್ತಿದೆ ಎಂದು ವಕೀಲ ಗೋಪಾಲಗೌಡ ಗಂಭೀರ ಆರೋಪ ಮಾಡಿದ್ದಾರೆ.

ಹಾಸನ: ಸರ್ಕಾರ ಪೆನ್‌ಡ್ರೈವ್ ಪ್ರಕರಣದ ಸೂತ್ರಧಾರನನ್ನು ರಕ್ಷಣೆ ಮಾಡುತ್ತಿದೆ ಎಂದು ವಕೀಲ ಗೋಪಾಲಗೌಡ ಗಂಭೀರ ಆರೋಪ ಮಾಡಿದ್ದಾರೆ.

Ad
300x250 2

ಜೆಡಿಎಸ್  ಕಾನೂನು ವಿಭಾಗದಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ವೇಳೆ ಕೆ.ಆರ್. ನಗರದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಭಾಗಿಯಾಗದ ರೇವಣ್ಣ  ಅವರನ್ನು ಬಂಧಿಸಲಾಗಿತ್ತು.

ಅವರ ಹೆಸರು ದೂರಿನಲ್ಲಿ ಎಲ್ಲಿಯೂ ಇರಲಿಲ್ಲ. ಅವರ ಜಾಮೀನು ಅರ್ಜಿ ವಜಾ ಆದ 10 ನಿಮಿಷಕ್ಕೆ ಬಂಧಿಸಲಾಗಿತ್ತು. ರಾಜ್ಯ ಸರ್ಕಾರ ರಾಜಕೀಯವಾಗಿ ರೇವಣ್ಣ ಅವರಿಗೆ ಹಿನ್ನಡೆ ಉಂಟು ಮಾಡಲು ಈ ರೀತಿ ಷಡ್ಯಂತ್ರ ರೂಪಿಸಿದೆ ಎಂದು ಅವರು ಆರೋಪಿಸಿದ್ದಾರೆ.

ರೇವಣ್ಣ ಅವರ ಮೇಲೆ ಕೈಗೊಂಡ ಕಾನೂನು ಕ್ರಮ ಬೇರೆಯವರ ಮೇಲೂ ಕೈಗೊಳ್ಳಬೇಕಲ್ಲವೇ? ಜಾಮೀನು ನೀಡಬಹುದಾದ ಕೇಸ್‌ನಲ್ಲಿ ರೇವಣ್ಣ ಬಂಧನ ಆಗ್ತಾರೆ, ಆದರೆ ಹಾಸನದ ಹೆಣ್ಣುಮಕ್ಕಳ ಮರ್ಯಾದೆ ತೆಗೆದವರ ಬಂಧನ ಯಾಕೆ ಆಗಿಲ್ಲ? ಅದು ಜಾಮೀನು ರಹಿತ ಕೇಸ್ ಇರುವ ಪುಟ್ಟಿ ಆಲಿಯಾಸ್ ಪುಟ್ಟರಾಜ್,

ಕಾರ್ತಿಕ್ ಮತ್ತು ಶರತ್ ಅವರ ಬಂಧನ ಯಾಕಾಗಿಲ್ಲ? ನ್ಯಾಯಾಲಯ ಜಾಮೀನು ಅರ್ಜಿ ವಜಾ ಮಾಡಿದೆ ಎಂದರೆ ಅವರ ಬಂಧನ ಅಗತ್ಯವಿದೆ ಎಂದಲ್ಲವೇ? ಇದರ ನಡುವೆ ಇಬ್ಬರು ಆರೋಪಿಗಳು ಚುನಾವಣೆ ಗೆದ್ದ ಸಂಭ್ರಮದಲ್ಲಿ ಭಾಗಿ ಆಗ್ತಾರೆ. ತನಿಖಾಧಿಕಾರಿ ಎದುರೇ ಅವರು ಸಂಭ್ರಮಾಚರಣೆ ಮಾಡ್ತಾರೆ ಎಂದರೆ ಏನರ್ಥ ಎಂದು ಅವರು ಕಿಡಿಕಾರಿದ್ದಾರೆ.

ಮೂರನೇ ಆರೋಪಿ ಶರತ್‌ಗೌಡ ಮನೆಗೆ ಪೊಲೀಸ್ ಭದ್ರತೆ ಕೊಡಲಾಗಿದೆ. ಕಾಂಗ್ರೆಸ್‌ನ ಕೆಲವು ನಾಯಕರು ಪೆನ್‌ಡ್ರೈವ್ ಹಂಚಿಕೆಯ ಮೂಲ ಹೇಳಿ ಹೋದರು. ಇದರ ಹಿಂದೆ ಮಾಜಿ ಶಾಸಕರು ಇದ್ದಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ನಾಯಕರು ಹೇಳಿದ ಮಾಜಿ ಶಾಸಕರನ್ನು ಕೂಡ ಎಸ್‌ಐಟಿ ತನಿಖೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಎಸ್‌ಐಟಿ ಕೇವಲ ಬೋಗಸ್ ತನಿಖೆ ನಡೆಸುತ್ತಿದೆ. ಹೊಳೆನರಸೀಪುರ ಮನೆಯಲ್ಲಿ ಮಹಜರು ಮಾಡಿದ್ದಾಗ, ಹೊರಗಿನಿಂದ ಬಟ್ಟೆಯನ್ನು ತಂದಿಟ್ಟರು. ತಲೆ ಕೂದಲನ್ನು ಕೂಡ ಅವರು ತಂದಿಟ್ಟು ಮಹಜರು ಮಾಡಿದ್ದಾರೆ. ಇದನ್ನ ಪ್ರಶ್ನೆ ಮಾಡಿದ್ದಕ್ಕೆ ಆಗ ಅದನ್ನು ಮಹಜರಿನಲ್ಲಿ ರೆಕಾರ್ಡ್ ಮಾಡಲಿಲ್ಲ. ಅವರ ಈ ಪ್ರಕ್ರಿಯೆಗೆ ಸ್ವತಃ ಸಂತ್ರಸ್ತರು ಅವಕಾಶ ಕೊಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

Ad
Ad
Nk Channel Final 21 09 2023
Ad