Ad

ಕೊನೆಗೂ ತರುಣ್ ಸುಧೀರ್ ಮದುವೆ ಸುದ್ದಿ ನಿಜವಾಯ್ತು​; ಸೊಸೆ ಬಗ್ಗೆ ಏನಂದ್ರು ಅತ್ತೆ

Sonal

ಬೆಂಗಳೂರು: ಇತ್ತೀಚೆಗೆಷ್ಟೇ ಸಾಮಾಜಿಕ ಜಾಲತಾಣದಲ್ಲಿ ನಿರ್ದೇಶಕ ತರುಣ್ ಸುಧೀರ್ ಅವರು ನಟಿ ಸೋನಾಲ್ ಮಂಥೆರೊ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಅನ್ನೋ ಗುಸು ಗುಸು ಮಾತುಗಳು ಸಿಕ್ಕಾಪಟ್ಟೆ ವೈರಲ್​ ಆಗಿತ್ತು.

Ad
300x250 2

ಇದೀಗ ಅದೇ ಸುದ್ದಿ ನಿಜವಾಗಿದೆ. ತರುಣ್ ಸುಧೀರ್ ಹಾಗೂ ಸೋನಾಲ್ ಮಂಥೆರೊ ಮದುವೆ ಫಿಕ್ಸ್ ಆಗಿದೆ. ಹೌದು, ಕಾಟೇರ ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಮದುವೆ ವಿಚಾರವನ್ನು ತಾಯಿ ಮಾಲತಿ ಸುಧೀರ್ ಅವರು ಸ್ಪಷ್ಟಪಡಿಸಿದ್ದಾರೆ. ತರುಣ್ ಹಾಗೂ ಸೋನಲ್ ಮದುವೆ ಆಗುತ್ತಿರುವುದು ನಿಜ. ಆದ್ರೆ, ಮದುವೆ ದಿನಾಂಕ ಯಾವಾಗ ಅನ್ನೋದು ಫೈನಲ್ ಆಗಬೇಕಿದೆ ಎಂದು ತಾಯಿ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಗುಸು ಗುಸು ಮಾತುಗಳಿಗೆ ತೆರೆ ಬಿದ್ದಿದೆ.

ಮಂಗಳೂರು ಮೂಲದ ಸೋನಾಲ್ ಮಂಥೆರೊ ಮೊದಲು ತುಳು ಚಿತ್ರಗಳಲ್ಲಿ ಅಭಿನಯಿಸಿ ಆನಂತರ ‘ಅಭಿಸಾರಿಕೆ’ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಪಂಚತಂತ್ರ, ಡೆಮೊ ಪೀಸ್, ಗರಡಿ, ಶುಗರ್ ಫ್ಯಾಕ್ಟರಿ ಸೇರಿದಂತೆ ಹಲವು ಸಿನಿಮಾದಲ್ಲಿ ಸೋನಾಲ್ ಮಂಥೆರೊ ಅಭಿನಯಿಸಿದ್ದಾರೆ.

 

 

Ad
Ad
Nk Channel Final 21 09 2023
Ad